ತ್ಯಾಮಗೊಂಡ್ಲು ಆಸ್ಪತ್ರೆಗೆ ಸೌಲಭ್ಯ ಒದಗಿಸಲು ಕ್ರಮ

Untitled-2
ತ್ಯಾಮಗೊಂಡ್ಲು ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಚಿವ ದಿನೇಶ್​ ಗುಂಡೂರಾವ್​ ಭೇಟಿ ನೀಡಿ, ಪರಿಶೀಲಿಸಿದರು. ಶಾಸಕ ಎನ್​.ಶ್ರೀನಿವಾಸ್​, ಡಿಎಚ್​ಒ ಡಾ.ಲಕ್ಕಕೃಷ್ಣಾರೆಡ್ಡಿ, ಟಿಎಚ್​ಒ ಡಾ.ರವೀಂದ್ರ, ಆರ್​ಸಿಎಚ್​ ಅಧಿಕಾರಿ ಡಾ.ಸೀಮಾ, ಜಿಲ್ಲಾ ಸರ್ವೇಕ್ಷಣ ಅಧಿಕಾರಿ ಡಾ.ಹೇಮಾವತಿ, ಜಿಪಂ ಉಪ ಕಾರ್ಯದರ್ಶಿ ರಮೇಶ್​ ಇದ್ದರು.
Published on

ತ್ಯಾಮಗೊಂಡ್ಲು : ಸಮುದಾಯ ಆರೋಗ್ಯ ಕೇಂದ್ರಗಳಿಗೆ ಆದ್ಯತೆ ಮೇಲೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್​ ಹೇಳಿದರು.

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮಂಗಳವಾರ ಭೇಟಿ ನೀಡಿ, ಕೇಂದ್ರದಲ್ಲಿನ ಕ್ಷ&ಕಿರಣ, ಪ್ರಯೋಗಾಲಯ, ದಂತ ಚಿಕಿತ್ಸೆ ಟಕ ಸೇರಿ ವಿವಿಧ ವಿಭಾಗಗಳನ್ನು ಪರಿಶೀಲಿಸಿ ಮಾತನಾಡಿದರು. ಆಸ್ಪತ್ರೆಯಲ್ಲಿನ ಹಿರಿಯ ವೈದ್ಯಾಧಿಕಾರಿಗಳ ಕೊರತೆ, ಪ್ರಯೋಗಾಲಯ ವಿಭಾಗದ ವಿಸ್ತರಣೆಗೆ ಹೆಚ್ಚುವರಿ ಕಟ್ಟಡ ನಿರ್ಮಾಣ, ಖಾಲಿ ಇರುವ 8 ಡಿ ಗ್ರೂಪ್​ ನೌಕರರ ಭರ್ತಿ, ರಾತ್ರಿಯ ಹೊತ್ತು ಮಹಿಳಾ ಸಿಬ್ಬಂದಿ ಸುರಕ್ಷತೆಗೆ ರಕ್ಷಣಾ ಸಿಬ್ಬಂದಿ, ಹಳೇ ಕ್ಷ&ಕಿರಣ ಯಂತ್ರದ ಬದಲು ಡಿಜಿಟಲ್​ ಯಂತ್ರ, ಮರಣೋತ್ತರ ಪರೀೆಗೆ ಸಹಾಯಕರ ನೇಮಕ ಸೇರಿ ಇತರ ಮೂರು ಕೊಠಡಿಗಳ ನಿರ್ಮಾಣಕ್ಕೆ ಸಚಿವ ದಿನೇಶ್​ ಗುಂಡೂರಾವ್​ ಅವರಿಗೆ ವೈದ್ಯಾಧಿಕಾರಿ ಡಾ.ಕೆ.ಬಿ. ವೀರೇಂದ್ರಕುಮಾರ್​ ಮನವಿ ಸಲ್ಲಿಸಿದರು. ಆಸ್ಪತ್ರೆಯ ಜಾಗದಲ್ಲಿ ವೈದ್ಯರ, ದಾದಿಯರ ವಸತಿ ಗೃಹಗಳ ಸಂಕೀರ್ಣ ನಿರ್ಮಿಸಿದರೆ ಸಕಾಲಕ್ಕೆ ಆರೋಗ್ಯ ಸೇವೆ ಒದಗಿಸಲು ಅನುಕೂಲವಾಗುತ್ತದೆ ಎಂದು ಸಚಿವರ ಗಮನಕ್ಕೆ ತಂದರು.

ಜಿಲ್ಲಾ ಕಾಂಗ್ರೆಸ್​ ಅಧ್ಯಕ್ಷ ಸಿ.ಆರ್​.ಗೌಡ್ರು, ಎನ್​ಡಿಎ ಸದಸ್ಯ ಪ್ರಕಾಶ್​ಬಾಬು, ಆರೋಗ್ಯ ರಾ ಸಮಿತಿ ಸದಸ್ಯ ಟಿ.ಎನ್​.ಪ್ರದಿಪ್​, ನೆಲಮಂಗಲ ನಗರಸಭೆ ಅಧ್ಯಕ್ಷ ಎನ್​.ಗಣೇಶ್​, ಮಾಜಿ ಅಧ್ಯೆ ಪೂರ್ಣಿಮಾ ಸುಗ್ಗರಾಜು, ಮುಖಂಡರಾದ ವಸೀಂ, ಸಾದತ್​ ಉಲ್ಲಾ ಅಖಿಲ್​, ವಾಸುದೇವ್​, ಕೃಷ್ಣಮೂರ್ತಿ, ಚಿಕ್ಕತಿಮ್ಮಯ್ಯ, ಟಿ.ಎನ್​.ಹನುಮಂತರಾಜು, ಕೊಡಿಗೆಹಳ್ಳಿ ಗ್ರಾಪಂ ಅಧ್ಯಕ್ಷ ಅಪ್ಪಾಜಿ, ಆಸ್ಪತ್ರೆ ಸಿಬ್ಬಂದಿ ಇದ್ದರು.

ಆಂಬುಲೆನ್ಸ್​ ವಾಹನ ಒದಗಿಸಿ : ಕಳೆದ 11 ತಿಂಗಳಿಂದ ಆಂಬುಲೆನ್ಸ್​ ಸೇವೆಯಲ್ಲಿ ವ್ಯತ್ಯವಾಗಿದ್ದು, ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಗಳಿಗೆ ಹಲವು ಬಾರಿ ದೂರು ನೀಡಿದರೂ ಇದುವರೆಗೆ ಸರಿಪಡಿಸಿಲ್ಲ. ಹಾಗಾಗಿ ಆಸ್ಪತ್ರೆಗೆ ಕೂಡಲೇ 108 ಆಂಬುಲೆನ್ಸ್​ ವಾಹನ ಒದಗಿಸಬೇಕು ಎಂದು ಗ್ರಾಮಸ್ಥರು ಸಚಿವರಿಗೆ ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net