ಅಗತ್ಯ ಸೌಕರ್ಯ ಒದಗಿಸಲು ಕ್ರಮ

ಕಂಪ್ಲಿ ತಾಲೂಕಿನ ದೇವಸಮುದ್ರದಲ್ಲಿ ಎಸ್ಸಿ ಕಾಲನಿ ನಿವಾಸಿಗಳೊಂದಿಗೆ ಶಾಸಕ ಜೆ.ಎನ್.ಗಣೇಶ್ ಚರ್ಚಿಸಿದರು. ಪ್ರಮುಖರಾದ ಎಚ್.ಗುಂಡಪ್ಪ, ನಾಯಕರ ವೆಂಕೋಬಾ ಇತರರಿದ್ದರು.
ಕಂಪ್ಲಿ ತಾಲೂಕಿನ ದೇವಸಮುದ್ರದಲ್ಲಿ ಎಸ್ಸಿ ಕಾಲನಿ ನಿವಾಸಿಗಳೊಂದಿಗೆ ಶಾಸಕ ಜೆ.ಎನ್.ಗಣೇಶ್ ಚರ್ಚಿಸಿದರು. ಪ್ರಮುಖರಾದ ಎಚ್.ಗುಂಡಪ್ಪ, ನಾಯಕರ ವೆಂಕೋಬಾ ಇತರರಿದ್ದರು.
Published on

ಕಂಪ್ಲಿ: ದೇವಸಮುದ್ರ ಗ್ರಾಮದ ಎಸ್ಸಿ ಕಾಲನಿಯಲ್ಲಿ ಮಂಗಳವಾರ ಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನದಲ್ಲಿ 9 ಲಕ್ಷ ರೂ. ವೆಚ್ಚದ ಶುದ್ಧ ಕುಡಿವ ನೀರಿನ ಘಟಕ ಕಾಮಗಾರಿಗೆ ಶಾಸಕ ಜೆ.ಎನ್.ಗಣೇಶ್ ಚಾಲನೆ ನೀಡಿದರು.

ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಎಚ್.ಗುಂಡಪ್ಪ ಮಾತನಾಡಿ, ಎಸ್ಸಿ ಕಾಲನಿಗೆ ಒಳ ರಸ್ತೆ, ನೆಲ್ಲೂಡಿ ಮಸಾರಿತನಕ ರಸ್ತೆ, ಎಸ್ಸಿ ಸಮುದಾಯ ಭವನ ನಿರ್ಮಿಸಬೇಕು. ಹುಲಿಗೆಮ್ಮ ಗುಡಿ ಮುಂದೆ ನೆರಳಿನ ವ್ಯವಸ್ಥೆ ಮಾಡಿಬೇಕು. ಮಹಿಳಾ ಶೌಚಗೃಹ ನಿರ್ಮಾಣ ಕಾಮಗಾರಿ ನೆನೆಗುದಿಗೆ ಬಿದ್ದಿದ್ದು, ಕಾಲನಿಯ ಮಹಿಳೆಯರು ಬಯಲನ್ನೇ ಆಶ್ರಯಿಸಿದ್ದಾರೆ. ಆದ್ದರಿಂದ ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸಿ ಎಂದು ಒತ್ತಾಯಿಸಿದರು. ಶಾಸಕ ಜೆ.ಎನ್.ಗಣೇಶ್ ಪ್ರತಿಕ್ರಿಯಿಸಿ ಎಸ್ಸಿ ಕಾಲನಿಗೆ ಅಗತ್ಯ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಪ್ರಮುಖರಾದ ಹುಲಿಗೆಮ್ಮ, ಪಾರ್ವತಿ, ಜಯಲಕ್ಷ್ಮೀ ಶಾಂತಮ್ಮ, ರೇಣುಕಮ್ಮ, ಪಾರ್ವತಿ, ಚಲುವಾದಿ ಹೊನ್ನೂರಮ್ಮ, ನಾಯಕರ ಹೊನ್ನೂರಪ್ಪ, ಕೆ.ಬಸವರಾಜ, ನಾಯಕ ವೆಂಕೋಬಾ, ಕುರಿ ನಾಗೇಂದ್ರ, ಕುಬೇರಾ, ಸಿ.ಆರ್.ಹನುಮಂತ, ಹೊನ್ನೂರಪ್ಪ, ಗುರುಶಾಂತಸ್ವಾಮಿ, ಸೂಗೂರು ಶೇಖಪ್ಪ, ಕೋರಿ ಚನ್ನಬಸವ, ಚಂದ್ರಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net