ಯಥಾಸ್ಥಿತಿ ಕಾಯ್ದುಕೊಂಡ ಪ್ರವಾಹ

31 KLDG-1
pardಕಲಾದಗಿ ಗ್ರಾಮದ ಮೀನುಗಾರ ಓಣಿ ಶಾಲೆಯಲ್ಲಿರುವ ಕಾಳಜಿ ಕೇಂದ್ರದಕ್ಕೆ ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ ಭೇಟಿ ನೀಡಿ ಸಂತ್ರಸ್ತರ ಯೋಗಕ್ಷೇಮ ವಿಚಾರಿಸಿದರು. ಉಪತಹಸೀಲ್ದಾರ್ ಆರ್.ಆರ್. ಕುಲಕರ್ಣಿ, ಕಂದಾಯ ನಿರೀಕ್ಷಕ ಪ್ರಕಾಶ ನಾಯಕ ಇದ್ದರು.
Published on

ಕಲಾದಗಿ: ಈ ಭಾಗದ ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಬುಧವಾರ ಯಥಾಸ್ಥಿತಿಯಲ್ಲಿದ್ದು ಜನತೆಗೆ ಸ್ವಲ್ಪ ನೆಮ್ಮದಿ ದೊರಕಿದಂತಾಗಿದೆ.

ಗ್ರಾಮದ ಡೋರ್ ಗಲ್ಲಿ, ಸದರ್ ಬಜಾರ ಕೆಳಭಾಗದಲ್ಲಿನ ಸಮಗಾರ ಓಣಿಗಳ ಸಮೀಪ ನೀರು ಆವರಿಸಿದ್ದು, ಅಲ್ಲಿನ 3 ತಿಂಗಳ ಹಸುಗೂಸಿನೊಂದಿಗೆ ಬಾಣಂತಿ ದೀಯಾ ಬೆಣಗಿ ಸೇರಿ ನಾಲ್ಕು ಕುಟುಂಬ ಸದಸ್ಯರನ್ನು ಮೀನುಗಾರ ಓಣಿಯ ಸರ್ಕಾರಿ ಶಾಲೆಯಲ್ಲಿನ ಕಾಳಜಿ ಕೇಂದ್ರಕ್ಕೆ ಮಂಗಳವಾರ ಸಂಜೆ ಸ್ಥಳಾಂತರಿಸಲಾಗಿದೆ.

ಇನ್ನೂ ಪ್ರವಾಹ ಹೆಚ್ಚಾದರೆ ಈ ಪ್ರದೇಶಗಳ ಮನೆಗಳು ಜಲಾವೃತವಾಗುವ ಸಾಧ್ಯತೆಗಳಿರುವುದರಿಂದ ಮುಂಜಾಗ್ರತ ಕ್ರಮವಾಗಿ ಗ್ರಾಮದಲ್ಲಿ ಇನ್ನೆರೆಡು ಕಾಳಜಿ ಕೇಂದ್ರ ಸಜ್ಜುಗೊಳಿಸಲಾಗಿದೆ.

ರಸ್ತಗಳು ಇನ್ನೂ ಬಂದ್: ಪ್ರವಾಹದಿಂದಾಗಿ ಕಲಾದಗಿ-ಕಾತರಕಿ ನಡುವಿನ ರಸ್ತೆ, ಸಂಶಿ ಕ್ರಾಸ್ ಕಲಾದಗಿ ನಡುವಿನ ರಸ್ತೆಗಳು ಇನ್ನೂ ಬಂದ್ ಆಗಿದ್ದು ಸಂಚಾರಕ್ಕೆ ಬಹಳ ತೊಂದರೆಯಾಗಿದೆ.

ಬೆಳೆಗಳು ಜಲಾವೃತ: ಈ ಭಾಗದಲ್ಲಿ 100ಕ್ಕೂ ಅಧಿಕ ಎಕರೆ ಪ್ರದೇಶದಲ್ಲಿನ ಬೆಳೆಗಳು ಜಲಾವೃತಗೊಂಡಿದ್ದು, ರೈತ ತೀವ್ರ ಸಂಕಷ್ಟ ಎದುರಿಸುವಂತಾಗಿದೆ.
ಕಾಳಜಿ ಕೇಂದ್ರಕ್ಕೆ ಎಸಿ ಭೇಟಿ: ಗ್ರಾಮದ ಮೀನುಗಾರ ಓಣಿಯ ಶಾಲೆಯಲ್ಲಿನ ಕಾಳಜಿ ಕೇಂದ್ರಕ್ಕೆ ಬುಧವಾರ ಬಾಗಲಕೋಟೆ ಉಪವಿಭಾಗಾಧಿಕಾರಿ ಸಂತೋಷ ಜಗಲಾಸಾರ ಭೇಟಿ ನೀಡಿ ಸಂತ್ರಸ್ತರ ಯೋಗಕ್ಷೇಮ ವಿಚಾರಿಸಿದರು. ಬಳಿಕ ಗ್ರಾಮದಲ್ಲಿ ಸಂಚರಿಸಿ ಬಾಧಿತ ಪರದೇಶಗಳ ಸ್ಥಿತಿಗತಿ ಅವಲೋಕಿಸಿದರು.

ಉಪತಹಸೀಲ್ದಾರ್ ಆರ್.ಆರ್. ಕುಲಕರ್ಣಿ, ಕಂದಾಯ ನಿರೀಕ್ಷಕ ಪ್ರಕಾಶ ನಾಯಕ, ಗ್ರಾಮಲೆಕ್ಕಾಧಿಕಾರಿ ಸಂತೋಷಕುಮಾರ ತೇಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net