39,263 ಮಕ್ಕಳಿಗೆ ಜಂತು ಹುಳು ನಿವರಣಾ ಮಾತ್ರೆ ವಿತರಣೆಗೆ ಕ್ರಮ

39,263 ಮಕ್ಕಳಿಗೆ ಜಂತು ಹುಳು ನಿವರಣಾ ಮಾತ್ರೆ ವಿತರಣೆಗೆ ಕ್ರಮ
Published on

ಅರಕಲಗೂಡು: ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನದ ಪ್ರಯುಕ್ತ ತಾಲೂಕಿನಲ್ಲಿ 1 ರಿಂದ 19 ವರ್ಷ ವಯೋಮಿತಿಯ 39,263 ಮಕ್ಕಳಿಗೆ ಜಂತು ಹುಳು ನಿವರಣಾ ಮಾತ್ರೆ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಪುಷ್ಪಲತಾ ತಿಳಿಸಿದರು.

ಪಟ್ಟಣದ ಪೇಟೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಜಂತುಹುಳು ನಿವರಣಾ ಮಾತ್ರೆ ವಿತರಣಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಂತು ಹುಳು ಸಮಸ್ಯೆ ಮಕ್ಕಳ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಲಿದೆ, ಇದನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ ಮಾತ್ರೆ ವಿತರಣಾ ಕಾರ್ಯ ಹಮ್ಮಿಕೊಳ್ಳಲಾಗಿದೆ. ತಾಲೂಕಿನಾದ್ಯಂತ ಎಲ್ಲ ಶಾಲಾ, ಕಾಲೇಜು ಅಂಗನವಾಡಿಗಳಲ್ಲಿ ಮಾತ್ರೆ ವಿತರಣಾ ಕಾರ್ಯ ನಡೆದಿದೆ. ಈ ದಿನ ಶಾಲೆಗೆ ಗೈರು ಹಾಜರಾದ ಮಕ್ಕಳಿಗೆ ಡಿ 16 ರಂದು ಮಾತ್ರೆ ವಿತರಣೆ ನಡೆಸಲಾಗುವುದು. ಅಂಗನವಾಡಿಗೆ ದಾಖಲಾಗದ ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಅಂಗನವಾಡಿ ಕೇಂದ್ರಗಳ ಮೂಲಕ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ನಿಂಗಯ್ಯ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಕೆ.ಟಿ. ಪರಮೇಶ್, ಆರೋಗ್ಯ ನಿರೀಕ್ಷಣಾಧಿಕಾರಿ ಕೆ. ಎನ್. ಚಂದ್ರೇಗೌಡ, ಪ್ರಭಾರ ಮುಖ್ಯಶಿಕ್ಷಕಿ ಬೇಬಿ, ಆರೋಗ್ಯ ಇಲಾಖೆಯ ಜಯರಾಮ್, ಜುಬೇದಾ, ಕವಿತಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net