

ರಾಯಚೂರು ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿಗೆ ಮರು ಸಮೀಕ್ಷೆ ನಡೆಸಿ ಜಾರಿಗೆ ಸರ್ಕಾರ ಮುಂದಾಗಬೇಕೆAದು ಒತ್ತಾಯಿಸಿ ಮಾ.೨೩ ರಂದು ಬೆಂಗಳೂರಿನ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿ ರಾಜ್ಯಮಟ್ಟದ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ರಾಜ್ಯ ಬಲಗೈ ಹೊಲೆಯ ಸಂಬAಽತ ಜಾತಿಗಳ ಒಳ ಮೀಸಲಾತಿ ಹೋರಾಟ
ಸಮಿತಿ ಸಂಚಾಲಕ ರವೀಂದ್ರ ನಾಥ ಪಟ್ಟಿ ಹೇಳಿದರು.
ನಗರ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಳ ಮೀಸಲು ಜಾರಿಗೆ ಕಳೆದ ೩೦ ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಒಳ ಮೀಸಲಾತಿ ಹೋರಾಟಕ್ಕೆ ಹೊಲೆಯ ಸಮುದಾಯ ವಿರೋಧವಿಲ್ಲ. ಆದರೆ ಮಾದಿಗ ಸಮೂದಾಯ ಸಂಘಟನೆಗಳ ಮುಖಂಡರುಗಳು ಸಮಾಜದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ.
ರಾಜ್ಯ ಸರ್ಕಾರ ಒಳಮೀಸಲು ಜಾರಿಗೆ ನಿರ್ಧರಿಸಬೇಕಿದೆ ಹೊರತು ಮಲ್ಲಿಕಾರ್ಜುನ ಖರ್ಗೆಯವರಲ್ಲ. ಬಲಗೈ ಸಮೂದಾಯ ಜನರು ಅನೇಕ ಅನ್ಯಾಯಗಳಿಗೆ ಒಳಗಾಗುತ್ತಲೇ ಬಂದಿದ್ದಾರೆ. ಮಾದಿಗ ಸಮೂದಾಯಕ್ಕೆ ಮೂರು ಪ್ರತ್ಯೇಕ ನಿಗಮಗಳಿವೆ.
ಚರ್ಮಗಾರರ ನಿಗಮ, ಸ-Áಯಿ ಕರ್ಮಚಾರಿಗಳ ನಿಗಮ, ಆದಿಜಾಂಬವ ನಿಗಮಗಳಿವೆ. ಮೂರು ನಿಗಮಗಳಲ್ಲಿ ಮಾದಿಗೆ ಸಮೂದಾಯ ಜನರಿಗೆ ಸೌಲಭ್ಯಗಳು ದೊರಕುತ್ತವೆ. ಆದರೆ ಬಲಗೈ ಸಮೂದಾಯವರಿಗೆ ಅಂಬೇಡ್ಕರ ಅಭಿವೃದ್ದಿ ನಿಗಮ ಮಾತ್ರವಿದೆ. ಇಂದಿಗೂ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಬಲಗೈ ಸಮೂದಾಯ ಒಬ್ಬೇ ಒಬ್ಬರು ಅಧ್ಯಕ್ಷರಾಗಿಲ್ಲ. ಮಾದಿಗ ಸಮೂದಾಯ ಮೂರು ಜನರು ಅಧ್ಯಕ್ಷರಾಗಿದ್ದಾರೆ.
ಇಬ್ಬರು ಹೈಕೋರ್ಟ ನ್ಯಾಯಮೂರ್ತಿಗಳು ಮಾದಿಗ ಸಮಾಜದವರಿಗೆ ದೊರಕಿದೆ. ಇಂದಿಗೂ ಬಲಗೈ ಸಮಾಜ ಒಬ್ಬರಿಗೂ ಅವಕಾಶ ದೊರಕಿಲ್ಲ. ಕಾರಣ ಬೆಂಗಳೂರಿನಲ್ಲಿ ನಡೆಯಲಿರುವ ವಿಚಾರ ಸಂಕಿರಣದಲ್ಲಿ
ಎಲ್ಲಾ ಜಿಲ್ಲೆಗಳಿಂದ ಜನರು ಭಾಗವಹಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಮ್ಮಣ್ಣ, ಭಾಸ್ಕರರಾಜ್, ಆರ್.ಬಸವರಾಜ, ನರಸಿಂಹಲು ನೆಲಹಾಳ,ರಾಜು ಪಟ್ಟಿ, ಯಲ್ಲಪ್ಪ ಇದ್ದರು.