

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ಭಾರತದ ಒಟ್ಟಾರೆ ದೇಶೀಯ ಉತ್ಪನ್ನ ದರ (ಜಿಡಿಪಿ) 2020-21 ಮೊದಲ ತ್ರೖೆಮಾಸಿಕದಲ್ಲಿ -23.9%ಕ್ಕೆ ಕುಸಿದಿರುವ ಆತಂಕದ ನಡುವೆಯೇ ರಾಜ್ಯದ ಜಿಎಸ್ಡಿಪಿ (ರಾಜ್ಯದ ಒಟ್ಟಾರೆ ಉತ್ಪನ್ನ ದರ) ಸಹ ನಿರೀಕ್ಷೆಗಿಂತ ಕಡಿಮೆಯಾಗುವುದು ಖಚಿತವಾಗಿದೆ. ಇದರಿಂದಾಗಿ ಹೆಚ್ಚಲಿರುವ ವಿತ್ತೀಯ ಕೊರತೆಯಿಂದಾಗುವ ಪರಿಣಾಮಗಳ ಭಯ ಕಾಡಲಾರಂಭಿಸಿದೆ. ಕಳೆದ 2-3 ವರ್ಷಗಳಿಂದ ಕಡಿಮೆಯಾಗುತ್ತ ಬಂದಿದ್ದ ಜಿಎಸ್ಡಿಪಿ ಈ ಹಣಕಾಸು ವರ್ಷ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕುಸಿಯುವುದೇ ಎಂಬ ಪ್ರಶ್ನೆ ಉದ್ಭವಿಸಿದೆ. ತೆರಿಗೆ ಸಂಗ್ರಹಣೆ ಕೊರತೆ, ವೆಚ್ಚ ಹೆಚ್ಚಳ, ಕೇಂದ್ರದಿಂದ ಸಿಗದ ಜಿಎಸ್ಟಿ ಪರಿಹಾರ ಮೊದಲಾದ ಸಮಸ್ಯೆಗಳು ಕುಸಿತಕ್ಕೆ ಕಾರಣವಾಗಿವೆ. ಕಳೆದ ವರ್ಷ ಕಾಡಿದ ಪ್ರವಾಹ, ಈ ವರ್ಷ ಕರೊನಾದಿಂದಾದ ಲಾಕ್ಡೌನ್, ನೆರೆ ಮೊದಲಾದವುಗಳಿಂದ ಜಿಎಸ್ಡಿಪಿ ಕುಸಿಯುವುದು ನಿಶ್ಚಿತ ಎಂದು ಹಣಕಾಸು ಇಲಾಖೆಯ ಮೂಲಗಳು ಖಚಿತಪಡಿಸಿವೆ.
ಗುರಿ ಸಾಧನೆ ಕಷ್ಟ: ರಾಜ್ಯದಲ್ಲಿ ಈ ವರ್ಷ ಜಿಎಸ್ಡಿಪಿ 18,05,742 ಕೋಟಿ ರೂ.ಗಳಾಗಬಹುದೆಂದು ಬಜೆಟ್
ಕೃಷಿ ಸಾಧನೆ ನಿರೀಕ್ಷೆ: ಜಿಎಸ್ಡಿಪಿಗೆ ಕೃಷಿ, ಕೈಗಾರಿಕೆ ಹಾಗೂ ಸೇವಾ ವಲಯದಿಂದ ಬರುವ ಕೊಡುಗೆಯನ್ನು ಲೆಕ್ಕ ಹಾಕಲಾಗುತ್ತದೆ. ಈ ವರ್ಷ ಕೃಷಿ ಕ್ಷೇತ್ರದಿಂದ ಉತ್ತಮ ಸಾಧನೆಯ ನಿರೀಕ್ಷೆ ಮಾಡಲಾಗುತ್ತಿದೆ. ಏಕೆಂದರೆ ಈ ಮುಂಗಾರು ಹಂಗಾಮಿನಲ್ಲಿ 30 ಸಾವಿರ ಎಕರೆ ಹೆಚ್ಚುವರಿ ಬಿತ್ತನೆಯಾಗಿದೆ ಎಂಬ ಅಂದಾಜಿದೆ. ಇದರಿಂದ ಕೃಷಿಯ ಕೊಡುಗೆ ಕಳೆದ ಹಣಕಾಸು ವರ್ಷದಲ್ಲಿ ಶೇ. 3.9ರಷ್ಟು ಇದ್ದದ್ದು ಈ ಸಾಲಿನಲ್ಲಿ ಹೆಚ್ಚಾಗಬಹುದು. ಆದರೆ ಕೈಗಾರಿಕೆಯಲ್ಲಿ ಶೇ. 4.8 ಹಾಗೂ ಸೇವಾ ವಲಯದಲ್ಲಿ ಶೇ. 7.9ರಷ್ಟು ಇದ್ದದ್ದು ಲಾಕ್ಡೌನ್ ಹಾಗೂ ಮತ್ತಿತರ ಕಾರಣಗಳಿಂದ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತಿದೆ.
