

ಮೈಸೂರು: ಶಿವಮೊಗ್ಗದಲ್ಲಿ ಇತ್ತೀಚೆಗೆ ನಡೆದ ರಾಜ್ಯ ವುಶು ಚಾಂಪಿಯನ್‌ಶಿಪ್‌ನಲ್ಲಿ ನಗರದ ವಿದ್ಯಾರ್ಥಿಗಳು ಸಬ್ ಜೂನಿಯರ್, ಜೂನಿಯರ್ ವಿಭಾಗದಲ್ಲಿ ನಗರದ ಬೆಡನ್ ಪೊವೆಲ್ ಪಬ್ಲಿಕ್ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಮೊಹಮ್ಮದ್ ಇಜಾನ್ ಅಮೀರ್, ಅದೇ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಆಯಿಶಾ ಐನೈನ್ ಮತ್ತು ಸದ್ವಿದ್ಯಾ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಮೊಹಮ್ಮದ್ ಅರ್ಸಲಾನ್ ಅಮೀರ್ ಚಿನ್ನದ ಪದಕ ಪಡೆದುಕೊಂಡಿದ್ದಾರೆ