ಮಹಿಳೆಯ ಸರ ಕಳವು

crime
Published on

ಕೊಳ್ಳೇಗಾಲ: ಪಟ್ಟಣದ ನಿಲ್ದಾಣದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಹತ್ತುವ ವೇಳೆ ಮಹಿಳೆಯೊಬ್ಬರ 42 ಗ್ರಾಂ ತೂಕದ ಮಾಂಗಲ್ಯ ಸರ ಕಳವಾಗಿರುವ ಸಂಬಂಧ ಮಂಗಳವಾರ ಪಟ್ಟಣ ಪೊಲೀಸ್ ಪ್ರಕರಣ ದಾಖಲಾಗಿದೆ. ಪಾಳ್ಯ ಗ್ರಾಮದ ಲತಾ(58) ಸರ ಕಳೆದುಕೊಂಡ ಮಹಿಳೆ. ಮಾ.1 ರಂದು ಮೈಸೂರಿಗೆ ತೆರಳಲು ಬಸ್ ನಿಲ್ದಾಣಕ್ಕೆ ಆಗಮಿಸಿದ್ದು, ಬಸ್ ಹತ್ತುವ ವೇಳೆ ಸರ ಕಳವು ಮಾಡಲಾಗಿದೆ. ಆದರೆ ಸರ ಕಳವಾಗಿರುವುದು ಗಮನಕ್ಕೆ ಬಾರದಿರುವುದರಿಂದ ತಡವಾಗಿ ಪಟ್ಟಣ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net