ದುಶ್ಚಟಗಳಿಂದ ದೂರವಿರಿ

FotoJet 1111
Published on

ವೃತ್ತ ನಿರೀಕ್ಷಕ ರಂಗಶಾಮಯ್ಯ ಹೇಳಿಕೆ

ಬೇತಮಂಗಲ: ಗ್ರಾಮೀಣ ಭಾಗದಲ್ಲಿ ಯುವಕರು ಕ್ರೀಡೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುವುದರ ಮೂಲಕ ಮೊಬೈಲ್​ ಮತ್ತು ದುಶ್ಚಟಗಳಿಂದ ದೂರ ಇರಬೇಕು ಎಂದು ವೃತ್ತ ನಿರೀಕ್ಷಕ ರಂಗಶಾಮಯ್ಯ ತಿಳಿಸಿದರು.

ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸುವರ್ಣ ಭೂಮಿ ಟ್ರಸ್ಟ್​ನಿಂದ ಹಮ್ಮಿಕೊಂಡಿದ್ದ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿದ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿರುವುದು ದುರದೃಷ್ಟಕರ ಸಂಗತಿ. ಕ್ರೀಡಾಕೂಟಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ದೇಹವನ್ನು ಸದೃಢವಾಗಿ ಕಾಪಾಡಿಕೊಳ್ಳಬಹುದು ಎಂದರು.

ಬೇತಮಂಗಲ ಗ್ರಾಪಂ ಅಧ್ಯಕ್ಷ ವಿನು ಕಾರ್ತಿಕ್​ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಹಿಂದಿನಿಂದಲೂ ಕಬಡ್ಡಿ ಆಡುತ್ತಿದ್ದರು, ಇದರಿಂದ ಸದಾ ಕ್ರಿಯಾಶೀಲರಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಯುವಕರು ಸಿಕ್ಕ ಅವಕಾಶ ಸದ್ಬಳಕೆ ಮಾಡಿಕೊಂಡು ಇನ್ನಷ್ಟು ಕಾರ್ಯಕ್ರಮಗಳನ್ನು ಗ್ರಾಮೀಣ ಭಾಗದಲ್ಲಿ ಮಾಡಬೇಕು ಎಂದರು.

ಟಿ.ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಯ್ಯಪಲ್ಲಿ ಮಂಜುನಾಥ್​ ಮಾತನಾಡಿ, ಮುಂದಿನ ದಿನಗಳಲ್ಲಿ ರಾಜ್ಯಮಟ್ಟದ ಕ್ರೀಡಾಕೂಟವು ಬೇತಮಂಗಲ ಭಾಗದಲ್ಲಿ ನಡೆಯಲಿ, ಇದಕ್ಕೆ ಕೈಲಾದಷ್ಟು ಸಹಕಾರವನ್ನೂ ನೀಡುತ್ತೇವೆ ಎಂದು ಭರವಸೆ ನೀಡಿದರು.

ಬೇತಮಂಗಲ ದಸರಾ ಕ್ರೀಡಾಕೂಟದಲ್ಲಿ ಕರ್ನಾಟಕ, ಆಂಧ್ರ ಪ್ರದೇಶ ಹಾಗೂ ತಮಿಳುನಾಡಿನಿಂದ ಕಬಡ್ಡಿ ತಂಡಗಳು ಪಾಲ್ಗೊಂಡಿದ್ದವು.

ಧರ್ಮಸ್ಥಳದ ತಂಡವು ಪ್ರಥಮ ಸ್ಥಾನ ಪಡೆದಿದ್ದು ಸಮಾಜ ಸೇವಕ ವಿ. ಮೋಹನ್​ಕೃಷ್ಣ ಅವರು 20 ಸಾವಿರ ರೂ. ನಗದು ನೀಡಿದರು. ದ್ವೀತಿಯ ಸ್ಥಾನ ಪಡೆದ ಬಿ.ವಿನಾಯಕ ತಂಡಕ್ಕೆ ಗ್ರಾಪಂ ಅಧ್ಯಕ್ಷ ವಿನು ಕಾರ್ತಿಕ್​ 10 ಸಾವಿರ ರೂ. ನಗದು ವಿತರಿಸಿದರು. ತೃತೀಯ ಬಹುಮಾನ ಪಡೆದ ಕುಪ್ಪಂ ತಂಡಕ್ಕೆ ಕೆಜಿಎಫ್​ ತಾಲೂಕು ಕನ್ನಡ ಸಾಹಿತ್ಯ ಪರಿಷತ್​ ಅಧ್ಯಕ್ಷ ಶ್ರೀಹರಿ ಅವರು 5 ಸಾವಿರ ರೂ. ಮತ್ತು ನಾಲ್ಕನೇ ಬಹುಮಾನ ಪಡೆದ ಬೆಂಗಳೂರಿನ ಎಸ್​.ಕೆ.ತಂಡಕ್ಕೆ ಸುವರ್ಣ ಭೂಮಿ ಟ್ರಸ್ಟ್​ವತಿಯಿಂದ 2 ಸಾವಿರ ನಗದು ಬಹುಮಾನ ಪಡೆಯಿತು.

ಜಯ ಗಳಿಸಿದಂತಹ ಎಲ್ಲ ತಂಡಗಳಿಗೂ ಆಕರ್ಷಕ ಟ್ರೋಫಿಯನ್ನು ಶ್ರೀ ಸಾಯಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ತೇಜಸ್ವಿನಿ ಸತೀಶ್​ ಅವರು ಕೊಡುಗೆಯಾಗಿ ನೀಡಿದರು.

ನಿವೃತ್ತ ಸೈನಿಕ ಸುಬ್ರಹ್ಮಣಿ, ಶಿಕ್ಷಕರಾದ ನೆರ್ನಹಳ್ಳಿ ಶಂಕರ್​, ರೈತ ಸಂಘದ ಕಾರ್ಯಾಧ್ಯಕ್ಷ ಅಬ್ಬಣಿ ಶಿವಣ್ಣ, ಆನಂದ್​, ಶ್ರೀನಾಥ್​ ನಾಸ್ತಿಕ್​, ಉಮೇಶ್​, ಚಂದ್ರಶೇಖರ್​, ಜೈನ್​, ಸುವರ್ಣ ಭೂಮಿ ಟ್ರಸ್ಟ್​ ಪದಾಧಿಕಾರಿಗಳಾದ ಪ್ರೆಸ್​ ಮಂಜು, ಹರೀಶ್​, ಪ್ರಶಾಂತ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net