ದುಶ್ಚಟಗಳಿಂದ ದೂರವಿರಿ

1 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಯುವ ಪೀಳಿಗೆ ತಂಬಾಕು ವ್ಯಸನದಿಂದ ಮುಕ್ತವಾಗಿರುವಂತೆ ಸಮಾಜದಲ್ಲಿ ಜಾಗೃತಿ ಮೂಡಿಸಬೇಕು. ತಂಬಾಕು ಸೇವನೆಯಿಂದ ಮನುಷ್ಯನ ಮೇಲಾಗುವ ದುಷ್ಪರಿಣಾಮ ಕುರಿತು ತಿಳುವಳಿಕೆ ನೀಡುವುದು ಇಂದಿನ ಅಗತ್ಯವಾಗಿದೆ ಎಂದು ಸಿ.ಬಿ. ಗುತ್ತಲ ಆಯುರ್ವೇದ ಕಾಲೇಜಿನ ಪ್ರಾಧ್ಯಾಪಕ ಡಾ. ಮಹಾಂತಸ್ವಾಮಿ ಹಿರೇಮಠ ಹೇಳಿದರು.
ವಿಶ್ವ ತಂಬಾಕು ರಹಿತ ದಿನ ನಿಮಿತ್ತ ನಗರದ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಹುರಕಡ್ಲಿ ಅಜ್ಜ ಕಾನೂನು ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.
ತಂಬಾಕು ಸೇವನೆಯ ದುಷ್ಟಪರಿಣಾಮಗಳನ್ನು ಸವಿವರವಾಗಿ ವಿದ್ಯಾಥಿರ್ಗಳಿಗೆ ತಿಳಿಸಿದ ಅವರು, ಇಂದಿನಿಂದ ತಂಬಾಕು ಸೇವಿಸುವುದಿಲ್ಲ ಎಂದು ವಿದ್ಯಾಥಿರ್ಗಳಿಂದ ಪ್ರತಿಜ್ಞೆ ಮಾಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಗೌರವ ಕಾರ್ಯದಶಿರ್ ಸಿ.ಬಿ.ಮಟ್ಟಿ ಅವರು ವಿದ್ಯಾಥಿರ್ಗಳು ದುಷ್ಟಚಟಗಳಿಂದ ದೂರವಿದ್ದು ಸನ್ಮಾರ್ಗದಲ್ಲಿ ನಡೆಯುವಂತೆ ತಿಳಿಸಿದರು.
ಡಾ.ಎಸ್​.ಎಸ್​.ಗಾಳಿಮಠ, ಪಿ.ಬಿ.ದಾನವಾಡೆ, ಕೃತಿಕಾ ಸಿಂಗ್​, ಇತರರು ಇದ್ದರು. ಪ್ರಾಚಾಯೆರ್ ಡಾ. ಸವಿತಾ ಪಾಟೀಲ ಸ್ವಾಗತಿಸಿದರು. ಬಿ.ಬಿ.ಸಂತೋಜಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net