

ಬೆಳಗಾವಿ: ನಗರದ ಕೆಎಲ್ಇ ಅಂತರಾಷ್ಟ್ರೀಯ ಶಾಲೆಯ ವಿದ್ಯಾರ್ಥಿ, ಯುವ ಈಜುಗಾರ ಅನಿಷ್ ಪೈ ರಾಷ್ಟ್ರೀಯ ಮಟ್ಟದ ಸಮುದ್ರ ಈಜು ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ ಎಂದು ಬೆಳಗಾವಿ ಹೋಟೆಲ್ ಮಾಲಕರ ಸಂಘದ ಅಧ್ಯಕ್ಷ ಮತ್ತು ಖ್ಯಾತ ಉದ್ಯಮಿ ಅಜಯ್ ಪೈ ತಿಳಿಸಿದ್ದಾರೆ.
ನಗರದಲ್ಲಿ ಬುಧವಾರ ಸುದ್ಸಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಮಹಾರಾಷ್ಟ್ರ ರಾಜ್ಯ ಅಮೆಚುರ್ ಅಕ್ವಾಟಿಕ್ ಅಸೋಸಿಯೇಷನ್ ಆಯೋಜಿಸಿತ್ತು. ಫೆಬ್ರವರಿ 16ರಂದು ಮುಂಬೈನಲ್ಲಿ ನಡೆದ ಈ ಸ್ಪರ್ಧೆಯಲ್ಲಿ, ಅನಿಷ್ 42 ನಿಮಿಷ 57 ಸೆಕೆಂಡುಗಳಲ್ಲಿ 5 ಕಿಮೀ ದೂರ ಈಜುವ ಮೂಲಕ ಗುರಿ ಮುಟ್ಟಿದರು. ಅವರು ಕೇವಲ ಒಂದು ಸೆಕೆಂಡಿನ ಅಂತರದಿಂದ ಪ್ರಥಮ ಸ್ಥಾನವನ್ನು ತಪ್ಪಿಸಿಕೊಂಡರು. ಇದು 61ನೇ ಆವೃತ್ತಿಯ ಸ್ಪರ್ಧೆ ಆಗಿದ್ದು, ಕಳೆದ ವರ್ಷ ನಡೆದ 60ನೇ ಆವೃತ್ತಿಯಲ್ಲಿ ಅನಿಷ್ ಚಾಂಪಿಯನ್ ಆಗಿದ್ದರು ಎಂದರು.
ಬೆಳಗಾವಿಯ ಇನ್ನೊಬ್ಬ ಪ್ರತಿಭಾವಂತ ಈಜುಗಾರ, 9 ವರ್ಷದ ಸ್ಕಂದ ಘಾಟ್ಗೆ, ಅವರು ವಿಶೇಷ ಸಾಮರ್ಥ್ಯ ಹೊಂದಿರುವ ವಿದ್ಯಾರ್ಥಿ ಆಗಿದ್ದು, ತಮ್ಮ ವಯೋಮಾನದ ವಿಭಾಗದಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ ಎಂದು ವಿವರಿಸಿದರು.
"ದೆಶದ ವಿವಿಧ ರಾಜ್ಯಗಳಿಂದ ಒಟ್ಟು 500ಕ್ಕೂ ಹೆಚ್ಚು ಸ್ಪರ್ಧಿಗಳು ಈ ಸಮುದ್ರ ಈಜು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಬೆಳಗಾವಿ, ಹೈದರಾಬಾದ್, ತೆಲಂಗಾಣ, ಮಹಾರಾಷ್ಟ್ರ, ಮುಂಬೈ ಮುಂತಾದ ರಾಜ್ಯಗಳಿಂದ ಈಜುಗಾರರು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ತೀವ್ರ ಸಮುದ್ರ ಅಲೆಗಳ ನಡುವೆಯೂ ಸ್ಪರ್ಧಿಗಳು 5 ಕಿಮೀ ದೂರ ಈಜಬೇಕು ಮತ್ತು ಅಂತಿಮ ಗುರಿ ತಲುಪಿದ ನಂತರ ಟೇಬಲ್ ಅನ್ನು ಸ್ಪರ್ಶಿಸಬೇಕು ಎಂದರು.
ಅನಿಷ್ ಮತ್ತು ಸ್ಕಂದ ಅವರು ತಮ್ಮ ಅದ್ಭುತ ಸಾಧನೆಯ ಮೂಲಕ ಬೆಳಗಾವಿಯ ಹೆಮ್ಮೆಗುದಾರರಾಗಿ ಹೊರಹೊಮ್ಮಿದ್ದಾರೆ. ಇವರು ಈಗ ಭಾರತೀಯ ಈಜು ಫೆಡರೇಷನ್ (Swimming Federation of India) ಆಯೋಜಿಸುವ ಓಪನ್ ವಾಟರ್ ಈಜು ಸ್ಪರ್ಧೆಗಳಲ್ಲಿ ಪ್ರತಿನಿತ್ಯ ಸ್ಪರ್ಧಿಸಲು ಸಜ್ಜಾಗುತ್ತಿದ್ದಾರೆ. ಈ ಇಬ್ಬರೂ ಖ್ಯಾತ ಈಜು ತರಬೇತುದಾರ ಉಮೇಶ್ ಕಲಘಟ್ಗಿ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ.