ಉನ್ನತ ಹುದ್ದೆ ಅಲಂಕರಿಸಲು ನಿರಂತರ ಅಭ್ಯಾಸ ಅಗತ್ಯ

UDGHATANE
ಹನುಮನಾಳ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿವಿಧ ಕಾರ್ಯಕ್ರಮವನ್ನು ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಯಮನೂರಪ್ಪ ಭಜಂತ್ರಿ ಉದ್ಘಾಟಿಸಿದರು. ಪ್ರಭಾರ ಪ್ರಾಚಾರ್ಯ ಸಂಜಯ ಬಡಿಗೇರ, ಮುಖಂಡರಾದ ಸಿದ್ದಪ್ಪ ರೊಟ್ಟಿ, ಪರಶುರಾಮಪ್ಪ ಬಾಗಲಿ, ನಿಂಗಪ್ಪ ಕುರುಬನಾಳ, ಶರಣಪ್ಪ ಗುಳಗುಳಿ, ಶಿವಪ್ಪ ಇಲಾಳ, ಗುರುರಾಜ ಹಡಪದ, ರಂಗನಾಥ ಮೇಟಿ ಇತರರಿದ್ದರು.
Published on

ಹನುಮಸಾಗರ: ವಿದ್ಯಾರ್ಥಿಗಳು ಉನ್ನತ ಹುದ್ದೆ ಅಲಂಕರಿಸಲು ನಿರಂತರ ಅಭ್ಯಾಸ ಮಾಡಬೇಕು ಎಂದು ಪ್ರಭಾರ ಪ್ರಾಚಾರ್ಯ ಸಂಜಯ ಬಡಿಗೇರ ಹೇಳಿದರು.

ಸಮೀಪದ ಹನುಮನಾಳ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಪದಾಧಿಕಾರಿಗಳ ಸ್ವಾಗತ ಸಮಾರಂಭ, ಸಾಂಸ್ಕೃತಿಕ ಕ್ರೀಡೆ ಮತ್ತು ಕಾಲೇಜು ಸಂಸತ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರತಿಯೊಬ್ಬರ ಬದುಕಿನಲ್ಲಿ ವಿದ್ಯಾರ್ಥಿ ಜೀವನ ಅಮುಲ್ಯವಾದದ್ದು. ಈ ಸಮಯದಲ್ಲಿ ನಿರ್ದಿಷ್ಟ ಗುರಿ ಇಟ್ಟುಕೊಂಡು ನಿರಂತರ ಅಭ್ಯಾಸ ಮಾಡಬೇಕು. ಆಗ ಮಾತ್ರ ಉನ್ನತ ಹುದ್ದೆ ಪಡೆವ ಕನಸು ಸಾಕಾರಗೊಳ್ಳುತ್ತದೆ. ಓದುವ ಸಮಯದಲ್ಲಿ ಸಮಯ ವ್ಯರ್ಥ ಮಾಡಬಾರದು. ದುಶ್ಚಟಗಳಿಗೆ ದಾಸರಾಗಬಾರದು. ಸರಿಯಾಗಿ ಅಭ್ಯಾಸ ಮಾಡಿ ಪಾಲಕರ ಋಣ ತೀರಿಸಬೇಕು ಎಂದರು.

ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಯಮನೂರಪ್ಪ ಭಜಂತ್ರಿ ಕಾರ್ಯಕ್ರಮ ಉದ್ಘಾಟಿಸಿದರು. ಉಪನ್ಯಾಸಕರಾದ ಶ್ರೀನಿವಾಸ, ಸುಭಾಷ್, ಶರಣಪ್ಪ, ಕುಮಾರ, ಉಮಾದೇವಿ, ಪಾರ್ವತಿ, ಸಂಪನ್ಮೂಲ ವ್ಯಕ್ತಿಗಳಾದ ಶಿವಪ್ಪ ಇಲಾಳ, ಗುರುರಾಜ ಹಡಪದ, ರಂಗನಾಥ ಮೇಟಿ, ಗ್ರಾಪಂ ಅಧ್ಯಕ್ಷ ತೆವರಪ್ಪ ಚಿಕ್ಕನಾಳ, ಉಪಾಧ್ಯಕ್ಷ ಸಂತೋಷ ಕೆಂಚೇರ, ಸದಸ್ಯರಾದ ಶರಣಪ್ಪ ಕುಂಬಾರ, ಸಿದ್ದಪ್ಪ ತುಂಬದ, ಸಂಗಪ್ಪ ಹುಲ್ಲೂರ, ದುರ್ಗಪ್ಪ ಭಜಂತ್ರಿ, ಹೊನ್ನಪ್ಪ ಶಾಂತಿಗೇರಿ, ಮುಖಂಡರಾದ ಸಿದ್ದಪ್ಪ ರೊಟ್ಟಿ, ಪರಶುರಾಮಪ್ಪ ಬಾಗಲಿ, ನಿಂಗಪ್ಪ ಕುರುಬನಾಳ, ಶರಣಪ್ಪ ಗುಳಗುಳಿ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು, ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net