ರಾಜ್ಯಮಟ್ಟದ ಟೇಕ್ವಾಂಡೋ ಸ್ಪರ್ಧೆ

13 ckm 5
ಚಿಕ್ಕಮಗಳೂರಿನ ಎಐಟಿ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಟೇಕ್ವಾಂಡೋ ಕ್ರೀಡಾಕೂಟವನ್ನು ಶಾಸಕ ಎಚ್.ಡಿ.ತಮ್ಮಯ್ಯ ಉದ್ಘಾಟಿಸಿದರು. ಪುಟ್ಟರಾಜು, ಪಾಲಾಕ್ಷ ಮೂರ್ತಿ, ಸಂಜೀವ್‌ಕುಮಾರ್, ಕೃಷ್ಣಮೂರ್ತಿ, ರವೀಶ್, ಸಂತೋಷ್ ಕುಮಾರ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಟೇಕ್ವಾಂಡೊ ಸ್ಪರ್ಧೆಗೆ ಹೆಚ್ಚು ಉತ್ತೇಜನ ನೀಡುವ ಉz್ದೆÃಶದಿಂದ ನಮ್ಮ ಸರ್ಕಾರ ಇತರೆ ಕ್ರೀಡಾಪಟುಗಳಿಗೆ ಉದ್ಯೋಗದಲ್ಲಿ ನೀಡುವಂತೆ ಶೇ. ೨ರಷ್ಟು ಮೀಸಲಾತಿಯನ್ನು ಟೆಕ್ವಾಂಡೊ ಕ್ರೀಡಾಪಟುಗಳಿಗೂ ನೀಡಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.

ರಾಜ್ಯ ಟೆಕ್ವಾಂಡೋ ಸಂಸ್ಥೆ, ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾಡಳಿತ ಮತ್ತು ಜಿಪಂ ಹಾಗೂ ಎಐಟಿ ಆಶ್ರಯದಲ್ಲಿ ನಡೆಯುತ್ತಿರುವ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ ಬಾಲಕಿಯರ ರಾಜ್ಯ ಮಟ್ಟದ ಪ್ರಥಮ ಟೆಕ್ವಾಂಡೊ ಸ್ಪರ್ಧೆಯನ್ನು ಎಐಟಿ ಆವರಣದಲ್ಲಿ ಭಾನುವಾರ ಉದ್ಘಾಟಿಸಿ ಮಾತನಾಡಿದರು.
೨೦೦೮ರಲ್ಲಿ ಟೇಕ್ವಾಂಡೊ ಪ್ರಾರಂಭವಾದಾಗ ನಾನು ನಗರಸಭೆ ಅಧ್ಯಕ್ಷನಾಗಿ ಉದ್ಘಾಟನೆ ಮಾಡಿದ್ದೆ. ಯೋಗಾಯೋಗ ಈಗ ರಾಜ್ಯಮಟ್ಟದ ಪ್ರಪ್ರಥಮ ಟೇಕ್ವಾಂಡೊ ಸ್ಪರ್ಧೆಯನ್ನು ಉದ್ಘಾಟಿಸುವ ಭಾಗ್ಯ ನನಗೆ ದೊರೆತಿರುವುದು ಸಂತೋಷವಾಗಿದೆ. ನಮ್ಮ ಸರ್ಕಾರ ಎಲ್ಲ ೩೪ ಇಲಾಖೆಗಳಲ್ಲಿ ಕ್ರೀಡಾಪಟುಗಳಿಗೆ ನೀಡುವ ಶೇ. ೨ರಷ್ಟು ಮೀಸಲನ್ನು ಟೇಕ್ವಾಂಡೊ ಪಟುಗಳಿಗೂ ವಿಸ್ತರಿಸಿದೆ. ಇದು ಸಂತೋಷದ ವಿಚಾರ ಎಂದರು.
