ಆರೋಗ್ಯ ಉತ್ತಮವಾಗಿಟ್ಟುಕೊಳ್ಳಿ

Stay healthy.
ಶಾಸಕ ಜೆ.ಟಿ.ಪಾಟೀಲ
Published on

ಗಲಗಲಿ: ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ ಅವಶ್ಯ ಎಂದು ಶಾಸಕ ಜೆ.ಟಿ.ಪಾಟೀಲ ಹೇಳಿದರು.

ಗ್ರಾಮದಲ್ಲಿ ದೇಸಾಯಿ ಬಂಧುಗಳು ಆಯೋಜಿಸಿದ್ದ ಉಚಿತ ವೈದ್ಯಕೀಯ ಶಿಬಿರದಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಜನರ ಬಳಿಯೇ ಹೋಗಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ಮೆಚ್ಚುಗೆಯ ಕಾರ್ಯ ಎಂದರು.

ಪರಿಸರ ತಜ್ಞ ಎಂ.ಆರ್. ದೇಸಾಯಿ ಮಾತನಾಡಿ, ಬದುಕಿನಲ್ಲಿ ನಾವು ಜನಬಲ-ಧನಬಲ ಬಯಸದೆ ಆರೋಗ್ಯಬಲ ಪಡೆಯಲು ಬಯಸಬೇಕು. ಅದು ಇವೆರಡಕ್ಕಿಂತ ಪ್ರಮುಖವಾದದ್ದು ಎಂದರು.

ಡಾ.ರಕ್ಷಿತ್ ದೇಸಾಯಿ ಹಾಗೂ ಡಾ.ರಿಷಭ ದೇಸಾಯಿ ನೇತೃತ್ವದಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ ನಲವತ್ತು ಜನ ವೈದ್ಯಕೀಯ ಸಿಬ್ಬಂದಿ ಕಾರ್ಯನಿರ್ವಹಿಸಿದರು. ಐದನೂರು ಜನರು ಶಿಬಿರದ ಪ್ರಯೋಜನ ಪಡೆದುಕೊಂಡರು.

ಡಾ.ವಿನೋದ ಬಿರಾದಾರ, ಡಾ. ಎಚ್.ಜಿ. ಬಿದರಿ, ರಜತಕುಮಾರ ಸರನಾಯಿಕ, ಬಸವರಾಜ ದೇಸಾಯಿ, ಎಸ್.ಟಿ. ಪಾಟೀಲ, ಜೆ.ಡಿ. ದೇಸಾಯಿ, ಪಿ.ಆರ್.ದೇಸಾಯಿ, ಮೋಹನ ದೇಸಾಯಿ, ದೊಡ್ಡಣ್ಣ ದೇಸಾಯಿ, ಐ.ಬಿ. ನ್ಯಾಮಗೌಡ, ಐ.ಜಿ. ಪುರಾಣಿಕ ಇದ್ದರು.

ರಿಷಭ ದೇಸಾಯಿ ಸ್ವಾಗತಿಸಿದರು. ರಕ್ಷಿತ ದೇಸಾಯಿ ಪ್ರಸ್ತಾವಿಕವಾಗಿ ಮಾತನಾಡಿದರು. ಎಚ್.ವೈ ಜಿರಾಳಿ ನಿರೂಪಿಸಿ, ಆರ್.ಎಂ. ಬಿರಾದಾರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net