ಮಾಧಕ ಪದಾರ್ಥಗಳಿಂದ ದೂರವಿರಿ

ilk rural 30-1
ಇಳಕಲ್ಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.7ರಲ್ಲಿ ಆಯೋಜಿಸಿದ್ದ ಹಾಲು ಕುಡಿಯುವ ಹಬ್ಬದ ಆಚರಣೆ ಕಾರ್ಯಕ್ರಮದಲ್ಲಿ ಗುರುಮಹಾಂತ ಶ್ರೀಗಳು ಮಾತನಾಡಿದರು. ಶಿರೂರಿನ ಡಾ. ಬಸವಲಿಂಗ ಶ್ರೀಗಳು, ಬಸವರಾಜ ಶ್ರೀಗಳು, ಪರತಗೌಡ ಪಟ್ಟಣಶೆಟ್ಟಿ, ಬಸವರಾಜ ಇಂಗಳಗಿ, ಕಂಠಿ ವೇದಿಕೆ ಅಧ್ಯಕ್ಷ ವೀರಣ್ಣ ನಂದಾಪೂರ ಇತರರಿದ್ದರು.
Published on

ಇಳಕಲ್ಲ(ಗ್ರಾ): ಮದ್ಯಪಾನ, ತಂಬಾಕು ಹಾಗೂ ಮಾದಕ ಪದಾರ್ಥಗಳಿಂದ ಮನುಷ್ಯ ದೂರವಿರಬೇಕೆಂದು ವಿಜಯ ಮಹಾಂತೇಶ ಮಠದ ಗುರು ಮಹಾಂತ ಶ್ರೀಗಳು ಹೇಳಿದರು.

ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.7ರಲ್ಲಿ ಎಸ್.ಆರ್. ಕಂಠಿ ವೇದಿಕೆ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಹಾಲು ಕುಡಿಯುವ ಹಬ್ಬದ ಆಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಆರೋಗ್ಯ ಸಂಪತ್ತು ಎಲ್ಲ ಸಂಪತ್ತಿಗಿಂತ ಮಿಗಿಲಾದದ್ದು. ಆರೋಗ್ಯ ಸರಿ ಇಲ್ಲವೆಂದರೆ ಬದುಕು ಶೂನ್ಯವಾದಂತೆ. ಉತ್ತಮ ಆಹಾರದ ಜೊತೆಗೆ ಧ್ಯಾನ, ಯೋಗಾಸನ ಚಟುವಟಿಕೆಯಲ್ಲಿ ಪಾಲ್ಗೊಂಡು ಆರೋಗ್ಯ ಕಾಪಾಡಿಕೊಳ್ಳಬೇಕೆಂದು ತಿಳಿಸಿದರು.

ಶಿರೂರಿನ ಡಾ. ಬಸವಲಿಂಗ ಶ್ರೀಗಳು, ಬಸವರಾಜ ಶ್ರೀಗಳು, ಬಜಾರ್ ಬಸವಣ್ಣ ದೇವಸ್ಥಾನ ಅಧ್ಯಕ್ಷ ಪರತಗೌಡ ಪಟ್ಟಣಶೆಟ್ಟಿ, ಮುಖ್ಯಶಿಕ್ಷಕ ಬಸವರಾಜ ಇಂಗಳಗಿ, ಕಂಠಿ ವೇದಿಕೆ ಅಧ್ಯಕ್ಷ ವೀರಣ್ಣ ನಂದಾಪೂರ, ಕಂಠಿ ವೇದಿಕೆ ಹಿರಿಯ ಸದಸ್ಯ ಶಿವಬಸಪ್ಪ ತೊಂತನಾಳ ಇದ್ದರು.

2023ರ ಯುಪಿಎಸ್‌ಸಿ (ಸಹಾಯಕ ಕಮಾಂಡೆಂಟ್) ಪರೀಕ್ಷೆಯಲ್ಲಿ ಉತ್ತೀರ್ಣರಾದ ನಗರದ ಪ್ರತಿಭಾವಂತ ವಿದ್ಯಾರ್ಥಿ ಮಹಮ್ಮದ್ ಅಜರುದ್ದೀನ್ ಹಾಲ್ಯಾಳ, ವಕೀಲರಾದ ಸಿದ್ದು ಅಂಗಡಿ(ಕರಡಿ), ದಾಸೋಹಿಗಳಾದ ಭೀಮಣ್ಣ ಕೊಳ್ಳಿ, ಕಳಕಪ್ಪ ಅಂಗಡಿ ಅವರನ್ನು ಸತ್ಕರಿಸಲಾಯಿತು. ವಚನ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಶಾಲೆ ಶಿಕ್ಷಕರಾದ ಎಚ್. ಎಸ್. ಗೌಡರ, ಜೆ. ಬಿ. ಸಬರದ, ಆರ್.ಡಿ. ಭಾಗವಾನ, ಎನ್. ಸಿ. ಶ್ಯಾಸಲ್, ಕಂಠಿ ವೇದಿಕೆಯ ಅಮರೇಶ ಐಹೊಳ್ಳಿ, ಬಸವರಾಜ ಚಳಗೇರಿ, ಸಂಗಮೇಶ ಕಂಠಿ, ಅಮರೇಶ ಕಕ್ಕಸಗೇರಿ, ಗುರುಬಸಪ್ಪ ಹೂಲಗೇರಿ, ವೀರಣ್ಣ ಅಂಗಡಿ, ಮೀನಾಕ್ಷಿ ಗೋನಾಳ, ಜಯಶ್ರೀ ನೀರಲಕೇರಿ ಮತ್ತಿತರರಿದ್ದರು.

ನೀಲಮ್ಮ ಬಾದಿಮನಾಳ ಪ್ರಾರ್ಥಿಸಿದರು. ಅಡಿವೆಪ್ಪ ಅಂಗಡಿ ಸ್ವಾಗತಿಸಿದರು. ವಿಜಯಲಕ್ಷ್ಮೀ ಲೆಕ್ಕಿಹಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನುರಾಧಾ ಪಟ್ಟಣಶೆಟ್ಟಿ, ಶಿಲ್ಪಾ ಅಂಗಡಿ ಪರಿಚಯಿಸಿದರು. ಬಸವರಾಜ ಅಂಗಡಿ(ಐಟಿಐ) ನಿರೂಪಿಸಿದರು. ವಿಜಯಲಕ್ಷ್ಮೀ ಕಂಠಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net