ಜಿಲ್ಲೆಯ ಟೇಕ್ವಾಂಡೊ ತರಬೇತುದಾರ ಗಿರೀಶ್ ಅವರ ಉತ್ತೇಜನದಿಂದ ಇಲ್ಲಿನ ನಿರೀಕ್ಷಾ ನಾಡಿಗ್ ಮತ್ತು ರಾಹುಲ್ ಎಂಬ ಸ್ಪರ್ಧಿಗಳು ಅಂತರಾಷ್ಟಿçÃಯ ಮಟ್ಟದಲ್ಲಿ ಸ್ಪರ್ಧಿಸುವಂತಾಗಿದೆ. ನಮ್ಮ ಸರ್ಕಾರ ಒಲಂಪಿಕ್ ನಲ್ಲಿ ಚಿನ್ನ ಗೆದ್ದವರಿಗೆ ೭.೫ ಕೋಟಿ, ಬೆಳ್ಳಿ ಗೆದ್ದವರಿಗೆ ೫ ಕೋಟಿ ರೂ., ಕಂಚು ಗೆದ್ದವರಿಗೆ ೩ ಕೋಟಿ ರೂ. ನೀಡುತ್ತಿದೆ. ಇದು ಇತರೆ ಯಾವುದೇ ರಾಜ್ಯದಲ್ಲಿ ಇಲ್ಲ. ಪಾಲಕರು ಮತ್ತು ಶಿಕ್ಷಕರು ಮಕ್ಕಳನ್ನು ಬರಿ ಶಿಕ್ಷಣಕ್ಕೆ ಸೀಮಿತಗೊಳಿಸದೆ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಬೇಕು ಎಂದು ಹೇಳಿದರು.
ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಪಾಲಾಕ್ಷಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ಟೇಕ್ವಾಂಡೋ ತರಬೇತುದಾರ ಗಿರೀಶ್ ಅವರ ಹೋರಾಟದ ಫಲವಾಗಿ ರಾಜ್ಯಮಟ್ಟದಲ್ಲಿ ಟೇಕ್ವಾಂಡೊ ಸೇರ್ಪಡೆಯಾಗಿದೆ. ೧೪-೧೭ ರ ವಯೋಮಿತಿಯ ಬಾಲಕ, ಬಾಲಕಿಯರ ಟೇಕ್ವಾಂಡೊ ಸ್ಪರ್ಧೆ ನಡೆಯಲಿದೆ ಎಂದು ತಿಳಿಸಿದರು.
ಡಿಡಿಪಿಐ ಪುಟ್ಟರಾಜು, ರಾಜ್ಯ ಟೇಕ್ವಾಂಡೊ ಸಂಸ್ಥೆಯ ಅಧ್ಯಕ್ಷ ಸಂಜೀವ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ಬಿಇಒ ರವೀಶ್, ಜಿಲ್ಲಾ ಟ್ವೇಕ್ವಾಂಡೊ ಸಂಸ್ಥೆಯ ಅಧ್ಯಕ್ಷ ಸಂತೋಷ್‌ಕುಮಾರ್, ತರಬೇತುದಾರರಾದ ವೆಂಕಟೇಶ್, ಪ್ರಧಾನಕಾರ್ಯದರ್ಶಿ ಯದು ಕುಮಾರ್, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಾನಾಯ್ಕ, ಜಿಲ್ಲಾ ಪ್ರಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬೈರೇಗೌಡ, ಪ್ರಮುಖರಾದ ಡಿ.ಪಿ.ಕುಮಾರಸ್ವಾಮಿ, ಪರಮೇಶ್ವರಪ್ಪ, ಮಂಜುನಾಥ್, ಉಮೇಶ್, ಪ್ರವೀಣ್ ಪಿಂಟೋ, ಶಿವಪ್ಪ, ಶೇರ್‌ಅಲಿ, ಸಂತೋಷ್‌ಕುಮಾರ್, ಶಂಕರೇಗೌಡ, ಸಯದ್ ರಿಯಾಜ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net