

ಮಂಡ್ಯ: ಬೆಳಗಾವಿಯಲ್ಲಿ ಆ.31ರಿಂದ ಸೆ.3ರವರೆಗೆ ನಡೆದ ರಾಜ್ಯಮಟ್ಟದ ಟೇಬಲ್ ಟೆನ್ನಿಸ್ ಟೂರ್ನಿಯಲ್ಲಿ ಪಿಇಟಿ ಟೇಬಲ್ ಟೆನ್ನಿಸ್ ತರಬೇತಿ ಕೇಂದ್ರದ ವಿದ್ಯಾರ್ಥಿನಿ ಎಚ್.ರಚಿತಾ 2ನೇ ಸ್ಥಾನ ಪಡೆದಿದ್ದಾರೆ.
ನಗರದಲ್ಲಿ ವಿದ್ಯಾರ್ಥಿನಿಯನ್ನು ಅಭಿನಂದಿಸಿದ ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ, ಪಿಇಟಿಯಲ್ಲಿ ತರಬೇತಿ ಪಡೆಯುತ್ತಿರುವ ರಚಿತಾ ರಾಜ್ಯಮಟ್ಟದ ಟೂರ್ನಿಯಲ್ಲಿ ಪ್ರಶಸ್ತಿ ಗಳಿಸಿರುವುದ ಹೆಮ್ಮೆಯ ವಿಷಯ. ಮುಂದಿನ ದಿನಗಳಲ್ಲಿ ಇವರು ಇನ್ನು ಉತ್ತಮವಾದ ಸಾಧನೆ ಮಾಡುವ ಮೂಲಕ ಇವರ ಕ್ರೀಡಾ ಜೀವನ ಯಶಸ್ವಿಯಾಗಲಿ. ತರಬೇತುದಾರರು ಶ್ರಮಪಟ್ಟು ಇನ್ನೂ ಹೆಚ್ಚಿನ ಮಟ್ಟದಲ್ಲಿ ತರಬೇತಿ ನೀಡಿ ರಾಜ್ಯಮಟ್ಟಕ್ಕೆ ಆಯ್ಕೆಯಾಗುವಂತೆ ತಯಾರು ಮಾಡಬೇಕು ಎಂದರು.
ಮುಖ್ಯ ತರಬೇತುದಾರ ಎಂ.ಎ.ಮಂಜುನಾಥ್, ಟೇಬಲ್ ಟೆನ್ನಿಸ್ ತರಬೇತಿ ಕೇಂದ್ರದ ಪಾಲುದಾರ ಎಂ.ಎಸ್.ಉಮೇಶ್, ಬಿ.ಎಸ್.ಪ್ರತಾಪ್, ರಚಿತಾ ಪಾಲಕರಾದ ಬಿ.ಎಂ.ಹೇಮಾ, ವೈ.ಸಿದ್ದೇಶ್ ಇದ್ದರು.