ಜಿಲ್ಲೆಯಲ್ಲಿ ಶೀಘ್ರ ಆಸ್ಪತ್ರೆ ಮೇಲ್ದರ್ಜೆಗೆ, ವೈದ್ಯರ ನೇಮಕಕ್ಕೆ ಕ್ರಮ-ಗುಂಡುರಾವ್

MINISTER
MINISTER
Published on

ಮಾನ್ವಿ  ಸಮುದಾಯ ಆಸ್ಪತ್ರೆ ಮೇಲ್ದರ್ಜೆ ಸೇರಿದಂತೆ ಸಿಬ್ಬಂದಿ ನೇಮಕ ಪ್ರಕ್ರೀಯೆ ಶೀಘ್ರ ಪೂರ್ಣಗೊಳಿಸಲಾಗುತ್ತದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ ಗುಂಡೂರಾವ್ ಹೇಳಿದರು.

ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ,ಆರೋಗ್ಯ ಶಿಬಿರ ಜನರ ಆರೋಗ್ಯ ತಿಳಿಯಲು ಉತ್ತಮವಾಗಿದೆ. ಜನರಲ್ಲಿ ಆರೋಗ್ಯ ಜಾಗೃತಿ ಮೂಡಿಸಲು ಅನುಕೂಲ.

ಆಶಾ ಕಿರಣ.ಪುನಿತ ಹೃದಯ ಯೋಜನೆ, ಡಯಾಲಿಸೆಸ್ ನಂತರ ಮಹತ್ವದ ಯೋಜನೆ ಜಾರಿಯಲ್ಲಿವೆ.ಸಮುದಾಯ ಆಸ್ಪತ್ರೆ ಮೇಲ್ದರ್ಜೆಗೆರಿಸುವ ಕೆಲಸ ಮಾಡಲಾಗಿದೆ.ಗುಲ್ಬರ್ಗ ಸಂಪುಟ ಸಭೆಯಲ್ಲಿ 880 ಕೋಟಿ ಕಾಮಗಾರಿಗೆ ಅನುಮೋದನೆ ಸಿಕ್ಕಿದೆ. 400 ಕೋಟಿ ಕಾಮಗಾರಿ‌ ಆರಂಭಿಸಲಾಗಿದೆ. ಹೆಣ್ಣು ಮಕ್ಕಳಲ್ಲಿ ಕಾಣಿಸಿಕೊಳ್ಳುವ ಗರ್ಭಕೋಶ ರೋಗ ನಿಯಂತ್ರಣಕ್ಕೆ ಹೆಚ್.ಬಿ ವಿ ಲಸಿಕೆ ನೀಡಲಾಗುತ್ತಿದೆ.

ಹೊಸ ತಾಲೂಕುಗಳಲ್ಲ ಸಮುದಾಯ ಆರೋಗ್ಯ ಕೇಂದ್ರ ಮಾಡಬೇಕು. 11 ತಾಲೂಕುಗಳಿಗೆ ಸಮುದಾಯ ಆರೋಗ್ಯ ಕೇಂದ್ರ ಮಾಡಲಾಗುತ್ತದೆ. ಇಲಾಖೆಯಿಂದ ಸಿಬ್ಬಂದಿ ನೇಮಕ‌ ಮಾಡಲಾಗುತ್ತದೆ. 900 ಜನರ ಫಾರ್ಮಸಿಸ್ಟ್ ಬೇಕಿದೆ. ಪ್ರಾಥಮಿಕ ಪಟ್ಟಿ ಪ್ತಕಟಿಸಲಾಗಿದೆ. ಮೂರು ತಿಂಗಳಲ್ಲಿ 1600 ಸಿಬ್ಬಂದಿ ನೀಡಲಾಗುತ್ತದೆ.

ಕಿದ್ವಾಯಿ ಆಸ್ಪತ್ರೆ ನಿರ್ಮಾಣಕ್ಕೆ 52 ಕೋಟಿ ನೀಡಲಾಗುತ್ತದೆ. ರಾಜ್ಯ ಆಯವ್ಯಯ ಸಮಗ್ರ ಅಭಿವೃದ್ಧಿ ಪರವಾಗಿದೆ ಒತ್ತು ನೀಡಿದೆ.ಗ್ಯಾರಂಟಿಯೊಂದಿಗೆ ‌ ಉತ್ತಮ ಯೋಜನೆ ಮಾಡಲಾಗಿದೆ. ಜಿಲ್ಲಾ ಆಸ್ಪತ್ರೆಗೆಗಳನ್ನು ವೈದ್ಯಕೀಯ ಆಸ್ಪತ್ರೆ ಪಡೆಯಲಾಗಿದೆ. ವೈದ್ಯಕೀಯ ಶಿಕ್ಷಣ ಇಲಾಖೆ ಆಸ್ಪತ್ರೆ ನಿರ್ಮಿಸಿ ಜಿಲ್ಲಾ ಆಸ್ಪತ್ರೆ ಮರಳಿ ನೀಡಬೇಕು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಪೌಷ್ಟಿಕ ಆಹಾರ ಕೊಡು ಕೆಲಸ ಮಾಡಬೇಕಾಗಿದೆ.

ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿ ತಡೆಬೇಕು.ಈ ಬಗ್ಗೆ ಜನರಲ್ಲಿ ಜಾಗೃತಿ ಅಗತ್ಯ. ತಾಲೂಕಿನ ಆಸ್ಪತ್ರೆ 24 ಗಂಟೆ ನಡೆಯಬೇಕು.

ಈ ಸಂದರ್ಭದಲ್ಲಿ ಸಚಿವರಾದ ಎನ್.ಎಸ್. ಬೋಸರಾಜು,ಸಂಸದರಾದ ಜಿ.ಕುಮಾರ ನಾಯಕ,

ಶಾಸಕರಾದ ಹಂಪಯ್ಯ ಸಾಹುಕಾರ್,ಮಹ್ಮದ್ ಶಾಲಂ ಸೇರಿ ಅನೇಕರ ಉಪಸ್ಥಿತರಿದ್ದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net