ಎಸ್‌ಟಿಜಿ ಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸ

ಪಾಂಡವಪುರ ತಾಲೂಕಿನ ಎಸ್‌ಟಿಜಿ ಶಿಕ್ಷಣ ಸಂಸ್ಥೆಯ ಭೌತಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಇಸ್ರೋ ಸ್ಥಾಪಿತ ಹಾಸನದ ಎಂಸಿಎಫ್ ಉಪಗ್ರಹ ಉಡಾವಣೆ ಕೇಂದ್ರಕ್ಕೆ ಭೇಟಿ ನೀಡಿದರು.
ಪಾಂಡವಪುರ ತಾಲೂಕಿನ ಎಸ್‌ಟಿಜಿ ಶಿಕ್ಷಣ ಸಂಸ್ಥೆಯ ಭೌತಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಇಸ್ರೋ ಸ್ಥಾಪಿತ ಹಾಸನದ ಎಂಸಿಎಫ್ ಉಪಗ್ರಹ ಉಡಾವಣೆ ಕೇಂದ್ರಕ್ಕೆ ಭೇಟಿ ನೀಡಿದರು.
Published on

ಪಾಂಡವಪುರ: ತಾಲೂಕಿನ ಚಿನಕುರಳಿಯ ಎಸ್‌ಟಿಜಿ ಪ್ರಥಮ ದರ್ಜೆ ಕಾಲೇಜಿನ ಭೌತಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸ ಸಮಿತಿಯ ಸಹಯೋಗದೊಂದಿಗೆ ಹಾಸನ ಜಿಲ್ಲೆಯ ಗೋವಿಂದಪುರದ ಮಾಸ್ಟರ್ ಕಂಟ್ರೋಲ್ ಫೆಸಿಲಿಟಿ ಕೇಂದ್ರಕ್ಕೆ ಒಂದು ದಿನದ ಶೈಕ್ಷಣಿಕ ಪ್ರವಾಸ ತೆರಳಿ ಉಪಗ್ರಹಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

ಗ್ರಾಮೀಣ ಭಾಗದ ವಿಜ್ಞಾನ ವಿದ್ಯಾರ್ಥಿಗಳು ಬಾಹ್ಯಾಕಾಶಕ್ಕೆ ಉಡಾವಣೆಯಾದ ಉಪಗ್ರಹಗಳ ನಿಯಂತ್ರಣ ಮತ್ತು ಅವುಗಳ ಕಾರ್ಯಚಟುವಟಿಕೆ ಬಗ್ಗೆ ಪರದೆ ಮೇಲೆ ವೀಕ್ಷಿಸುವ ಜತೆಗೆ ಆ ಕ್ಷಣದಲ್ಲಿ ಸೆರೆಹಿಡಿದ ಭೂಮಂಡಲದ ಚಿತ್ರವನ್ನು ನೋಡುವ ಅವಕಾಶ ಪಡೆದುಕೊಂಡರು.

ಭೋಪಾಲ್‌ನಲ್ಲಿ 2005ರಲ್ಲಿ ಎಂಸಿಎಫ್ ಸ್ಥಾಪನೆಯಾಗುವವರೆಗೂ ಇಸ್ರೋದ ಏಕೈಕ ಮಾಸ್ಟರ್ ಕಂಟ್ರೋಲ್ ಫೆಸಿಲಿಟಿ ಕೇಂದ್ರವಾಗಿದ್ದ ಹಾಸನದ ಎಂಸಿಎಫ್ ಇಸ್ರೋ ಸ್ಥಾಪಿತ ಸಂಸ್ಥೆಯಾಗಿದ್ದು, ಇಸ್ರೋ ಉಡಾಯಿಸುವ ಭೂಸ್ಥಿರ ಮತ್ತು ಭೂಸಿಂಕ್ರೋನಸ್ ಉಪಗ್ರಹಗಳನ್ನು ಮೇಲ್ವಿಚಾರಣೆ ಮಾಡುವ ಮತ್ತು ನಿಯಂತ್ರಿಯಸುವ ಜವಾಬ್ದಾರಿ ಹೊಂದಿದೆ. ಅಲ್ಲಿನ ಸಿಬ್ಬಂದಿ ಜಗನ್ನಾಥ್ ಹಾಗೂ ಶಿವಕುಮಾರ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಎಂಸಿಎಫ್ ಕಚೇರಿಯ ಕಾರ್ಯಚಟುವಟಿಕೆ, ರಾಕೆಟ್‌ಗಳ ಅಭಿವೃದ್ಧಿ ಅದರ ಕಾರ್ಯಚಟುವಟಿಕೆ ಬಗ್ಗೆ ತಿಳಿಸಿ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು.

ಈ ವೇಳೆ ಕಾಲೇಜಿನ ಪ್ರಾಂಶುಪಾಲರಾದ ಡಾ.ನಿಶಾಂತ್ ಎ.ನಾಯ್ಡು, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆ ಎಂ.ಭವ್ಯ, ಎನ್‌ಎಸ್‌ಎಸ್ ಅಧಿಕಾರಿಗಳಾದ ಬಿ.ಎಸ್.ಕುಮಾರ ಇತರ ಪ್ರಾಧ್ಯಾಪಕರು ಈ ಶೈಕ್ಷಣಿಕ ಪ್ರವಾಸದಲ್ಲಿ ವಿದ್ಯಾರ್ಥಿಗಳೊಂದಿಗೆ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net