

ಮಂಗಳೂರು : ನಗರದ ಸಂತ ಅಲೋಶಿಯಸ್ ಪರಿಗಣಿತ ವಿ.ವಿ.ಯಲ್ಲಿ ಎಂ.ಎಸ್ಸಿ. ಗಣಿತಶಾಸ್ತ್ರದ ವಿದ್ಯಾರ್ಥಿ ಸ್ಟೆಬಿನ್ ಶಿಬು ಅವರು ‘ ಮೈಕೆಲಿಸ್-ಮೆಂಟೆನ್ ಕೈನೆಟಿಕ್ಸ್‌ನ ಏಕೀಕರಣ ಮತ್ತು ಪಾಂಟ್ರಿಯಾಜಿನ್‌ನ ಗರಿಷ್ಠ ತತ್ವವನ್ನು ಅತ್ಯುತ್ತಮ ಕೀಮೋಥೆರಪಿ ವೇಳಾಪಟ್ಟಿಗಾಗಿ ಸಂಯೋಜಿಸುವುದು ಶೀರ್ಷಿಕೆಯ ಸ್ನಾತಕೋತ್ತರ ಸಂಶೋಧನೆಗಾಗಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್-25ಯಿಂದ
ಐಬಿಆರ್ ಅಚೀವರ್ ಪ್ರಶಸ್ತಿ ಪಡೆದಿದ್ದಾರೆ. ಅವರ ಸಂಶೋಧನೆಯನ್ನು ಭಾರತದಲ್ಲಿ ಗಣಿತ ಆಂಕೊಲಾಜಿಯ ಉದಯೋನ್ಮುಖ ಕ್ಷೇತ್ರಕ್ಕೆ ಪ್ರಮುಖ ಕೊಡುಗೆ ಎಂದು ಗುರುತಿಸಲಾಗಿದೆ.
ಈ ಸಂಶೋಧನೆಯು ಕ್ಯಾನ್ಸರ್ ಚಿಕಿತ್ಸೆಯ ಕ್ಷೇತ್ರದಲ್ಲಿ ಭಾರತದ ಮೊದಲ ಗಣಿತ ಮಾಡೆಲಿಂಗ್ ಆಧಾರಿತ ಅಧ್ಯಯನವಾಗಿದ್ದು, ಕೀಮೋಥೆರಪಿ ಕಾರ್ಯವಿಧಾನಗಳ ದಕ್ಷತೆಯನ್ನು ಸುಧಾರಿಸಲು ನಿಯಂತ್ರಣ ಸಿದ್ಧಾಂತ ಮತ್ತು ಗಣಿತ ಮಾದರಿಗಳನ್ನು ಬಳಸುತ್ತದೆ.
ಅಲೋಶಿಯ ವಿವಿಯ ಸ್ನಾತಕೋತ್ತರ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥೆ ಅನುಪ್ರಿಯಾ ಶೆಟ್ಟಿ ಮತ್ತು ಕು. ಸ್ವೀಟಿ ಬೇಸಿಲ್ ಅವರು
ಮಾರ್ಗದರ್ಶನದಲ್ಲಿ ಅಧ್ಯಯನ ಮಾಡಿದ್ದರು. ಕೇರಳದ ಕೊಲ್ಲಂ ಮೂಲದ ಸ್ಟೆಬಿನ್ ಶಿಬು ಕುಮಟಾದ ಡಾ. ಎ.ವಿ. ಬಾಳಿಗಾ ಕಾಲೇಜಿನಲ್ಲಿ ಗಣಿತಶಾಸ್ತ್ರದಲ್ಲಿ ಪದವಿ ಪೂರೈಸಿದ್ದರು. ಶಿಬು ಮ್ಯಾಥ್ಯೂ- ಸುನಿ ಶಿಬು ದಂಪತಿ ಪುತ್ರ.