ಒಕ್ಕೂಟದಿಂದಲೇ ನೇಕಾರ ಸಮುದಾಯಗಳ ಜಾತಿ ಗಣತಿ

ctd---okkuta
Published on

ಚಿತ್ರದುರ್ಗ: ಜಾತಿ ಗಣತಿಯಲ್ಲಿ ನಮ್ಮ ಸಮುದಾಯಗಳಿಗೆ ವಂಚನೆಯಾಗಿದೆ, ಆದ್ದರಿಂದ ರಾಜ್ಯಾದ್ಯಂತ ನಾವೇ ಸಮೀಕ್ಷೆ ನಡೆಸಿ ರಾಜ್ಯಸರ್ಕಾರಕ್ಕೆ ನಿಖರ ಮಾಹಿತಿ ಕೊಡುವುದಾಗಿ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಬಿ.ಎಸ್.ಸೋಮಶೇಖರ್ ಹೇಳಿದರು. ನಗರ ದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಎಲ್ಲ ಜಿಲ್ಲೆಗಳು,224 ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮ ಸಮುದಾಯಗಳ ಸಂಖ್ಯೆ ಐವತ್ತು ಲಕ್ಷದಷ್ಟಿದೆ.

ಆದರೆ ರಾಜ್ಯಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ವರದಿಯಲ್ಲಿ ನಮ್ಮ ಜನಸಂಖ್ಯೆಯನ್ನು 9.28 ಲಕ್ಷವೆಂದು ತೋರಿಸಲಾಗಿ ದೆ. ಇದರಿಂದ ನಮ್ಮ ಸಮುದಾಯಕ್ಕೆ ಅನ್ಯಾಯವಾಗಿದ್ದು,ಅವೈಜ್ಞಾನಿಕವಾಗಿರುವ ಆಯೋಗದ ವರದಿಗೆ ವಿರೋಧವಿದೆ. ರಾಜ್ಯಾದ್ಯಂತ ಪ್ರವಾಸ ಕೈಗೊಂಡು ನೇಕಾರ ಸಮುದಾಯದವರಲ್ಲಿ ಜಾಗೃತಿ ಮೂಡಿಸುವುದರೊಂದಿಗೆ,ಆ್ಯಪ್ ಮೂಲಕ ಗಣತಿ ನಡೆಸಲು ತೀರ್ಮಾನಿಸ ಲಾಗಿದೆ ಹಾಗೂ ಮುಂದಿನ ಮೂರು ತಿಂಗಳಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು.

ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಹಿಂದುಳಿದಿರುವ ನೇಕಾರ ಸಮುದಾಯಕ್ಕೆ ಸರ್ಕಾರದ ಸೌಲಭ್ಯಗಳನ್ನು ಪಡೆಯ ಬೇಕಾಗಿದೆ. ಇದಕ್ಕಾಗಿ ಗಣತಿ ನಡೆಸಲು ನಾವೇ ಮುಂದಾಗಿದ್ದೇವೆ ಎಂದರು. ರಾಜ್ಯನೇಕಾರ ಸಮುದಾಯಗಳ ಒಕ್ಕೂಟದ ಉಪಾಧ್ಯಕ್ಷ ತಿಪ್ಪೇಸ್ವಾಮಿ ಮಾತನಾಡಿ,ರಾಜ್ಯದಲ್ಲಿ ನೇಕಾರ ಸಮುದಾಯದ 29 ಒಳ ಪಂಗಡಗಳಿವೆ.

ಸರ್ಕಾರದ ಗಣತಿಯಲ್ಲಿ ನಮ್ಮ ಸಮುದಾಯದ ಜನಸಂಖ್ಯೆಯ ಸರಿಯಾದ ಲೆಕ್ಕವನ್ನು ತೋರಿಸಿಲ್ಲ.ಸಮುದಾಯದ ಅಳಿ ವು-ಉಳಿ ವಿನ ಪ್ರಶ್ನೆಯಾಗಿರುವುದರಿಂದ ಗಣತಿ ನಡೆಸಿ ನಿಖರ ಮಾಹಿತಿ ಸಂಗ್ರಹಿಸಲಿದ್ದೇವೆ. ಸಮುದಾಯದ ಮುಂದಿನ ಪೀಳಿಗೆ ಭವಿಷ್ಯದ ಹಿತ ದೃಷ್ಟಿಯಿಂದ ಈ ಗಣತಿ ಮುಖ್ಯವಾಗಿದೆ ಎಂದರು.

ಒಕ್ಕೂಟದ ಜಿಲ್ಲಾಧ್ಯಕ್ಷ ಗೋವಿಂದಪ್ಪ ಮಾತನಾಡಿ,ಸರ್ಕಾರದ ಜಾತಿ ಗಣತಿಯಲ್ಲಿ ನಮ್ಮ ಸಮುದಾಯಕ್ಕೆ ಆಗಿರುವ ಅನ್ಯಾಯ ಸರಿ ಪಡಿಸುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದರು. ನಾಗರಾಜ್,ಜಗದೀಶ್,ಶಿವಪ್ಪಶೆಟ್ರು,ದಯಾನಂದ ಶೆಟ್ಟಿಗಾರ್,ಶಿವಪ್ರಕಾಶ್ ಇತರ ರು ಸುದ್ದಿಗೋಷ್ಠಿಯಲ್ಲಿ ಇದ್ದರು.ಈ ಸಂದರ್ಭದಲ್ಲಿ ಗಣತಿ ನಮೂನೆ ಬಿಡುಗಡೆ ಮಾಡಲಾಯಿತು.

(ಸಿಟಿಡಿ 6 ಬಿ.ಎಸ್.ಸೋಮಶೇಖರ್)ಮಗ್ ಶಾಟ್.

----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net