

ಕಾಗವಾಡ: ತಂತ್ರಜ್ಞಾನ ಮತ್ತು ಆಯುರ್ವೇದದೊಂದಿಗೆ ಸೌಂದರ್ಯ ಚಿಕಿತ್ಸಾ ಕ್ಷೇತ್ರದಲ್ಲಿ ಅತ್ಯಾಧುನಿಕ ಸೌಲಭ್ಯ ಒದಗಿಸುವ ಮೂಲಕ ಮಿರಜ್ ಪಟ್ಟಣದಲ್ಲಿ ಡಾ.ವಿನಾಯಕ ಲೋಕರೆ ಮತ್ತು ಡಾ.ವಿದ್ಯಾ ಲೋಕರೆ ಸೌಂದರ್ಯ ಚಿಕಿತ್ಸೆಗೆ ಹೊಸ ರೂಪ ನೀಡಿದ್ದಾರೆ ಎಂದು ಮಿರಜ್ ಶಾಸಕ ಡಾ.ಸುರೇಶಭಾವು ಖಾಡೆ ತಿಳಿಸಿದ್ದಾರೆ.
ಮಿರಜ್ ಪಟ್ಟಣದ ಸುಭಾಷ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ಲಾಸ್ಟಿಕ್ ಮತ್ತು ಕಾಸ್ಮೆಟಿಕ್ ಸರ್ಜನ್ ಡಾ.ವಿನಾಯಕ ಲೋಕರೆ ಮತ್ತು ಕಾಸ್ಮೆಟಾಲಜಿಸ್ಟ್ ಡಾ.ವಿದ್ಯಾ ಲೋಕರೆ ಅವರ ಕಾಸ್ಮೋವರ್ಸ್ ಚರ್ಮ, ಕೂದಲು ಮತ್ತು ಲೇಸರ್ ಕ್ಲಿನಿಕ್‌ನ ೨ನೇ ಶಾಖೆಯನ್ನು ಉದ್ಘಾಟಿಸಿ ಮಾತನಾಡಿ, ಮಿರಜ್ ಪಟ್ಟಣದಲ್ಲಿ ಅತ್ಯಾಧುನಿಕ ಸೌಂದರ್ಯ ಚಿಕಿತ್ಸೆ ಸೌಲಭ್ಯ ಲಭ್ಯವಿರುವುದು ಹೆಮ್ಮೆಯ ವಿಷಯ. ಹೊಸ ತಂತ್ರಜ್ಞಾನದ ಆಸ್ಪತ್ರೆಗಳಿಂದ ಪ್ರಯೋಜನ ಆಗುವುದಲ್ಲದೇ ಮಿರಜ್‌ನ ವೈದ್ಯಕೀಯ ಕ್ಷೇತ್ರವನ್ನು ಇನ್ನಷ್ಟು ಬಲಪಡಿಸುತ್ತದೆ.
ಡಾ.ಲೋಕರೆ ದಂಪತಿಗೆ ಎಲ್ಲ ರೀತಿ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಸುಮಂತಾಯಿ ಖಾಡೆ, ನಿರಂಜನದಾದಾ ಅವಟಿ, ಪಾಂಡುರಂಗ ಕೋರೆ, ಸಂದೀಪದಾದಾ ಸಲಗರ ಇತರರಿದ್ದರು. ಡಾ.ವಿನಾಯಕ ಲೋಕರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ವಿದ್ಯಾ ಲೋಕರೆ ನಿರೂಪಿಸಿದರು.