ಮಹನೀಯರ ಪ್ರತಿಮೆಗೆ ರಕ್ಷಣೆ ಅಗತ್ಯ: ಸಂಸದ ಯದುವೀರ್ ಆಗ್ರಹ

Published on

ಮೈಸೂರು: ನಗರದಲ್ಲಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಸೇರಿದಂತೆ ಎಲ್ಲ್ಲ ಮಹನೀಯರ ಪ್ರತಿಮೆಗೆ ರಕ್ಷಣೆ ಒದಗಿಸುವುದು ಅಗತ್ಯ ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ನಾಲ್ವಡಿ ಅವರ ಪ್ರತಿಮೆ ಮೇಲೆ ವ್ಯಕ್ತಿ ಕುಳಿತು ಅನುಚಿತ ವರ್ತನೆ ತೋರಿದ ಘಟನೆಗೆ ವಿಷಾದ ವ್ಯಕ್ತಪಡಿಸಿದ ಅವರು, ವ್ಯಕ್ತಿ ವಿರುದ್ಧ ಕ್ರಮಕೈಗೊಳ್ಳುವ ಜತೆಗೆ ನಾಲ್ವಡಿ ಅವರ ಪ್ರತಿಮೆಗೆ ರಕ್ಷಣೆ ನೀಡಬೇಕು ಎಂದು ಈಗಾಗಲೇ ನಗರ ಪೊಲೀಸ್ ಆಯುಕ್ತರಿಗೆ ಹೇಳಿದ್ದೇನೆ. ಮೈಸೂರಿನಲ್ಲಿ ಅನೇಕ ಸಾಧಾಕರ ಪ್ರತಿಮೆಗಳಿವೆ. ಎಲ್ಲ ಪ್ರತಿಮೆಗೂ ರಕ್ಷಣೆ ನೀಡಬೇಕು. ಮುಂದೆ ಈ ರೀತಿ ಯಾವುದೇ ಅವಘಡ ನಡೆಯದಂತೆ ನೋಡಿಕೊಳ್ಳಬೇಕು ಎಂದು ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಹಿನ್ನೆಲೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಎಲ್ಲರಿಗೂ ಅನ್ನದಾತರಾಗಿದ್ದರು. ಈ ಹಿನ್ನೆಲೆಯಲ್ಲಿ ಪೌರ ಕಾರ್ಮಿಕರಿಗೆ ಒಂದು ತಿಂಗಳ ದಿನಸಿ ವಸ್ತುಗಳನ್ನು ನೀಡಲಾಗುತ್ತದೆ. ಎಲ್ಲರೂ ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ ಎಂದು ಹೇಳಿದರು.

ಆರ್‌ಸಿಬಿಗೆ ಈ ಸಲ ಕಪ್ ಗೆಲ್ಲುವ ಅವಕಾಶ ಹೆಚ್ಚಿದೆ. ಟೀಂ ವರ್ಕ್‌ನಿಂದ ಈ ಸಲ ಕಪ್ ಗೆಲ್ಲಲಿದೆ. ನಾನು ಕೂಡ ಮ್ಯಾಚ್ ನೋಡುತ್ತೇನೆ. 4 ಬಾರಿ ಫೈನಲ್ ಹಂತಕ್ಕೆ ಬಂದು ಸೋತಿದ್ದಾರೆ. ಕಳೆದ ಬಾರಿ ಕೂಡ ಹತ್ತಿರದಲ್ಲಿ ಸೋತಿದ್ದರು. ಆದರೆ ಈ ಬಾರಿ ಕಪ್ ಗೆಲ್ಲುವ ಭರವಸೆ ಇದೆ ಎಂದರು.

ಕಮಲ್ ಹಾಸನ್ ಅಂತಹವರಿಗೆ ಜನರೇ ಬಹಿಷ್ಕಾರ ಹಾಕಿ ತಕ್ಕ ಪಾಠ ಕಲಿಸಬೇಕು. ಸಿನಿಮಾ ವಿಚಾರಕ್ಕೆ ಅವರು ಕೋರ್ಟ್ ಮೊರೆ ಹೋಗಿರಬಹುದು. ಆದರೆ ಕನ್ನಡದ ಬಗ್ಗೆ ಹಗುರವಾಗಿ ಮಾತನಾಡುವರಿಗೆ ಜನರೇ ಉತ್ತರ ಕೊಡಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net