ಚಿನ್ನದ ಹುಡುಗಿ ವೈಷ್ಣವಿಗೆ ಅದ್ದೂರಿ ಸ್ವಾಗತ : ರಾಜ್ಯಮಟ್ಟದ ಭಾರ ಎತ್ತುವ ಸ್ಫರ್ಧೆಯಲ್ಲಿ ಪ್ರಥಮ ಸ್ಥಾನ

New Project (20)
Published on

ಪುತ್ತೂರು ಗ್ರಾಮಾಂತರ: ಶಿಕ್ಷಣ ಇಲಾಖೆ ವತಿಯಿಂದ ಧಾರವಾಡದಲ್ಲಿ ನಡೆದ ರಾಜ್ಯಮಟ್ಟದ ಪ್ರೌಢಶಾಲಾ 17ರ ವಯೋಮಿತಿಯ ಬಾಲಕಿಯರ 53 ಕೆ.ಜಿ. ವಿಭಾಗದ ಭಾರ ಎತ್ತುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದ ಸುಳ್ಯಪದವಿನ ಸರ್ವೋದಯ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ವೈಷ್ಣವಿ ರೈ ಮತ್ತು ಅವರಿಗೆ ತರಬೇತಿ ನೀಡಿದ್ದ ಕ್ರೀಡಾಪಟು ಕೃಷ್ಣಪ್ಪ ಗೌಡ ಡೆಂಬಾಳೆ ಅವರನ್ನು ಶನಿವಾರ ಸುಳ್ಯಪದವಿನಲ್ಲಿ ಸ್ವಾಗತಿಸಿ ಅಭಿನಂದಿಸಲಾಯಿತು.

ವಿದ್ಯಾರ್ಥಿನಿ ವೈಷ್ಣವಿ ಮತ್ತು ತರಬೇತಿ ನೀಡಿದ್ದ ಕೃಷ್ಣಪ್ಪ ಗೌಡ ಅವರನ್ನು ಸುಳ್ಯಪದವು ಜಂಕ್ಷನ್ ಬಳಿ ಸರ್ವೋದಯ ವಿದ್ಯಾಸಂಸ್ಥೆ ಆಡಳಿತ ಮಂಡಳಿ, ಶಿಕ್ಷಕರು, ಸ್ಥಳೀಯ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮಾರ್ಲಾಪಣೆ ಮಾಡಿದರು. ಬಳಿಕ ಅವರನ್ನು ಮೆರವಣಿಗೆ ಮೂಲಕ ಶಾಲಾ ಸಭಾಭವನಕ್ಕೆ ಕರೆತರಲಾಯಿತು. ಸರ್ವೋದಯ ವಿದ್ಯಾಸಂಸ್ಥೆ ಅಧ್ಯಕ್ಷ ಎಚ್.ಡಿ.ಶಿವರಾಮ್ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೈಷ್ಣವಿ ಮತ್ತು ಕೃಷ್ಣಪ್ಪ ಗೌಡ ಅವರನ್ನು ಸನ್ಮಾನಿಸಲಾಯಿತು.

ವಿದ್ಯಾಸಂಸ್ಥೆ ಸಂಚಾಲಕ ಮಹಾದೇವ ಭಟ್ ಕೊಲ್ಯ, ಶಿಕ್ಷಕ- ರಕ್ಷಕ ಸಂಘದ ಅಧ್ಯಕ್ಷ ಆನಂದ ಪಾದೆಗದ್ದೆ, ಅಬ್ದುಲ್ ಖಾದರ್, ಸುಳ್ಯಪದವು ಆಯುಧ ಪೂಜಾ ಸೇವಾ ಸಮಿತಿ ಅಧ್ಯಕ್ಷ ಗಿರೀಶ್ ಕುಮಾರ್, ಶಾಲಾ ಸುರಕ್ಷಾ ಸಮಿತಿ ಅಧ್ಯಕ್ಷ ಪ್ರಕಾಶ್ ಮರದಮೂಲೆ, ಪಡುಮಲೆ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ಉದಯ ಕುಮಾರ್ ಪಡುಮಲೆ, ಯಕ್ಷಗಾನ ಕಲಾವಿದ ಚನಿಯಪ್ಪ ನಾಯ್ಕ, ಬಡಗನ್ನೂರು ಗ್ರಾಪಂ ಮಾಜಿ ಉಪಾಧ್ಯಕ್ಷ ಗಂಗಾಧರ್ ಎನ್.ಜಿ, ವೈಷ್ಣವಿಂ ತಂದೆ ಐತ್ತನಡ್ಕ ವಸಂತ ರೈ, ತಾಯಿ ಸುರೇಖಾ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಸುಖೇಶ್ ರೈ ಸ್ವಾಗತಿಸಿದರು. ಶಿಕ್ಷಕಿ ಪ್ರಶಾಂತಿ ರೈ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net