ಮುಂಡರಗಿಯಲ್ಲಿ ರಾಜ್ಯ ಮಟ್ಟದ ವಿಚಾರ ಸಂಕಿರಣ

seminar
Published on

ಮುಂಡರಗಿ: ಪಟ್ಟಣದ ಕ.ರಾ. ಬೆಲ್ಲದ ಮಹಾವಿದ್ಯಾಲಯ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಪತ್ರಗಾರ ಇಲಾಖೆ ಬೆಂಗಳೂರು, ಪ್ರಾದೇಶಿಕ ಕಚೇರಿ ಧಾರವಾಡ ಮತ್ತು ದೇಶಗತಿ ಸಂಶೋಧನ ಸಂಸ್ಥೆ ಕಲಕೇರಿ ಇವುಗಳ ಸಹಯೋಗದಲ್ಲಿ ‘ಕಣ್ಮರೆಯಾದ ದೇಶಗತಿ, ಕಲಕೇರಿ ಸಂಸ್ಥಾನದ ಗದಗ ಮತ್ತು ಕೊಪ್ಪಳ ಪ್ರದೇಶಗಳ ಐತಿಹಾಸಿಕ ನಿರೂಪಣೆಗಳು ಹಾಗೂ ಚಾರಿತ್ರಿಕ ದಾಖಲೆಗಳ ಪ್ರದರ್ಶನ’ ಕುರಿತು ಎರಡು ದಿನಗಳ ರಾಜ್ಯ ಮಟ್ಟದ ವಿಚಾರ ಸಂಕಿರಣ ಏ. 28 ಮತ್ತು 29ರಂದು ಜರುಗಲಿದೆ.

ಏ. 28ರಂದು ಬೆಳಗ್ಗೆ 9.30ಕ್ಕೆ ನಡೆಯುವ ಕಾರ್ಯಕ್ರಮದ ಸಾನ್ನಿಧ್ಯವನ್ನು ನಾಡೋಜ ಡಾ.ಅನ್ನದಾನೀಶ್ವರ ಶಿವಯೋಗಿಗಳು ವಹಿಸುವರು. ಡಾ.ಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವ ವಹಿಸುವರು. ಸಭಾಪತಿ ಬಸವರಾಜ ಹೊರಟ್ಟಿ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಚಾರಿತ್ರಿಕ ದಾಖಲೆಗಳ ಪ್ರದರ್ಶನ ಉದ್ಘಾಟಿಸುವರು.

ಶಾಸಕ ಡಾ. ಚಂದ್ರು ಲಮಾಣಿ ‘ಲಕ್ಕುಂಡಿ ಬೆಳವಣಿಗೆಯಲ್ಲಿ ಕಲ್ಯಾಣ ಚಾಲುಕ್ಯರ ಕೊಡುಗೆ’ ಗ್ರಂಥ ಬಿಡುಗಡೆಗೊಳಿಸುವರು.

ಕಾಲೇಜ್ ಮೇಲ್ವಿಚಾರಣಾ ಸಮಿತಿ ಕಾರ್ಯಾಧ್ಯಕ್ಷ ಆರ್.ಎಲ್. ಪೋಲೀಸಪಾಟೀಲ ಅಧ್ಯಕ್ಷತೆ ವಹಿಸುವರು. ನಂತರ ಅಪ್ಪಾಸಾಹೇಬ ದೇಸಾಯಿ ವೇದಿಕೆಯಲ್ಲಿ ಎರಡು ದಿನ ನಾಲ್ಕು ಗೋಷ್ಠಿಗಳು ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net