

ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕದ ಪಶ್ಚಿಮ ಘಟ್ಟಗಳು ವಿಶಿಷ್ಟ ಜೀವ ವೈವಿದ್ಯತೆ ಹೊಂದಿದೆ. ಮಾನವನ ಅಪರಿಮಿತ ಆಸೆಗಳು ಮತ್ತು ಹೆಚ್ಚುತ್ತಿರುವ ಕೈಗಾರಿಕೆಗಳಿಂದ ಪರಿಸರದ ಮೇಲೆ ಪರಿಣಾಮ ಬೀರುತ್ತಿದೆ. ಪರಿಸರವನ್ನು ಸಂರಕ್ಷಿಸಲು ಎಲ್ಲರೂ ಮುಂದಾಗಬೇಕು ಎಂದು ಚಿತ್ರನಟ, ಪರಿಸರವಾದಿ ಸುರೇಶ ಹೆಬ್ಳೀಕರ ಹೇಳಿದರು.
ನಗರದ ಕರ್ನಾಟಕ ವಿಶ್ವವಿದ್ಯಾಲಯದ ಗಾಂಽ ಅಧ್ಯಯನ ವಿಭಾಗದಿಂದ ಸಿನೆಟ್ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಮಕಾಲೀನ ಬಿಕ್ಕಟ್ಟಿನ ಸಂದರ್ಭದಲ್ಲಿ ಗಾಂಧಿ ಚಿಂತನೆ' ವಿಷಯ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿಪ್ರಸಕ್ತ ಪರಿಸರದ ಬಿಕ್ಕಟುಗಳು: ಗಾಂಧಿಜಿ ಅವರ ಸಮಕಾಲೀನ ದೃಷ್ಟಿಕೋನ' ಎಂಬ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ರಾಣೆಬೆನ್ನೂರಿನಿಂದ ಬೆಳಗಾವಿ ಮೂಲಕ ಹರಡಿರುವ ಪಶ್ಚಿಮ ಘಟ್ಟಗಳ ಕುರುಚಲು ಕಾಡು, ಜಲಮೂಲ ಮತ್ತು ಅನೇಕ ಔಷಧೀಯ ಸಸ್ಯ, ಹುಲ್ಲುಗಾವಲು ಪ್ರದೇಶ, ಜೀವ ವೈವಿಧ್ಯತೆಗೆ ಹೆಸರುವಾಸಿ. ಅಭಿವೃದ್ಧಿಯ ಹೆಸರಲ್ಲಿ ಪರಿಸರ ನಾಶ ಸಲ್ಲದು. ಜೀವಸಂಕುಲ ರಕ್ಷಣೆ ಯುವ ಸಮುದಾಯದ ಮೇಲಿದೆ ಎಂದರು.
ಕಪ್ಪತಗುಡ್ಡದ ನಂದಿವೇರಿ ಸಂಸ್ಥಾನಮಠದ ಮಠದ ಶ್ರೀ ಶಿವಕುಮಾರ ಸ್ವಾಮೀಜಿ `ಪರಿಸರ ಸಂರಕ್ಷಣೆ ಮತ್ತು ಗಾಂಽ ಮಾರ್ಗ' ವಿಷಯ ಕುರಿತು ಮÁತನಾಡಿ, ಕಪ್ಪತಗುಡ್ಡ ಸಂರಕ್ಷಿತ ಅರಣ್ಯ ಪ್ರದೇಶದವಾಗಿದ್ದು, ಅನೇಕ ವಿವಿಧ ರೀತಿಯ ಔಷಧೀಯ ಸಸ್ಯಗಳನ್ನು ಒಳಗೊಂಡಿದೆ. ಯುವ ಶಕ್ತಿಯ ಚಳವಳಿ ಮೂಲಕ ಮನುಕುಲದ ಒಳಿತಿಗಾಗಿ ಎಲ್ಲರೂ ಪರಿಸರ ಕಾಪಾಡುವ ಕೆಲಸ ಮಾಡಬೇಕು ಎಂದರು.
ಕವಿವಿ ಪ್ರಭಾರ ಕುಲಪತಿ ಡಾ. ಬಿ.ಎಂ. ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹವಾಮಾನ ವೈಪರೀತ್ಯ ತಡೆಗೆ ಪರಿಸರ ರಕ್ಷಣೆ ಅಗತ್ಯ. ಯುವಕರು ಪರಿಸರ ಸಂರಕ್ಷಿಸಿ ಬೆಳೆಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಬೆAಗಳೂರಿನ ಐಸೆಕ್ ಸಂಸ್ಥೆಯ ಪ್ರಾಧ್ಯಾಪಕ ಪ್ರೊ. ಗೋಪಾಲ ಕಡೆಕೋಡಿ ಮಾತನಾಡಿ, ಮಹಾತ್ಮಾ ಗಾಂಧಿಯವರ ತತ್ವಗಳಲ್ಲಿ ಪರಿಸರ ಕಾಳಜಿಯನ್ನು ಕಾಣಬಹುದು. ಗಾಂಧಿಜಿ ಅಂದಿನ ದಿನಗಳಲ್ಲೇ ಪರಿಸರದ ಉಳಿವಿಗಾಗಿ ಚಳವಳಿಗಳ ಮೂಲಕ ಅನೇಕ ಕ್ರಮ ಕೈಗೊಂಡಿದ್ದರು ಎಂದರು.
ಗಾAಽÃಜಿ ಜಯಂತಿ ಅಂಗವಾಗಿ ಆಯೋಜಿಸಿದ್ದ ಅಂತರ ಕಾಲೇಜು ಸಿದ್ಧ ಭಾಷಣ ಸ್ಪರ್ಧೆಯಲ್ಲಿ ಪೂರ್ವಿ ಜೆ. ಪ್ರಥಮ, ಪೂಜಾ ಚವ್ಹಾನ ಮತ್ತು ಶಿವಾನಂದ ತೇಗೂರ ದ್ವಿತೀಯ, ಅರ್ಚನಾ ವೆಂಕಟೇಶ ತೃತೀಯ ಬಹುಮಾನ ಪಡೆದರು.