ಗೇಮಿಂಗ್ ವ್ಯಸನ ತಡೆಯಲು ರಾಜ್ಯಾದ್ಯಂತ ಜಾಗೃತಿ ಅಭಿಯಾನ

SAIYAD THAR
SAIYAD THAR
Published on

ರಾಯಚೂರು ಡಿಜಿಟಲ್ ಅಪಾಯ, ಸೈಬರ್ ವಂಚನೆ, ಆನ್‌ಲೈನ್ ಜೂಜಾಟ, ಗೇಮಿಂಗ್ ವ್ಯಸನರಿಂದ ಬಲಿಯಾಗುತ್ತಿರುವದನ್ನು ತಡೆಯಲು ಸೋಲಿಡಾರಿಟಿ ಯೂತ್ ಮೂಮೆಂಟ್ ಕರ್ನಾಟಕ ಘಟಕದಿಂದ ಆ.25 ರಿಂದ ಸೆ.15ರವರೆಗೆ ರಾಜ್ಯಾದ್ಯಂತ ಜಾಗೃತಿ ಅಭಿಯಾನ ಪ್ರಾರಂಭಿಸಲಾಗಿದೆಂದು ಸಂಘಟನೆ ವಿಜಯನಗರ ಜಿಲ್ಲಾಧ್ಯಕ್ಷ ಸೈಯದ್ ತರ್ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸೈಬರ್ ವಂಚನೆಯಿಂದ 12 ಸಾವಿರ ಕೋಟಿ ರೂ. ನಷ್ಟವಾಗಿರುವ ವರದಿಯನ್ನು ಸರ್ಕಾರವೇ ನೀಡಿದೆ. ಯುವಕರಲ್ಲಿ ಆಸೆ ಹುಟ್ಟಿಸಿ ವಂಚಿಸುವ ಕೆಲಸ ಅವ್ಯಾಹುತವಾಗಿ ನಡೆಯುತ್ತಿದೆ. ಮಾಹಿತಿ ಇರುವವರು, ಇಲ್ಲದೇ ಇರುವವರು ಬಲಿಯಾಗುತ್ತಿದ್ದಾರೆ.

ಸರ್ಕಾರದಿಂದ ಮಾತ್ರ ಡಿಜಿಟಲ್ ಮಾಹಿತಿ ನೀಡಲು ಸಾಧ್ಯವಾಗುವದಿಲ್ಲ, ಸಾರ್ವಜನರನ್ನು ಜಾಗೃತಿಗೊಳಿಸುವ ಕೆಲಸವಾಗಬೇಕಿದೆ. ಆ.25 ರಿಂದ ಸೆ.15 ವರೆಗೆ ಎಲ್ಲಾ ಜಿಲ್ಲಾ ಮತ್ತು ತಾಲೂಕ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮಗಳು ನಡೆಯಲಿವೆ. ಬೀದಿನಾಟಕ, ಜಾಗೃತಿ ಸಭೆಗಳು, ಫೋಸ್ಟರ್, ಸಮಾಜಿಕ ಜಾಲ ತಾಣಗಳ ಮೂಲಕ ಅರಿವು ಮೂಡಿಸಲಾಗುತ್ತದೆ. ಜಿಲ್ಲಾ ಮಟ್ಟದಲ್ಲಿ ವಿಚಾರ ಸಂಕಿರಣಗಳು ಮಾಡಲಾಗುತ್ತದೆ. ಬೆಂಗಳೂರಿನಲ್ಲಿ ಸಮಾರೋಪ ನಡೆಯಲಿದ್ದು, ಫ್ರೀಡಂ ಪಾರ್ಕನಲ್ಲಿ ಪ್ರತಿಭಟನೆ.ಬೀದಿ ನಾಟಕಪ್ರದರ್ಶಿಸಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಡಾ.ವಸೀಂ ಅಹ್ಮದ್,ಅಹ್ಮದ್ ಸಜಾದ್, ಸಾದ ಮಣಿಯಾರ, ಅನ್ಸರ್ ಖತೀಬ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net