

ಮಂಗಳೂರು: ಕರ್ನಾಟಕ ರಾಜ್ಯ ಟೇಬಲ್ ಟೆನ್ನಿಸ್ ಅಸೋಸಿಯಾಷನ್ ಆಶ್ರಯದೊಂದಿಗೆ ದಕ್ಷಿಣ ಕನ್ನಡ ಜಿಲ್ಲಾ ಟೇಬಲ್ ಟೆನ್ನಿಸ್ ಅಸೋಸಿಯೇಷನ್ ವತಿಯಿಂದ ಜುಲೈ 4ರಂದು ನಗರದ ಕಂಕನಾಡಿಯ ಾದರ್ ಮುಲ್ಲರ್ ಒಳಾಂಗಣ ಕ್ರೀಡಾಂಗಣದಲ್ಲಿ ‘ಕರ್ನಾಟಕ ರಾಜ್ಯ ರ‌್ಯಾಂಕಿಂಗ್ ಟೇಬಲ್ ಟೆನ್ನಿಸ್ ಪಂದ್ಯಾವಳಿ-2024’ ಆಯೋಜಿಸಲಾಗಿದೆ.
ರಾಜ್ಯದ ಸುಮಾರು 600ರಿಂದ 800 ಕ್ರೀಡಾಪಟುಗಳು ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ರ‌್ಯಾಂಕಿಂಗ್ ಹಾಗೂ ಪದಕ ವಿಜೇತ ಕೆಲವು ಕ್ರೀಡಾಪಟುಗಳ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಕ್ರೀಡಾಪಟುಗಳ ಪಾಲ್ಗೊಳ್ಳುವಿಕೆ ಈ ಪಂದ್ಯಾವಳಿಯ ಆಕರ್ಷಣೆಯಾಗಲಿದೆ ಎಂದು ಟೇಬಲ್ ಟೆನ್ನಿಸ್ ಅಸೋಸಿಯೇಷನ್ ದ.ಕ. ಜಿಲ್ಲಾ ಘಟಕದ ಅಧ್ಯಕ್ಷ ಗೌತಮ್ ಶೆಟ್ಟಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದಕ್ಷಿಣ ಕನ್ನಡದಲ್ಲಿ ಕಳೆದ 8 ವರ್ಷಗಳ ಹಿಂದೆ ರಾಜ್ಯ ಮಟ್ಟದ ರ‌್ಯಾಂಕಿಂಗ್ ಟೇಬಲ್ ಟೆನ್ನಿಸ್ ಪಂದ್ಯಾವಳಿಯ ಟಾರ್ಪೊಡೆಸ್ ಸ್ಪೋಟ್ಸ್ ಕ್ಲಬ್ ಹಳೆಯಂಗಡಿ ಇಲ್ಲಿ ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಈ ಬಾರಿಯೂ ಅತ್ಯಂತ ಯಶಸ್ವಿಯಾಗಿ ಸಂಘಟಿಸಲು ಸಿದ್ಧತೆ ಮಾಡಲಾಗಿದೆ ಎಂದು ಗೌತಮ್ ಶೆಟ್ಟಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಷನ್‌ನ ಪ್ರಮುಖರಾದ ಅಶ್ವಿನ್ ಕುಮಾರ್ ಪಡುಕೋನೆ, ಅರ್ಚನಾ, ಕ್ಲಾೃರಾ ಮರಿಯಾ, ಪ್ರದೀಪ್, ವಿಜಯ್, ನಿತೀಶ್ ಬಿ.ಎಂ., ನೆಲ್ಸನ್ ನೊರೊನ್ನಾ ಉಪಸ್ಥಿತರಿದ್ದರು.