ಫೆ.2 ರಿಂದ ರಾಜ್ಯಾದ್ಯಂತ ಹನುಮಧ್ವಜ ಅಭಿಯಾನ- ಮನೆಮನೆಗಳಲ್ಲಿ ಹನುಮಧ್ವಜ ಹಾರಾಟಕ್ಕೆ ವಿಎಚ್‌ಪಿ ಕರೆ

sharan pampwel
Published on

ಮಂಗಳೂರು: ಮಂಡ್ಯ ಕರೆಗೋಡು ಗ್ರಾಮದಲ್ಲಿ ಹನುಮಧ್ವಜದ ಅನುಮತಿಗೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಸಹಯೋಗದಲ್ಲಿ ಫೆ.2 ರಿಂದ 9ರ ತನಕ ರಾಜ್ಯಾದ್ಯಂತ ಹನುಮಧ್ವಜದ ಅಭಿಯಾನ ನಡೆಯಲಿದೆ.

ರಾಜ್ಯದ ಪ್ರತಿ ಮನೆ ಮನೆಯಲ್ಲಿ ಹನುಮಧ್ವಜ ಹಾರಾಟ ಮಾತ್ರವಲ್ಲದೆ, ಗ್ರಾಮಗ್ರಾಮಗಳಲ್ಲಿರುವ ಧ್ವಜ ಕಟ್ಟೆ, ಭಜನಾ ಮಂದಿರ, ಧಾರ್ಮಿಕ ಕೇಂದ್ರ, ಪೂಜಾ ಕೇಂದ್ರಗಳಲ್ಲಿ ಹನುಮಧ್ವಜ ಹಾರಿಸುವ ಮೂಲಕ ಅಭಿಯಾನವನ್ನು ಯಶಸ್ವಿಗೊಳಿಸಲು ಬಜರಂಗದಳ ಕಾರ್ಯಕರ್ತರಿಗೆ ಕರೆ ನೀಡಲಾಗಿದೆ. ಜತೆಗೆ ಫೆ.10 ಶನಿವಾರ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿ ಕಚೇರಿಯ ಎದುರು ಕರೆಗೋಡು ಗ್ರಾಮದಲ್ಲಿ ಹನುಮಧ್ವಜಕ್ಕೆ ಆಗ್ರಹಿಸಿ ಸಾಮೂಹಿಕ ಹನುಮಾನ್ ಚಾಲೀಸಾ ಪಠಣ, ಧರಣಿ ಸತ್ಯಾಗ್ರಹ ನಡೆಯಲಿದೆ ಎಂದು ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪವೆಲ್ ಮಂಗಳೂರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net