

ಮಸ್ಕಿ: ಮೊಹರಂನಲ್ಲಿ ಹಲಗೆಯ ನಾದದಕ್ಕೆ ತಕ್ಕಂತೆ ಕೋಲಾಟ ಆಡುತ್ತ ಹೆಜ್ಜೆ ಹಾಕಿ ಕುಣಿಯುವುದು ಸಂಪ್ರದಾಯ. ಈ ಪೈಕಿ ಹಗ್ಗದ ಎಣಿಕೆಯ ಆಟ ವಿಶಿಷ್ಟವಾಗಿದೆ.
ಹಾಲಾಪುರ ಗ್ರಾಮದಲ್ಲಿ ಕರಿಯಪ್ಪ ತಾತ ದೇವಸ್ಥಾನದ ಹತ್ತಿರ ಮೊಹರಂ ಆಚರಣೆ ಪ್ರಯುಕ್ತ ಗ್ರಾಮಸ್ಥರು ಹಗ್ಗ ಕಟ್ಟಿದ್ದರು. ಬಳಗಾನೂರಿನ ಮಹರ್ಷಿ ವಾಲ್ಮೀಕಿ ಹೆಜ್ಜೆಮೇಳ ತಂಡ ಹಗ್ಗದ ಎಣಿಕೆ ಬಿಚ್ಚುವ ಮೂಲಕ ಕಲಾ ನೈಪುಣ್ಯ ಪ್ರದರ್ಶಿಸಿತು. ತಂಡದ ನಾಯಕರಾದ ಮಹಾದೇವ ನಾಯಕ, ರಮೇಶನಾಯಕ, ಹಲಗೆ ವಾದಕ ಕಾಟೇಶ ನಾಯಕ ಸಹಿತ 15 ಯುವಕರ ತಂಡ 15 ನಿಮಿಷದಲ್ಲಿ ಹೆಜ್ಜೆ ಹಾಕುತ್ತಾ ಹಗ್ಗದ ಎಣಿಕೆ ಬಿಚ್ಚಿದರು.