ಸ್ಟೇರಿಂಗ್ ರಾಡ್ ತುಂಡಾಗಿ ಹಳ್ಳಕ್ಕೆ ನುಗ್ಗಿದ ಬಸ್

IMG-20241018-WA0049
Published on

ಮಾಗಡಿ.  ಸ್ಟೇರಿಂಗ್ ರಾಡ್ ಕಟ್ಟಾಗಿ ಹಳ್ಳಕೆ ಉರುಳಿ ಕೆಎಸ್ ಆರ್ ಟಿಸಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಸುಮಾರು  23 ಮಂದಿಗೆ ಸಣ್ಣ,ಪುಟ್ಟಗಾಯವಾಗಿರುವ ಘಟನೆ ತಾಲೂಕಿನ ಅತ್ತಿಂಗೆರೆ ಕ್ರಾಸ್ ಬಳಿ ಶುಕ್ರವಾರ ಬೆಳಗ್ಗೆ ನಡೆದಿದೆ.

ರಾಮನಗರದಿಂದ ಮಾಗಡಿಗೆ ಬರುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ಅತ್ತಿಂಗೆರೆ ಗ್ರಾಮದ ತಿರುವಿನಲ್ಲಿ ಸ್ಟೇರಿಂಗ್ ರಾಡ್ ಕಟ್ಟಾಗಿ ಬಲಭಾಗದ ಹಳ್ಳಕೆ ಉರುಳಿದ ರಬಸಕ್ಕೆ ಬಸ್ ನಲ್ಲಿ ಕಂಡಾಕ್ಟರ್ ನರೇಂದ್ರ, ಡ್ರೈವರ್ ಕಾಂತರಾಜು, ಮಾಡಬಾಳ್ ಗ್ರಾಮಾಧಿಕಾರಿ ಶಾಂತಮ್ಮ, ಟಿಎಚ್ಒ ಕಚೇರಿಯ ಕಂಪ್ಯೂಟರ್ ಅಪರೇಟರ್ ಲಕ್ಷ್ಮಿ ಬೆಸ್ಕಾಂ ನ ಶೈಲಾ ಸೇರಿದಂತೆ 23 ಕ್ಕೂ   ಹೆಚ್ಚು ಮಂದಿಗೆ ತಲೆ,ಕೈಕಾಲು,ಸೋಂಟದ ಭಾಗಗಳಿಗೆ ಗಾಯವಾಗಿದ್ದು  ಗಾಯಾಳುಗಳನ್ನು  ಸಾರ್ವಜನಿಕ ಸರಕಾರಿ ಆಸ್ಪತ್ರೆ ಹಾಗೂ ವೀರೆಗೌಡನದೊಡ್ಡಿ ಪ್ರಾಥಮಿಕ ಆರೋಗ್ಯಕೇಂದ್ರಕ್ಕೆ ದಾಖಲಿಸಿ  ಚಿಕಿತ್ಸೆ ಕೊಡಿಸಲಾಗಿದ್ದು 

 ತೀವ್ರತರವಾಗಿ  ಗಾಯವಾದ  ಸುಮಾರು 5 ಮಂದಿಯನ್ನು ಬೆಂಗಳೂರಿನ ವಿಕ್ಟೋರಿಯಾ, ನಿಮಾನ್ಸ್ ಅಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆಗಾಗಿ ದಾಖಲಿಸಲಾಗಿದೆ. ಯಾವುದೇಪ್ರಾಣಾಪಯ ಸಂಭವಿಸಿಲ್ಲ.

 ಸ್ಟೇರಿಂಗ್ ರಾಡ್ ಕಟ್ಟಾಗಿ   ಎಡಭಾಗದಿಂದ ಬಸ್ ಬಲಭಾಗಕ್ಕೆ ತಿರುಗುತ್ತಿದ್ದ ವೇಳೆ ಎದುರುಗಡೆ ಯಾವುದೇ ವಾಹನ ಬಂದಿದ್ದರೆ ಸಾಕಷ್ಟು ಅನಾಹುತ ಸಂಭವಿಸುತಿತ್ತು ಎನ್ನಲಾಗಿದೆ.

ಬಸ್ ಹಳ್ಳಕ್ಕೆ ಉರುಳಿದ ನ್ನು ಕಂಡ ಸ್ಥಳಿಯರು ಕೂಡಲೇ ಬಸ್ ನಲ್ಲಿದ್ದ ಪ್ರಯಾಣಿಕರನ್ನು,ಗಾಯಾಳುಗಳುಗಳನ್ನು ಹೊರಗೆ ತೆಗೆದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಮಾನವಿಯತೆ ಮರೆದಿದ್ದಾರೆ.

   ಸ್ಥಳಕ್ಕೆ  ಅಡಿಷನ್ ಎಸ್ ಪಿ ರಾಮಚಂದ್ರಯ್ಯ, ಸುರೇಶ್ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

    ಬಹುತೇಕ ಕೆಎಸ್ ಆರ್ ಟಿಸಿ ಬಸ್ ಗಳು ತೀರ ಹಳೆಯದ್ದಾಗಿದ್ದು  ಹಾಗೂ ಸಮರ್ಪಕವಾಗಿ ನಿರ್ವಹಣೆ ಮಾಡಿ ಬಸ್ ಗಳನ್ನು ರೂಟ್ ಗಳಿಗೆ ಕಳುಹಿಸದ  ಕಾರಣ ಈ ಘಟನೆ ನಡೆದಿದೆ ಎಂದು ಸ್ಥಳಿಯರು ಅಕ್ರೋಶ ವ್ಯಕ್ತಪಡಿಸಿದ್ದಾರೆ.

 ಬಸ್ ಗಳಲ್ಲಿ ಸಾಕಷ್ಟು ಲೋಪದೋಷಗಳಿದ್ದು ಸರಿಪಡಿಸಿ ಕೊಡುವಂತೆ ಡ್ರೈವರ್‌ ಗಳು ಸಂಭಂದ ಪಟ್ಟ ಅಧಿಕಾರಿಗಳ ಗಮನಕ್ಕೆ ತಂದರು ಬಸ್ ಇರುವ ಬಸ್ ಗಳನ್ನೆ ಚಲಾಯಿಸುವಂತೆ ಒತ್ತಡ ಏರುವುದರಿಂದ ಅಧಿಕಾರಿಗಳ ನಿರ್ಲಕ್ಷ್ಯ ಕ್ಕೆ ಪ್ರಯಾಣಿಕರು, ಬಸ್ ಚಾಲಕರು, ನಿರ್ವಾಹಕರು ತಮ್ಮ ಜೀವನವನ್ನೆ ಕಳೆದುಕೊಳ್ಳುವಂತಹ ಪರಿಸ್ಥಿತಿ ಸಾರಿಗೆ ಸಚಿವರ ಜಿಲ್ಲೆಯಲ್ಲೆನಿರ್ಮಾಣ ವಾಗುತ್ತಿರುವುದು ಬೇಸರದ ಸಂಗತಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net