ಕ್ರೀಡಾಕೂಟಗಳಿಂದ ಪ್ರತಿಭೆ ಬೆಳಕಿಗೆ - ಬಂಟ್ವಾಳ ಕ್ಷೇತ್ರ ಶಿಕ್ಷಣಾಽಕಾರಿ ಮಂಜುನಾಥ ಎಂ.ಜಿ. ಅನಿಸಿಕೆ

PTR_25 OCT_1
Published on

ವಿಟ್ಲ: ಮಕ್ಕಳ ದೈಹಿಕ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮ ಹಾಕಿಕೊಂಡಿದ್ದು, ಗ್ರಾಮೀಣ ಕ್ರೀಡಾಕೂಟಗಳ ಮೂಲಕ ಪ್ರತಿಭೆಗಳ ಶೋಧ ನಡೆಯುತ್ತದೆ. ಕ್ರೀಡೆಗೆ ಸಕಲ ಸೌಲಭ್ಯಗಳನ್ನು ಸರ್ಕಾರ ನೀಡುತ್ತಿದ್ದು, ಪ್ರತಿಯೊಬ್ಬರೂ ಕ್ರೀಡೆಯನ್ನು ಸವಾಲಾಗಿ ಸ್ವೀಕರಿಸುವ ಕೆಲಸವಾಗಬೇಕು ಎಂದು ಬಂಟ್ವಾಳ ಕ್ಷೇತ್ರ ಶಿಕ್ಷಣಾಽಕಾರಿ ಮಂಜುನಾಥ ಎಂ. ಜಿ. ಹೇಳಿದರು.

ವಿಟ್ಲ ಬಸವನಗುಡಿ ವಿಠಲ್ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಜೇಸಿ ಪೆವಿಲಿಯನ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ಜಿಲ್ಲಾ ಉಪ ನಿರ್ದೇಶಕರ ಕಚೇರಿ(ಆಡಳಿತ) ಮಂಗಳೂರು, ಕ್ಷೇತ್ರ ಶಿಕ್ಷಣಾಽಕಾರಿಗಳ ಕಚೇರಿ ಬಂಟ್ವಾಳ, ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸಹಯೋಗದಲ್ಲಿ ನಡೆದ ೨೦೨೪-೨೫ನೇ ಸಾಲಿನ ರಾಜ್ಯಮಟ್ಟದ ಬಾಲಕ ಬಾಲಕಿಯರ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳ ವೇಯ್ಟ್ ಲಿಫ್ಟಿಂಗ್ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕ ರಾಜ್ಯ ವೇಯ್ಟ್ ಲಿಫ್ಟಿಂಗ್ ಅಸೋಸಿಯೇಶನ್ ಉಪಾಧ್ಯಕ್ಷ ಪುಪ್ಪರಾಜ ಹೆಗ್ಡೆ ಮಾತನಾಡಿ ಕ್ರೀಡೆ ಜೀವನದಲ್ಲಿ ಶಿಸ್ತಿನ ಜತೆಗೆ ರಾಜಿ ಮಾಡಿಕೊಳ್ಳದೆ ನಡೆಯುವ ಚಟುವಟಿಕೆಯಾಗಿದೆ. ಸಮಯ ಪಾಲನೆ ಶಿಸ್ತಿನ ಒಂದು ಅಂಗವಾಗಿದೆ. ಇಲಾಖೆ ಹಾಗೂ ಸಂಘಟನೆಗಳ ಮೂಲಕ ವಿದ್ಯಾರ್ಥಿಗಳಿಗೆ ಹಲವು ಅವಕಾಶಗಳನ್ನು ನೀಡುವ ಕೆಲಸವಾಗುತ್ತಿದೆ ಎಂದರು.

