ಮೂರ್ತಿ ಮೆರವಣಿಗೆ ಇಂದು

Statue procession today
ಶ್ರೀವಿರಂಟಯ್ಶ ಸ್ವಾಮೀಜಿ
Published on

ಬ್ರಹ್ಮದೇವನಮಡು: ಸಿಂದಗಿ ತಾಲೂಕಿನ ಹೊನ್ನಳ್ಳಿ & ಬ್ರಹ್ಮದೇವನಮಡು ಗ್ರಾಮದ ಕಲ್ಯಾಣದೇಶ್ವರ ಮಠದ ಲಿಂ. ಶ್ರೀವಿರಂಟಯ್ಶ ಕಲ್ಯಾಣದಯ್ಯ ಸ್ವಾಮೀಜಿ ಮೂರ್ತಿ ಮೆರವಣಿಗೆ ಶುಕ್ರವಾರ ಬೆಳಗ್ಗೆ 8ಕ್ಕೆ ಜರುಗಲಿದೆ. ಶೈಲ ಜಗದ್ಗುರು ಡಾ.ಚನ್ನಸಿದ್ಧ್ದರಾಮ ಪಂಡಿತಾರಾಧ್ಯ ಶಿವಾಚಾರ್ಯಭಗವತ್ಪಾದರು ಸಾನ್ನಿಧ್ಯ ವಹಿಸುವರು.

ಮಾಗಣಗೇರಿ ಬೃಹನ್ಮಠದ ಡಾ.ವಿಶ್ವ್ವಾರಾಧ್ಯಶಿವಾಚಾರ್ಯ,ಯಂಕಂಚಿ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾರ್ಯರು ಪಾಲ್ಗೊಳ್ಳುವರು.

ಜಾತ್ರೆ ನಿಮಿತ್ತ ನಡೆಯುತ್ತಿರುವ ಪವಾಡ ಪುರಷ ಗರಗದ ಮಡಿವಾಳೇಶ್ವರ ಪುರಾಣದಲ್ಲಿ ಶುಕ್ರವಾರ ರಾತ್ರಿ 8ಕ್ಕೆ ಮುತೈದೆಯರ ಉಡಿ ತುಂಬವ ಕಾರ್ಯಕ್ರಮ ನಡೆಯಲಿದೆ.

ಸಜ್ಜಲಗುಡ್ಡದ ಶರಣಮ್ಮ ತಾಯಿ ಮಠದ ದೊಡ್ಡಬಸವಚಾರ್ಯತಾತನವರು, ಯಡ್ರಾಮಿ ವೀರಕ್ತಮಠದ ಸಿದ್ಧ್ದಲಿಂಗ ಸ್ವಾಮೀಜಿ ಸಮ್ಮುಖ ವಹಿಸುವರು. ಭಾರತಿ ಶರಣಬಸಪ್ಪಗೌಡ ದರ್ಶನಾಪುರ, ನಾಗರತ್ನ ಅಶೋಕ ಮನಗೂಳಿ, ಲಲಿತಾ ರಮೇಶ ಭೂಸನೂರ, ನಾಗವೇಣಿ ದೊಡ್ಡಪ್ಪಗೌಡ ಪಾಟೀಲ, ಶಶಿಕಲಾ ದಂಡಪ್ಪಸಾಹು, ಶಿಲ್ಪಾ ಕುದರಗುಂಡ ಭಾಗವಹಿಸುವರು ಎಂದು ಶ್ರೀಮಠದ ಪೀಠಾಧ್ಯಕ್ಷ ಕಲ್ಶಾಣದಯ್ಶ ವೀರಂಟಯ್ಶ ಗದ್ದುಗೆಮಠ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net