ರಾಜ್ಯಮಟ್ಟದ ರಂಗಪ್ರಶಸ್ತಿಗೆ ಕಲಾವಿದ ಶಿವರಾಮು ಆಯ್ಕೆ: ಸೆ.14ರಂದು ನಗರದ ಕೆವಿಎಸ್ ಭವನದಲ್ಲಿ ಪ್ರದಾನ

Award Press Meet
Published on

ಮಂಡ್ಯ: ಪ್ರತಿಷ್ಠಿತ ಕರ್ನಾಟಕ ಸಂಘದಿಂದ ನಟ ದಿ.ಎಂ.ರವಿಪ್ರಸಾದ್ ಹೆಸರಿನಲ್ಲಿ ಕೊಡಮಾಡುವ ಮೊದಲ ವರ್ಷದ ರಾಜ್ಯಮಟ್ಟದ ರಂಗಪ್ರಶಸ್ತಿಗೆ ಮಂಡ್ಯ ನಗರದ ಚಿಕ್ಕೇಗೌಡನದೊಡ್ಡಿಯ ಹವ್ಯಾಸಿ ರಂಗಕಲಾವಿದ ಸಿ.ಶಿವರಾಮು ಆಯ್ಕೆಯಾಗಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಸೆ.14ರಂದು ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಆಯೋಜಿಸಿರುವ ಸಮಾರಂಭದಲ್ಲಿ 10 ಸಾವಿರ ರೂ ನಗದಿನ ಜತೆಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ವಿವರಿಸಿದರು.

ಜಿಲ್ಲೆಯ ರಂಗಕೀರ್ತಿಯನ್ನು ಹಾಗೂ ಸಾಂಸ್ಕೃತಿಕತೆಯ ಶ್ರೇಷ್ಟತೆಯನ್ನು ಎತ್ತಿಹಿಡಿದ ರವಿಪ್ರಸಾದ್ ಅವರು ಅತ್ಯಂತ ಭರವಸೆಯ ನಟರಾಗಿ ಹೊರಹೊಮ್ಮಿದ್ದರು. ಆದರೆ ಅಭಿನಯದಲ್ಲಿ ಉತ್ತುಂಗಕ್ಕೇರುವ ಮುನ್ನವೇ ಅನಾರೋಗ್ಯದಿಂದ ಅಕಾಲ ಮರಣಕ್ಕೆ ತುತ್ತಾದರು. ಈ ಹಿನ್ನೆಲೆಯಲ್ಲಿ ಅವರ ತಂದೆ ಸಾಹಿತಿ ಡಾ.ಎಚ್.ಎಸ್.ಮುದ್ದೇಗೌಡ ಅವರು ಪ್ರತಿ ವರ್ಷ ಪ್ರಶಸ್ತಿ ನೀಡುತ್ತಿದ್ದಾರೆ. ಅಂದು ಸಂಜೆ 5 ಗಂಟೆಗೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಷಿ ಪ್ರಶಸ್ತಿ ಪ್ರದಾನ ಮಾಡಲಿದ್ದು, ಶಾಸಕ ರವಿಕುಮಾರ್ ಗಣಿಗ ಅಧ್ಯಕ್ಷತೆ ವಹಿಸುವರು. ಲಯನ್ಸ್ ಮಾಜಿ ಜಿಲ್ಲಾ ಗವರ್ನರ್ ಜಿ.ಎ.ರಮೇಶ್, ಡಾ.ಎಚ್.ಎಸ್.ಮುದ್ದೇಗೌಡ ಭಾಗವಹಿಸುವರು ಎಂದು ಹೇಳಿದರು.

ಕರ್ನಾಟಕ ಸಂಘದ ಕಾರ್ಯದರ್ಶಿ ಲೋಕೇಶ್ ಚಂದಗಾಲು, ನಗರಸಭೆ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮೀ ರಘುನಂದನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net