ಭೂಗಳ್ಳರನ್ನು ರಕ್ಷಿಸಲು ದಾಖಲೆಗಳ ಕಳುವು

28 HPT 5
Published on

ನಗರಸಭೆ ಕಡತ ನಾಪತ್ತೆ ತನಿಖೆಗೆ ಸಿಪಿಐ(ಎಂ) ಒತ್ತಾಯ

ಹೊಸಪೇಟೆ: ನಗರಸಭೆಯ ಕಡತಗಳನ್ನು ಅಪಹರಣ ಪ್ರಕರಣವನ್ನು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಸಿಪಿಐ(ಎಂ) ಪಕ್ಷದ ಕಾರ್ಯಕರ್ತರು ಸೋಮವಾರ ನಗರಸಭೆ ಎದುರು ಪ್ರತಿಭಟನೆ ನಡೆಸಿದರು.

ನಗರಸಭೆಯ ರೆಕಾರ್ಡ್ ರೂಮ್ ಸಿಬ್ಬಂದಿ ಡಿ.ಎಚ್.ಸುರೇಶ್ ಆಗಸ್ಟ್ ೧೦ ರಂದು ಸಿಪಿಎಂ ಪಕ್ಷಕ್ಕ ಪತ್ರದ ಮೂಲಕ ದೂರು ಸಲ್ಲಿಸಿದ್ದಾರೆ. ನಗರ ಸಭೆಯಲ್ಲಿದ್ದ ೪೯ ಕ್ಕೂ ಹೆಚ್ಚು ಕಡತಗಳನ್ನು ಹಾಡುಹಗಲೇ ಮಾಜಿ ಸಚಿವ ಆನಂದ ಸಂಗ್ ಅವರ ಸಂಬAಧಿ ಸಂದೀಪ್ ಸಿಂಗ್ ಕದ್ದೋಯ್ದಿದ್ದಾರೆ. ಈ ವೇಳೆ ಕಚೇರಿಯಲ್ಲಿರುವ ಸಿಸಿಟಿವಿಗಳನ್ನು ಬಂದ್ ಮಾಡಿಸಲಾಗಿತ್ತು. ಅದಕ್ಕೆ ನಗರಸಭೆಯ ಹಾಲಿ ಮತ್ತು ಮಾಜಿ ಸದಸ್ಯರು, ಹಿಂದಿನ ಪೌರಾಯುಕ್ತರು ಕೂಡಾ ಸಾಥ್ ನಿಡಿದ್ದರು ಎಂದು ಪತ್ರದಲ್ಲಿ ಗಂಭೀರವಾಗಿ ಆಪಾದಿಸಿದ್ದಾರೆ.

ಪತ್ರ ಬರೆದ ನೌಕರ ಮತ್ತು ದಾಖಲೆಗಳು ಕಳ್ಳತನವಾಗಿರುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದ ಪೌರಾಯುಕ್ತ ಬಿ.ಟಿ.ಬಂಡಿ ವಡ್ಡರ್ ಅವರಿಂದ ವ್ಯತಿರಿಕ್ತ ಹೇಳಿಕೆ ಕೊಡಿಸುತ್ತಿದ್ದಾರೆ. ಮಾಧ್ಯಮ ಗೋಷ್ಠಿಯಲ್ಲಿ ಯಾವುದೇ ದಾಖಲೆಗಳನ್ನು ತೋರಿಸಿಲ್ಲ ಎಂಬುದಾಗಿಯೂ ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ಅಲ್ಲದೇ, ನಗರಸಭೆ ಮತ್ತು ಸರಕಾರದ ಒಡೆತನದ ಭೂ ಒತ್ತುವರಿ ಆರೋಪಕ್ಕೆ ಸಂಬAಧಿಸಿ ಮಾಜಿ ಸಚಿವ ಆನಂದ ಸಿಂಗ್, ನಗರಸಭೆಯ ಹಾಲಿ ಮತ್ತು ಮಾಜಿ ಸದಸ್ಯರ ವಿರುದ್ಧ ವಿವಿಧ ಹಂತದ ನ್ಯಾಯಾಲಯಗಳಲ್ಲಿ ವಿಚಾರಣೆ ಬಾಕಿ ಇವೆ. ಆದ್ದರಿಂದ ಕಡತ ನಾಪತ್ತೆ ಪ್ರಕರಣವನ್ನು ಮುಚ್ಚಿ ಹಾಕುವ ಹುನ್ನಾರ ನಡೆದಿದೆ ಎಂದು ಆರೋಪಿಸಿದರು.
ಸರ್ಕಾರಿ ಕಡತಗಳನ್ನು ಕದ್ದೊಯ್ಯುವುದು ಕ್ರಿಮಿನಲ್ ಅಪರಾಧವಾಗಿದೆ. ದಾಖಲೆಗಳು ನಾಪತ್ತೆಯಾಗಿದ್ದರಿಂದ ಸಾರ್ವಜನಿಕರಲ್ಲೂ ಆತಂಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಒಡಿ, ಎಸ್‌ಐಟಿ ಅಥವಾ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು. ಆರೋಪಿತ ಸ್ಥಾನದಲ್ಲಿರುವ ಎಲ್ಲರನ್ನೂ ವಿಚಾರಣೆಗೆ ಒಳಪಡಿಸಿದಾಗ ಮಾತ್ರ ಸತ್ಯಾಂಶ ಹೊರ ಬರುತ್ತದೆ ಎಂದು ಪ್ರತಿಭಟನಾಕರರು ಮನವಿ ಮಾಡಿದರು.

ಈ ಕುರಿತು ಪೌರಾಯುಕ್ತ ಬಿ.ಟಿ.ಬಂಡಿವಡ್ಡರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಪಕ್ಷದ ಮುಖಂಡರಾದ ಭಾಸ್ಕರ್ ರೆಡ್ಡಿ, ಜಂಬಯ್ಯನಾಯಕ, ಬಿಸಾಟಿ ತಾಯಾಪ್ಪ, ಯಲ್ಲಲಿಂಗ, ಗೋಪಾಲ್, ಬಸವರಾಜ್, ವಿ.ಸ್ವಾಮಿ, ಈಡಿಗರ ಮಂಜುನಾಥ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net