ಕಾರಣಗಳೇನು?
ವಿತ್ತೀಯ ಕೊರತೆ ಕಾಮೋಡ ರಾಜ್ಯದಲ್ಲಿ ಈ ವರ್ಷ ವಿತ್ತೀಯ ಕೊರತೆ 46072 ಕೋಟಿ ರೂ. ಆಗಬಹುದೆಂದು ಹೇಳಲಾಗುತ್ತದೆ. ಇದು ಸಾಕಷ್ಟು ಸಮಸ್ಯೆಗಳಿಗೆ ಕಾರಣವಾಗಿದೆ. ಇದರಿಂದಾಗಿ ಆರ್ಥಿಕ ಸಮಸ್ಯೆಗಳು ಹೆಚ್ಚಾಗಲಿವೆ. ರಾಜಸ್ವ ಉಳಿತಾಯ ಇರುವುದು ಈಗಾಗಲೇ ಕಳೆದ ವರ್ಷಕ್ಕಿಂತ ಈ ವರ್ಷ ಶೇ. 49.7 ಕಡಿಮೆಯಾಗಿದೆ.
ತೆರಿಗೆ ವಸೂಲಿ ಏರುಪೇರಾಗಿದೆ. ಜನವರಿಯಿಂದ ಆರ್ಥಿಕ ಕುಸಿತವಾಗಿತ್ತು. ಆ ನಂತರ ಕರೊನಾ ಬಂತು. ಕೇಂದ್ರ ಕೊಟ್ಟಿರುವ ಪರ್ಯಾಯದ ಪ್ರಕಾರ ಸೆಸ್ ಹಾಕಿದರೆ ಗ್ರಾಹಕರಿಗೆ ಹೊರೆಯಾಗುತ್ತದೆ. ಜನರ ಆದಾಯ ಕುಸಿದು ಖರೀದಿಸುವ ಸ್ಥಿತಿ ಇಲ್ಲ. ಜನರು ಹಾಗೂ ವ್ಯಾಪಾರೋದ್ಯಮಿಗಳಿಗೆ ಹೊರೆಯಾಗದಂತೆ ಸರ್ಕಾರಗಳು ನೋಡಿಕೊಳ್ಳಬೇಕಾಗಿದೆ. | ಬಿ.ಟಿ. ಮನೋಹರ್ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜಿಎಸ್ಟಿ ಸಲಹೆಗಾರ
ವಿತ್ತೀಯ ಕೊರತೆ ಪರಿಣಾಮ
ವಿತ್ತೀಯ ಕೊರತೆ ಹೆಚ್ಚಾದರೆ ಸಾಕಷ್ಟು ಸಮಸ್ಯೆ ಸೃಷ್ಟಿಯಾಗುತ್ತವೆ. ರಾಜ್ಯಸ್ವ ಕೊರತೆ ಉಂಟಾಗಿ ಸರ್ಕಾರ ನಡೆಸುವುದು ಕಷ್ಟವಾಗುತ್ತದೆ. ಕೈಗಾರಿಕೆ, ಹೂಡಿಕೆ ಹೆಚ್ಚಾಗಬೇಕು. ಹೊಸ ರೀತಿಯ ಸಂಪನ್ಮೂಲ ಹುಡುಕಿಕೊಳ್ಳಬೇಕು. | ಮಧುಸೂದನ ರಾವ್ ಅರ್ಥಶಾಸ್ತ್ರಜ್ಞ
ತಜ್ಞರ ಸಲಹೆಗಳು