

ರಾಯಚೂರು ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷರು ಹಾಗೂ ಕಲಬುರಗಿಯ ಕೆಬಿಎನ್ ವಿಶ್ವವಿದ್ಯಾಲಯದ ಕುಲಪತಿ ಡಾ.ಸೈಯದ್ ಶಾ ಅಲಿ ಅಲ್ ಹುಸೇನಿ ಇವರಿಗೆ ಜೂ.14 ರಂದು ನಗರದ ವಾಲ್ಕಟ್ ಮೈದಾನದ ಆವರಣದಲ್ಲಿ ಸಂಜೆ.8.30ಕ್ಕೆ ಸನ್ಮಾನ ಸಮಾರಂಭ ಹಾಗೂ ಭಾರತದ ಪರಸ್ಥಿತಿ ಮತ್ತು ನಮ್ಮ ಜವಬ್ದಾರಿ ಕುರಿತು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮುಸ್ಲಿಂ ಸಂಘಟಕ ಮಹ್ಮದ ಶಾಲಂ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಕ್ಷಾತೀತ, ಧರ್ಮಾತೀತವಾಗಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅನೇಕ ಧರ್ಮಗುರುಗಳು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜ ಹಾಗೂ ಜಿಲ್ಲೆಯ ಎಲ್ಲಾ ಶಾಸಕರು, ವಿಧಾನಪರಿಷತ್ ಸದಸ್ಯರುಗಳು, ಧರ್ಮಗುರುಗಳು ಭಾಗವಹಿಸಲಿದ್ದಾರೆ. ಹೈದ್ರಾಬಾದ್, ತೆಲಂಗಾಣ, ರಾಜ್ಯದ ನಾನಾ ಕಡೆಗಳಿಂದ ಧರ್ಮಗುರುಗಳು ಆಗಮಿಸಲಿದ್ದಾರೆ.
ಹಿರಿಯ ನ್ಯಾಯವಾದಿ ಜಾವೀದ್ ಉಲ್ ಹಕ್ ಮಾತನಾಡಿ, ನೂತನವಾಗಿ ವಕ್ಫ ಬೋರ್ಡ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕಲಬುರಗಿ ಹಜರತ್ ಖಾಜಾ ಬಂದೇನವಾಜ ಸಜ್ಜಾದೇ ಡಾ.ಸೈಯದ್ ಶಾ ಅಲಿ ಹುಸೇನ್ ಇವರಿಗೆ ಸನ್ಮಾನ ಸಮಾರಂಭ ಹಾಗೂ ಭಾರತದ ಪ್ರಸ್ತುತ ಪರಸ್ಥಿತಿ ನಮ್ಮ ಜವಬ್ದಾರಿ ಕುರಿತು ಅನೇಕ ಗಣ್ಯರು ಮಾತನಾಡಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸೈಯದ್ ಹೈದರುದ್ದೀನ್ , ಅಮೀರುದ್ದೀನ್ ಖಾದ್ರಿ, ಖಾಲಿದ್ ಸಾಹೇಬ್, ಅಬ್ದುಲ್ ಮತೀನ್, ಇನಾನುದ್ದೀನ್ ಜಮೀರ್ ಸಿರಾಜ್ ಫೈಜಾಜುದ್ದೀನ್ ಇದ್ದರು.