

ಮಂಡ್ಯ: ಸಾಮಾಜಿಕ, ಸಾಂಸ್ಕೃತಿಕ, ಔದ್ಯೋಗಿಕ ಮತ್ತು ರಾಜಕೀಯಕ್ಕೆ ಮಂಡ್ಯ ತವರೂರಾಗಿದೆ. ನಾಡು ನುಡಿ, ಕಲೆ, ಸಂಸ್ಕೃತಿಯ ಪರಂಪರೆಗೆ ಪ್ರಮುಖ ಕೊಂಡಿಯಾಗಿದೆ ಎಂದು ಸಮ್ಮೇಳನಾಧ್ಯಕ್ಷ ಡಾ.ಹಲ್ಲೆಗೆರೆ ಶಂಕರ್ ಬಣ್ಣಿಸಿದರು.
ನಗರದ ಗಾಂಧಿಭವನದಲ್ಲಿ ಡಾ.ಜೀಶಂಪ ಸಾಹಿತ್ಯ ವೇದಿಕೆ, ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಫಿಲಂಸ್ ಸಹಯೋಗದಲ್ಲಿ ಆಯೋಜಿಸಿದ್ದ 32ನೇ ರಾಜ್ಯಮಟ್ಟದ ಕವಿಕಾವ್ಯ ಮೇಳ, ವಿವಿಧ ಪ್ರಶಸ್ತಿ ಪ್ರದಾನ, ಓ ಗುಣವಂತ ಕಿರುಚಿತ್ರ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯ ಹಲವು ಸಾಹಿತಿಗಳು ನಾಡಿನ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.
ಕವಿಯು ಕವನದ ಮೂಲಕ ಜನಪ್ರಿಯನಾಗಬೇಕೇ ಹೊರತು ವ್ಯಕ್ತಿಯಾಗಲ್ಲ. ವ್ಯಕ್ತಿ ಯಾರೆಂದು ಆತನ ಕವನಗಳು ಹೇಳಬೇಕು. ಅದಕ್ಕೆ ಒಂದಷ್ಟು ಪರಿಶ್ರಮ, ಪ್ರಯತ್ನ, ಶ್ರದ್ದೆ ಮತ್ತು ಬದ್ಧತೆ ಬೇಕು. ಅದಕ್ಕೆ ಪೂರಕವಾಗಿ ಮಾನಸಿಕ ತುಡಿತ ಮತ್ತು ಮಿಡಿತಗಳಿರಬೇಕು. ಹೃದಯ ವೈಶಾಲ್ಯತೆ ಬೇಕು ಎಂದು ಸಲಹೆ ನೀಡಿದರು.
ಆರ್‌ಟಿಒ ನೌಕರರ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿದರು. ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್‌ಗೌಡ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಡಾ.ಎಚ್.ಎಸ್.ಮುದ್ದೇಗೌಡ, ಆರ್‌ಎಪಿಸಿಎಂಎಸ್ ಅಧ್ಯಕ್ಷ ಯು.ಸಿ.ಶೇಖರ್, ವಕೀಲ ಮೋಹನ್‌ಕುಮಾರ್, ಚಂದ್ರಚೂಡರಾಜು, ಹಾವೇರಿ ನೇತ್ರಾವತಿ, ವೇದಿಕೆ ಅಧ್ಯಕ್ಷ ಎಸ್.ಕೃಷ್ಣ ಸ್ವರ್ಣಸಂದ್ರ ಇತರರಿದ್ದರು.