ಮಾದಕ ವಸ್ತುಗಳ ಸೇವನೆಯಿಂದ ದೂರವಿರಿ

klk 26-1
Published on

ಕಲಕೇರಿ: ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದ ಆದಷ್ಟು ದೂರವಿರಬೇಕೆಂದು ಕಲಕೇರಿ ಪಿಎಸ್‌ಐ ಸುರೇಶ ಮಂಟೂರ ಹೇಳಿದರು.

ಗ್ರಾಮದ ಮಲ್ಲಿಕಾರ್ಜುನ ವಿದ್ಯಾವರ್ಧಕ ಸಂಘದ ಬಸವೇಶ್ವರ ಪದವಿ ಪೂರ್ವ ಕಾಲೇಜು ಹಾಗೂ ಪೊಲಿೀಸ್ ಠಾಣೆ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಾದಕ ವಸ್ತುಗಳ ನಿಷೇಧ ಮತ್ತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜಾಗತಿಕ ಮಟ್ಟದಲ್ಲಿ ಪ್ರತಿವರ್ಷ ಜೂ. 26 ರಂದು ಮಾದಕ ವಸ್ತುಗಳ ದುರ್ಬಳಕೆ ಮತ್ತು ಅಂತಾರಾಷ್ಟ್ರೀಯ ಮಾದಕ ದ್ರವ್ಯ ಮುಕ್ತ ಕಳ್ಳಸಾಗಣೆ ವಿರೋಧಿ ದಿನ ಆಚರಿಸಲಾಗುತ್ತಿದೆ. ಯುವ ಸಮೂಹ, ವಿದ್ಯಾವಂತರು ಗ್ರಾಮೀಣರಿಗೆ ಈ ಕುರಿತು ಅರಿವು ಮೂಡಿಸುವ ಕಾರ್ಯದಲ್ಲಿ ಭಾಗಿಯಾಗಬೇಕು ಎಂದು ಸಲಹೆ ಮಾಡಿದರು.

ದೈಹಿಕ ಶಿಕ್ಷಣ ಉಪನ್ಯಾಸಕ ಶಾಂತು ಧುರ್ಗಿ, ಇಎಲ್‌ಸಿ ಕ್ಲಬ್ ಸಂಚಾಲಕ ಬಸವರಾಜ ಕುಂಬಾರ ಮಾತನಾಡಿ, ಇಂದಿನ ಯುವಜನತೆಯು ಮೋಜು ಮಸ್ತಿ, ತಡರಾತ್ರಿಯ ಪಾರ್ಟಿ ಎಂದು ತಮ್ಮ ಜೀವನ ಶೈಲಿಯನ್ನೇ ಬದಲಾಯಿಸಿಕೊಂಡಿದ್ದಾರೆ. ಇದರಿಂದ ಹದಿಹರೆಯದ ವಯಸ್ಸಿನಲ್ಲಿ ಹಾದಿ ತಪುದು ಸಾಮಾನ್ಯವಾಗಿದೆ. ಆದ್ದರಿಂದ ಯುವಕರು ದುಶ್ಚಟಗಳ ದಾಸರಾಗದೆ ತಮ್ಮ ಉಜ್ವಲ ಭವಿಷ್ಯ ನಿರ್ಮಿಸಿಕೊಳ್ಳಲು ನಿರಂತರ ಪ್ರಯತ್ನಿಸಬೇಕು ಎಂದರು.

ಕಲಕೇರಿ ಪೊಲೀಸ್ ಠಾಣೆ ವತಿಯಿಂದ ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮಗಳ ಕುರಿತು ಕಾಲೇಜು ವಿಭಾಗದ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು.

ಪ್ರಾಚಾರ್ಯ ಸಿ.ಎಸ್. ಹಿರೇಮಠ, ರವಿಕುಮಾರ ಗುಮಶೆಟ್ಟಿ, ಎಸ್. ಎಸ್. ಧುರ್ಗಿ, ಬಿ. ಎಂ. ಕುಂಬಾರ, ಜಿ. ಜಿ. ಮೇಡೆದಾರ, ಗೌಡಪ್ಪಗೌಡ ಹದರಿ, ಶಿವಾನಂದ ಹರಿಜನ್ ಸೇರಿ ಕಲಕೇರಿ ಪೊಲೀಸ್ ಠಾಣೆ ಸಿಬ್ಬಂದಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net