ಆಡಳಿತ ಮಂಡಳಿ ಅಧ್ಯಕ್ಷರಾಗಿದ್ದ ಎಲ್.ಎನ್.ಕೂಡೂರು ಅವರಿಗೆ ಸಂತಾಪ ಸೂಚಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಅಧ್ಯಕ್ಷ ಶ್ರೀಧರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಪಪಂ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು, ಸದಸ್ಯ ಅರುಣ್ ವಿಟ್ಲ, ದ.ಕ. ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷೆ ಲಿಲ್ಲಿ ಪಾಯಸ್, ಬಂಟ್ವಾಳ ದೈಹಿಕ ಶಿಕ್ಷಣ ಪರಿವೀಕ್ಷಣಾ ಅಽಕಾರಿ ಶಿವಪ್ರಸಾದ್ ರೈ, ಎಡಪದವು ಸ್ವಾಮಿ ವಿವೇಕಾನಂದ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಪ್ರೇಮನಾಥ ಶೆಟ್ಟಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಯುವಜನ ಕ್ರೀಡಾ ಇಲಾಖೆಯ ತರಬೇತುದಾರ ರಘುನಾಥ ಬಿ.ಎಸ್., ಬಂಟ್ವಾಳ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಉಮಾನಾಥ ರೈ, ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ರಾಜೇಂದ್ರ ರೈ, ಉದ್ಯಮಿಗಳಾದ ರಾಧಾಕೃಷ್ಣ ನಾಯಕ್, ಬಾಬು ಕೆ. ವಿ., ರೋಟರಿ ಅಧ್ಯಕ್ಷ ಹರೀಶ್ ಪೂಜಾರಿ, ಲಯನ್ಸ್ ಅಧ್ಯಕ್ಷ ರಜಿತ್ ಆಳ್ವ, ಜೆಸಿಐ ಉಪಾಧ್ಯಕ್ಷ ರಿತೇಶ್ ಶೆಟ್ಟಿ, ಜಿಲ್ಲಾ ವೇಟ್ ಲಿಫ್ಟಿಂಗ್ ಅಸೋಸಿಯೇಶನ್ ಅಧ್ಯಕ್ಷ ಪ್ರವೀಣ್ ಕುಮಾರ್, ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಜಯರಾಮ್, ವೇಟ್ ಲಿಫ್ಟಿಂಗ್ ಕೋಚ್ ಸರಸ್ವತಿ ಪುತ್ರನ್ ಉಪಸ್ಥಿತರಿದ್ದರು.

ವಿಠಲ್ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲಾ ಪ್ರಾಂಶುಪಾಲ ಜಯರಾಮ ರೈ ಡಿ. ಸ್ವಾಗತಿಸಿದರು. ಜಿಲ್ಲಾ ದೈಹಿಕ ಶಿಕ್ಷಣ ಅಽಕಾರಿ ಭುವನೇಶ್ ಪ್ರಸ್ತಾವನೆಗೈದರು. ಶಾಲೆಯ ಆಡಳಿತಾಽಕಾರಿ ರಾಧಾಕೃಷ್ಣ ಎರುಂಬು ವಂದಿಸಿದರು. ಶಿಕ್ಷಕ ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.ದೈಹಿಕ ಶಿಕ್ಷಣ ಶಿಕ್ಷಕ ಭಾನು ಪ್ರಕಾಶ್ ಸಹಕರಿಸಿದರು.

ಸಮಯಕ್ಕೆ ಕಾರ್ಯಕ್ರಮ!

ಕಾರ್ಯಕ್ರಮ ಉದ್ಘಾಟನೆಗೂ ಮುನ್ನ ವಿಟ್ಲ ಮೇಗಿನಪೇಟಿಯಿಂದ ಶಾಲೆವರೆಗೆ ವಿದ್ಯಾರ್ಥಿಗಳಿಂದ ಜಾಥಾ ನಡೆಯಿತು. ರಾಜ್ಯದ ಸುಮಾರು ೯ ಜಿಲ್ಲೆಯಿಂದ ಸ್ಪರ್ಧಾರ್ಥಿಗಳು ಆಗಮಿಸಿದ್ದಾರೆ. ಯಾವುದೇ ಗಣ್ಯ ವ್ಯಕ್ತಿಗಳನ್ನೂ ಕಾದು ಕುಳಿತುಕೊಳ್ಳದೆ, ಎಲ್ಲವೂ ಸಮಯಕ್ಕೆ ಪ್ರಾರಂಭವಾಗಿ ಕಾಲಮಿತಿಯಲ್ಲಿ ಮುಕ್ತಾಯವಾಗುವ ಮೂಲಕ ಕಾರ್ಯಕ್ರಮ ಮಾದರಿಯಾಗಿ ನಡೆಯಿತು.

ಶಾಸಕರ ಭೇಟಿ!

ರಾಜ್ಯ ಮಟ್ಟದ ವೇಯ್ಟ್ ಲಿಫ್ಟಿಂಗ್ ಸ್ಪರ್ಧೆ ರಾಜ್ಯದಲ್ಲಿ ಎರಡನೇ ವರ್ಷ ನಡೆಯುತ್ತಿದ್ದು, ವಿಟ್ಲ ಭಾಗಕ್ಕೆ ಹೊಸದಾಗಿದೆ. ಕಾರ್ಯಕ್ರಮದ ಹಿನ್ನಲೆಯಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಶಾಲೆಗೆ ಬೇಟಿ ನೀಡಿ ಸ್ಪರ್ಧಾರ್ಥಿಗಳಿಗೆ ಶುಭ ಹಾರೈಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net