ಮೈಸೂರು: ಮಹಾರಾಜ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಇಂಜಿನಿಯರಿಂಗ್ ವಿಭಾಗದಿಂದ ನ.16ರಂದು 24 ಗಂಟೆಗಳ ವಿನೂತನ ರಾಜ್ಯ ಮಟ್ಟದ ತಾಂತ್ರಿಕ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಪ್ರಾಂಶುಪಾಲ ಡಾ.ಬಿ.ಸಿ.ನರೇಶ್ ಕುಮಾರ್ ತಿಳಿಸಿದರು.
ಬೆಳವಾಡಿ ಬಳಿ ಇರುವ ಕಾಲೇಜಿನ ಆವರಣದಲ್ಲಿ ಅಂದು ಬೆಳಗ್ಗೆ 9 ಗಂಟೆಯಿಂದ ಕಾರ್ಯಕ್ರಮ ಆರಂಭಗೊಂಡು ಮರು ದಿನ 9 ಗಂಟೆವೆರೆಗೆ ನಿರಂತರವಾಗಿ ಮ್ಯಾರಥಾನ್ ಮಾದರಿ ಕಾರ್ಯಕ್ರಮ ನಡೆಯಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದಿನವಿಡೀ ನಡೆಯುವ ಈ ಸಿವಿಲ್ ಇಂಜಿನಿಯರಿಂಗ್ ಹಬ್ಬದಲ್ಲಿ ಸಿವಿಲ್ ಇಂಜಿನಿಯರಿಂಗ್ ಮತ್ತು ಅರ್ಕಿಟೆಕ್ಟರ್ ವಿದ್ಯಾರ್ಥಿಗಳಿಗೆ ಮಾಡಲ್ ಮೇನಿಯಾ, ಐಡಿಯಾಥಾನ್, ಎಸ್ಟಿಮ್ಯಾಟ್ರಿಕ್ಸ್, ಕ್ಯಾಟ್ವೆಂಚರ್, ಬೈನ್ ಟೀಸರ್, ಸ್ಕಿಪ್ಪೋಮೇನಿಯಾ, ಎಶೋ ಬಿಲ್ಡ್‌ನಂತಹ ಕೌಶಲಕ್ಕೆ ಸವಾಲಾಗಬಲ್ಲ ಸ್ಪರ್ಧೆಗಳು ಇರುತ್ತವೆ. ಆಸಕ್ತ ವಿದ್ಯಾರ್ಥಿಗಳು ಮೂವರ ತಂಡ ರಚಿಸಿಕೊಂಡು ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ ದೂ. 9110225282ನ್ನು ಸಂಪರ್ಕಿಸಬಹುದು ಎಂದರು.
ಸಿವಿಲ್ ವಿಭಾಗದ ಮುಖ್ಯಸ್ಥ ಡಾ.ಸಿ.ರಾಮಕೃಷ್ಣಗೌಡ, ಆಡಳಿತಾಧಿಕಾರಿ ಅನಿರುದ್ಧ, ಸಹ ಪ್ರಾಧ್ಯಾಪಕರಾದ ರವಿಕಿರಣ್, ಶಿವಸಾಗರ್ ಇತರರು ಇದ್ದರು.