ದುಶ್ಚಟದಿಂದ ದೂರವಿದ್ದು ಸಮಾಜಕ್ಕೆ ನೆರವು

pdb
Published on

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

ವ್ಯಾಸಂಗದೊಂದಿಗೆ ಆಂತರಿಕವಾಗಿ ಗಟ್ಟಿಯಾಗಿ, ಸುಸಂಸ್ಕೃತರಾಗಿ, ದುಶ್ಚಟದಿಂದ ದೂರವಿದ್ದು ಪಾಲಕರಿಗೆ ಹಾಗೂ ಸಮಾಜಕ್ಕೆ ನೆರವಾಗಬೇಕು. ಅದಾನಿ ಯುಪಿಸಿಎಲ್ ಸಂಸ್ಥೆ ಸಿಎಸ್‌ಆರ್ ಯೋಜನೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿದ್ದು, ಶಿಕ್ಷಣ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿ ಶಿಕ್ಷಣ ಮಹತ್ವದ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.

ಪಡುಬಿದ್ರಿ ಬಂಟರ ಸಂಘದಲ್ಲಿ ಭಾನುವಾರ ಅದಾನಿ ಫೌಂಡೇಷನ್ ಸಿಎಸ್‌ಆರ್ ಯೋಜನೆಯಡಿ ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಅದಾನಿ ಸಮೂಹ ಅಧ್ಯಕ್ಷ ಕಿಶೋರ್ ಆಳ್ವ ಉದ್ಘಾಟಿಸಿದರು. ಅದಾನಿ ಉಡುಪಿ ಸ್ಥಾವರ ಪರಿಸರದ 846 ಪ್ರತಿಭಾವಂತ ವಿದ್ಯಾರ್ಥಿಗಳಿಗೆ 20 ಲಕ್ಷ ರೂ. ವಿದ್ಯಾರ್ಥಿವೇತನ ವಿತರಣೆ ಮಾಡಲಾಯಿತು. ಎಲ್ಲೂರು ಗ್ರಾಪಂ ಅಧ್ಯಕ್ಷ ರವಿರಾಜ್‌ರಾವ್, ಬೆಳಪು ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಬಡಾ ಅಧ್ಯಕ್ಷ ಶಿವಕುಮಾರ್ ಮೆಂಡನ್, ಬಳ್ಕುಂಜೆ ಅಧ್ಯಕ್ಷೆ ಮಮತಾ ದಿವಾಕರ್ ಪೂಂಜಾ, ಮಜೂರು ಅಧ್ಯಕ್ಷ ಪ್ರಸಾದ್ ಶೆಟ್ಟಿ ವಳದೂರು, ಕುತ್ಯಾರು ಅಧ್ಯಕ್ಷ ಜನಾರ್ದನ ಆಚಾರ್ಯ, ತೆಂಕ ಅಧ್ಯಕ್ಷೆ ಸುರೇಖ, ಪಲಿಮಾರು ಅಧ್ಯಕ್ಷೆ ಸೌಮ್ಯಲತಾ ಶೆಟ್ಟಿ, ಪಡುಬಿದ್ರಿ ಗ್ರಾಪಂ ಉಪಾಧ್ಯಕ್ಷ ಹೇಮಚಂದ್ರ ಸಾಲ್ಯಾನ್, ಅದಾನಿ ಫೌಂಡೇಶನ್ ಸಿಬ್ಬಂದಿ ಅನುದೀಪ್, ಶುಭಮಂಗಳ, ಯಶವಂತ್ ಮತ್ತಿತರರು ಉಪಸ್ಥಿತರಿದ್ದರು. ಯುಪಿಸಿಎಲ್ ಕಂಪನಿ ಎಜಿಎಂ ರವಿ ಆರ್.ಜೇರೆ ಸ್ವಾಗತಿಸಿದರು. ದೇವಿಪ್ರಸಾದ್ ಬೆಳ್ಳಿಬೆಟ್ಟು ಕಾರ್ಯಕ್ರಮ ನಿರೂಪಿಸಿದರು.

ವೈಯಕ್ತಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಶಿಕ್ಷಣ ಶಕ್ತಿಶಾಲಿ ಸಾಧನ. ಅನಕ್ಷರತೆ ನಿರ್ಮೂಲನೆ ಮತ್ತು ಸಮಾಜದ ಗ್ರಾಮೀಣ ಭಾಗಗಳಿಗೆ ಶಿಕ್ಷಣ ಉತ್ತೇಜಿಸುವತ್ತ ಅದಾನಿ ಫೌಂಡೇಷನ್ ಗಮನಹರಿಸುತ್ತಿದೆ. ವಿದ್ಯಾರ್ಥಿವೇತನ ಅಡೆತಡೆ ನಿವಾರಿಸಲು ಸಹಾಯ ಮಾಡುತ್ತದೆ. ವಿದ್ಯಾರ್ಥಿವೇತನ ಕೇವಲ ಆರ್ಥಿಕ ನೆರವಷ್ಟೇ ಅಲ್ಲ, ಅವು ವಿದ್ಯಾರ್ಥಿಗಳಲ್ಲಿನ ಅವಕಾಶ, ಮಾನ್ಯತೆ ಮತ್ತು ಭರವಸೆ ಪ್ರತಿನಿಧಿಸುತ್ತದೆ. - ಕಿಶೋರ್ ಆಳ್ವ ಅದಾನಿ ಸಮೂಹ ಅಧ್ಯಕ್ಷ https://www.vijayavani.net/teaching-children-ancient-culture-in-childhood https://www.vijayavani.net/tribute-to-retired-teacher-m-shankar-master

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net