

ಬೆಳಗಾವಿ : ಪತಂಜಲಿ ಯೋಗ ಪೀಠದ ರಾಜ್ಯ ಪ್ರಭಾರಿಗಳಾದ ಯೋಗ ಗುರು ಭವರ್ ಲಾಲ್ ಆರ್ಯ ಅವರ ನೇತೃತ್ವದಲ್ಲಿ 9 ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಯಕ್ಸಂಬಾದಲ್ಲಿನ ಶಿವಶಂಕರ ಜೊಲ್ಲೆ ಪಬ್ಲಿಕ್ ಶಾಲೆಯಲ್ಲಿ ಜೂ.21ರಂದು ರಾಜ್ಯ ಮಟ್ಟದ ಯೋಗ ಮಹೋತ್ಸವ ಆಯೋಜಿಸಲಾಗಿದೆ.
ಜೊಲ್ಲೆ ಸಮೂಹದ ಸಹಯೋಗದಲ್ಲಿ ನಡೆಯಲಿರುವ ಈ ಯೋಗಾಚರಣೆ ಕಾರ್ಯಕ್ರಮದಲ್ಲಿ ಚಿಕ್ಕೋಡಿ ಕ್ಷೇತ್ರದ ಲೋಕಸಭೆ ಕ್ಷೇತ್ರದ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಮತ್ತು ನಿಪ್ಪಾಣಿ ಕ್ಷೇತ್ರದ ವಿಧಾನಸಭೆ ಸದಸ್ಯರಾದ ಶಶಿಕಲಾ ಜೊಲ್ಲೆ ಅವರು ಬುಧವಾರ ಬೆಳಗ್ಗೆ 6ಕ್ಕೆ ಅಗ್ನಿ ಹೋತ್ರ ಮಾಡಿ 'ಯೋಗ ಮಹೋತ್ಸವ-2023'ನ್ನು ಉದ್ಘಾಟಿಸಲಿದ್ದು,ಸಾವಿರಾರು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪಾಲ್ಗೊಳ್ಳಲಿದ್ದಾರೆ ಎಂದು ರಾಜ್ಯ ಪ್ರಭಾರಿಗಳಾದ ಭವರ್ ಲಾಲ್ ಆರ್ಯ ಅವರು ತಿಳಿಸಿದ್ದಾರೆ.