ಮಹನೀಯರ ಸಾಧನೆಗಳು ಮಹಿಳೆಯರಿಗೆ ದಾರಿದೀಪ

28 Dwd 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಭಾರತೀಯ ಸಂಸ್ಕೃತಿಯಲ್ಲಿ ಶಿವಶಕ್ತಿಯ ಪರಿಕಲ್ಪನೆಯು ಹೆಣ್ಣಿನ ವೈಶಿಷ್ಟ÷್ಯತೆಯನ್ನು ತೋರಿಸುತ್ತದೆ. ಅಹಲ್ಯ, ದ್ರೌಪದಿ, ಅರುಂಧತಿ, ಬೆಳವಡಿ ಮಲ್ಲಮ್ಮ, ಕಿತ್ತೂರು ಚೆನ್ನಮ್ಮ, ಕೆಳದಿ ಚೆನ್ನಮ್ಮ, ಅಬ್ಬಕ್ಕದೇವಿಯರ ಸಾಧನೆಗಳು ಮಹಿಳೆಯರಿಗೆ ದಾರಿದೀಪವಾಗಬೇಕು ಎಂದು ಶಿಶು ಹೃದ್ರೋಗತಜ್ಞೆ ಡಾ. ವಿಜಯಲಕ್ಷ್ಮೀ ಬಾಳೇಕುಂದ್ರಿ ಹೇಳಿದರು.

ನಗರದ ಶ್ರೀ ಮೃತ್ಯುಂಜಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಗುರುವಾರ ಆಯೋಜಿಸಿದ್ದ ರಾಜ್ಯಮಟ್ಟದ ಮಹಿಳಾ ಸಮಾವೇಶದಲ್ಲಿ ಅವರು ಮಾತನಾಡಿದರು.

ಮಹಿಳೆಗೆ ಮಹಿಳೆ ಬೆಂಗಾವಲಾಗಿ ನಿಲ್ಲಬೇಕು. ಪಾಶ್ವಾತ್ಯ ಸಂಸ್ಕೃತಿಗೆ ಮಾರು ಹೋಗದೆ ಮಂದಸ್ಮಿತರಾಗಿ ಬದುಕನ್ನು ಗೆಲ್ಲಿರಿ ಎಂದರು.

ಮೃತ್ಯು0ಜಯ ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ಡಾ. ವಿ.ಐ. ಪಾಟೀಲ ಮಾತನಾಡಿ, ಪೆನ್ನು, ಪುಸ್ತಕ, ಮಹಿಳೆ ಜಗತ್ತನ್ನೇ ಬದಲಾಯಿಸಬಲ್ಲರು. ಮಹಿಳೆ ಪಿತೃ ಪ್ರಧಾನ ಕುಟುಂಬ ವ್ಯವಸ್ಥೆಯಲ್ಲೂ ಸಮಾನತೆ ಸಾಽಸಿದ್ದಾಳೆ. ಶಿಕ್ಷಣ ಮಹಿಳೆಯರನ್ನು ಸಬಲರನ್ನಾಗಿಸಿದೆ. ದೇಶದ ಉಜ್ವಲ ಭವಿಷ್ಯಕ್ಕೆ ಮಹಿಳೆಯರ ಕೊಡುಗೆ ಬಹಳ ದೊಡ್ಡದು ಎಂದರು.

ಬೆ0ಗಳೂರಿನ ಬೆಳಕು ಅಕ್ಯಾಡೆಮಿ ಸಂಸ್ಥಾಪಕಿ ಅಶ್ವಿನಿ ಅಂಗಡಿ ಮಾತನಾಡಿ, ಅಂಗವೈಕಲ್ಯತೆ ಹೊಂದಿದ ನನಗೆ ಜೀವನದಲ್ಲಿ ನೊಂದು ಸೋತವರು ಮಾದರಿ. ಕಷ್ಟದಲ್ಲಿರುವವರಿಗೆ ಸಹಾಯ, ಸಹಕಾರ ನೀಡಬೇಕು. ಜೀವನದಲ್ಲಿ ಯಾವುದನ್ನೂ ಕಷ್ಟ ಎಂದು ಭಾವಿಸದೆ ಉದಾತ್ತ ಮನಸ್ಸಿನಿಂದ ಬದುಕನ್ನು ಸಾರ್ಥಕ ಮಾಡಿಕೊಳ್ಳಬೇಕು ಎಂದರು.ರ‍್ಯಾಪಿಡ್ ಸಂಸ್ಥೆಯ ಸಂಸ್ಥಾಪಕ ಸದಸ್ಯೆ ವಾಣಿ ಪುರೋಹಿತ, ಕರಕುಶಲ ತರಬೇತುದಾರ ಲಲಿತಾ ದೇಸಾಯಿ, ಜ್ಯೋತಿ ಹಿರೇಮಠ ಮಾತನಾಡಿದರು.

ಪ್ರಾಚಾರ್ಯೆ ಡಾ. ನೀಲಕ್ಕ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯರಾದ ಎಸ್.ಬಿ. ಶಿವಳ್ಳಿ, ಅಶೋಕ ಚಿಕ್ಕೋಡಿ, ಐ.ಕ್ಯೂ.ಎ.ಸಿ. ಸಂಯೋಜಕಿ ಪ್ರೊ. ಶ್ರೀದೇವಿ ಸಂಗೊಳ್ಳಿ ಹಾಗೂ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರೊ. ಶಶಾಂಕ ಹಾದಿಮನಿ ನಿರೂಪಿಸಿದರು. ಪ್ರೊ. ಸಂಜನಾ ಹೊಳಿಮಠ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net