ತೂಬಗೆರೆಲ್ಲಿ ಸ್ಟೇರಿಂಗ್ ತುಂಡಾಗಿ ಹಳ್ಳಕ್ಕೆ ನುಗ್ಗಿದ ಸಾರಿಗೆ ಸಂಸ್ಥೆ ಬಸ್

dabasapete-
Published on

ತೂಬಗೆರೆ: ಹೋಬಳಿ ತಿರುಮಗೊಂಡನಹಳ್ಳಿ ಬಳಿ ತೂಬಗೆರೆ-ದೊಡ್ಡಬಳ್ಳಾಪುರ ಮಾರ್ಗವಾಗಿ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್ ಮಾರ್ಗ ಮಧ್ಯದಲ್ಲಿ ಸ್ಟೇರಿಂಗ್ ಕಟ್ಟಾಗಿ ಬಸ್ ಹಳ್ಳಕ್ಕೆ ನುಗ್ಗಿದೆ. ಅದೃಷ್ಟವಶಾತ್ ಪ್ರಾಣಹಾನಿಯಾಗಿಲ್ಲ.

ಮಂಗಳವಾರ ಬೆಳಗ್ಗೆ ಹೋಬಳಿ ಕೇಂದ್ರದಿಂದ ದೊಡ್ಡಬಳ್ಳಾಪುರಕ್ಕೆ ಹೊರಟ ಸಾರಿಗೆ ಬಸ್ ತಿರುಮಗೊಂಡನಹಳ್ಳಿ ಬಳಿ ಸ್ಟೇರಿಂಗ್ ಕಟ್ಟಾಗಿದೆ.

ಈ ವೇಳೆ ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್, ರಸ್ತೆ ಬದಿಯಲ್ಲಿ ಕಟ್ಟಿದ್ದ ಹಸುವಿಗೆ ಗುದ್ದಿದ್ದು, ನಂತರ ಕೊಟ್ಟಿಗೆ ಅಪ್ಪಳಿಸಿ ಹಳ್ಳಕ್ಕೆ ನುಗ್ಗಿದೆ.

ಬಸ್‌ನಲ್ಲಿ ಪ್ರಯಾಣಿಕರನ್ನೊಳಗೊಂಡು ಸೇರಿ 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದರು. ಯಾರಿಗೂ ಸಣ್ಣಪುಟ್ಟ ಗಾಯ ಸಹ ಆಗದೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ, ಆದರೆ ಹಸುವಿಗೆ ಗಾಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net