

ಮಡಿಕೇರಿ:
ಪದ್ಮಭೂಷಣ ಜನರಲ್ ತಿಮ್ಮಯ್ಯನವರ ೧೧೭ ನೇ ಹುಟ್ಟುಹಬ್ಬದ ದಿನದಂದು ಮಡಿಕೇರಿಯ ಜನರಲ್ ತಿಮ್ಮಯ್ಯ ಪ್ಲಬ್ಲಿಕ್ ಶಾಲೆಯಲ್ಲಿ ಜನರಲ್ ತಿಮ್ಯಯ್ಯನವರ ಪುತ್ತಳಿಯನ್ನು ಏರ್ ಮಾರ್ಷಲ್ ಕೊದಂದೇರ ನಂದಾ ಕಾರ್ಯಪ್ಪ ಶುಕ್ರವಾರ ಅನಾವರಣಗೊಳಿಸಿದರು. ನಂತರ ಮಾತನಾಡಿದ ಅವರು ಜ. ತಿಮ್ಮಯ್ಯ ದೇಶಕಂಡ ಅತ್ತ್ಯುತ್ತಮ ಸೇನಾದಂಡ ನಾಯಕನಾಗಿದ್ದು ಸೇನಾಕ್ಷೇತ್ರಕ್ಕೆ ಮಾದರಿ ಎನಿಸಿಕೊಂಡಿದ್ದಾರೆ. ಜನರಲ್ ತಿಮ್ಮಯ್ಯ ಶಾಲೆಯಲ್ಲಿ ಜನರಲ್ ತಿಮ್ಮಯ್ಯ ನವರ ಪುತ್ತಳಿ ಅನಾವರಣವಾಗಿರುವುದು ಹೆಮ್ಮೆಯ ವಿಷಯ ಎಂದರು.
ಇದಕ್ಕೂ ಮೊದಲು ಮಡಿಕೇರಿ ಮುಖ್ಯ ರಸ್ತೆಯಲ್ಲಿ ೫೦ ವರ್ಷ ತುಂಬಿರುವ ಜನರಲ್ ತಿಮ್ಮಯ್ಯ ಪ್ರತಿಮೆಗೆ ಮಡಿಕೇರಿ ಕೊಡವ ಸಮಾಜ ಹಾಗು ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲಾ ಆಡಳಿತ ಮಂಡಳಿ, ಸಿಬ್ಬಂದಿ ಪುಷ್ಪಾರ್ಚನೆಯ ಮೂಲಕ ನಮನ ಸಲ್ಲಿಸಿದರು.
ನಂತರ ನಡೆದ ಶಾಲಾ ವೇದಿಕೆ ಕಾರ್ಯಕ್ರಮದಲ್ಲಿ ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಮುತ್ತಪ್ಪ ನಾಮಫಲಕವನ್ನು ಉದ್ಘಾಟಿಸಿದರು. ಅತಿಥಿಗಳು ನೂತನ ಕಚೇರಿ, ಶಾಲಾಕೊಠಡಿ ವಾಚನಾ ಲಯ,ಕ್ರೀಡಾಕೊಠಡಿಯನ್ನು ಉದ್ಘಾಟಿಸಿದರು.
ಶಾಲಾ ಪ್ರಾಂಶುಪಾಲರಾದ ಕಲ್‌ಲ್ಮಾಡಂಡ ಸರಸ್ವತಿ ಪ್ರಾಸ್ತಾವಿಕ ಮಾತನಾಡಿ ಶಾಲೆಯಲ್ಲಿ ಜನರಲ್ ತಿಮ್ಮಯ್ಯನವರ ಪುತ್ತಳಿ ಸ್ಥಾಪನೆ ಮಾಡಿರುವುದು ಹೆಮ್ಮೆಯ ವಿಷಯವಾಗಿದ್ದು ಇದಕ್ಕೆ ಕಾರಣಕರ್ತರಾದ ಶಾಲಾ ಆಡಳಿತ ಮಂಡಳಿ ದಾನಿಗಳು, ಶಾಲಾ ಸಿಬ್ಬಂದಿ ವರ್ಗ ಸಹಕಾರಕ್ಕೆ ಅಭಿನಂದನೆ ಸಲ್ಲಿಸಿದರು.
ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಮುತ್ತಪ್ಪ ಮಾತನಾಡಿ ಜನರಲ್ ತಿಮ್ಮಯ್ಯನವರ ಪ್ರತಿಮೆ ಪ್ರತಿಷ್ಥಾಪನೆ ಮುಂದಿನ ಪೀಳಿಗೆಗೆ ಮಾದರಿಯಾಗಲಿ ಎಂದರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಐಮುಡಿಯಂಡ ರಾಣಿಮಾಚಯ್ಯ ಸನ್ಮಾನ ಸ್ವೀಕರಿಸಿ ಮಾತನಾಡಿ ಯುವಜನತೆ ಸೇನೆಗೆ ಸೇರುವ ಮೂಲಕ ಬದುಕನ್ನು ದೇಶ ಸೇವೆಗೆ ಮುಡುಪಾಗಿಡ ಬೇಕೆಂದರು.
ವೇದಿಕೆಯಲ್ಲಿ ಕಾರ್ಯದ್ಯಕ್ಷ ನಂದಿನೆರವಂಡ ಚೀಯಣ್ಣ, ಸಂಚಾಲಕಿ ಕನ್ನಂಡ ಕವಿತ ಬೊಳ್ಳಪ್ಪ, ನಂದಿನೆರವಂಡ ದಿನೇಶ್, ಕನ್ನಂಡ ಸಂಪತ್, ಮಂಡಿರ ಸದಾಮುದ್ದಪ್ಪ, ಬೊಪ್ಪಂಡ ಸರಳಾ ಕರುಂಬಯ್ಯ, ಕಾಂಡೇರ ಲಲ್ಲುಕುಟ್ಟಪ್ಪ, ಮುಕ್ಕಾಟಿರ ಪೊನ್ನಮ್ಮ, ಮೂವೆರ ಜಯರಾಂ, ಚೊಟ್ಟೆಯಂಡ ಸಂಜು ಕಾವೇರಪ್ಪ, ಕಾಳಚಂಡ ಅಪ್ಪಣ್ಣ, ಪುತ್ತರಿರ ಕಾಳಯ್ಯ, ಅಮ್ಮಾಟಂಡ ಪಾರ್ವತಿ ಅಪ್ಪಯ್ಯ, ಮಾಜಿ ಅಧ್ಯಕ್ಷ ಮೂವೆರ ಸುಬ್ಬಯ್ಯ, ಮಾಜಿ ಕಾರ್ಯದ್ಯಕ್ಷ ಚೋವಂಡ ಕಾಳಪ್ಪ ಇದ್ದರು.