

ಮೈಸೂರು: ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ ನಗರ ಎಂಐಟಿ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿ ಎಸ್.ಯಶಸ್ ಅವರು 4 ಚಿನ್ನದ ಪದಕ ಪಡೆದು ಗಮನ ಸೆಳೆದಿದ್ದಾರೆ.
ಎಂಎಎಸ್‌ಪಿ ಅಕ್ವಾಟಿಕ್ ಕ್ಲಬ್ ಹಾಗೂ ಇನ್ನರ್ ವ್ಹೀಲ್ ಕ್ಲಬ್ ವತಿಯಿಂದ ಮೈಸೂರು ವಿಶ್ವವಿದ್ಯಾಲಯದ ಈಜು ಕೊಳದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ ಈ ಸಾಧನೆ ಮಾಡಿದ್ದಾರೆ.
ಸ್ಪರ್ಧೆಯ ಗ್ರೂಪ್-7 ವಿಭಾಗದ 50 ಮೀ.ಬಟರ್ ಫ್ಲೈ, 50 ಮೀ.ಬ್ಯಾಕ್ ಸ್ಟ್ರೋಕ್, 50 ಮೀ.ಫ್ರೀ ಸ್ಟೈಲ್ ಹಾಗೂ 50*4 ಫ್ರೀಸ್ಟೈಲ್ ರಿಲೇ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಯಶಸ್ ಮೈಸೂರು ಜಿಲ್ಲಾ ಈಜು ಸಂಸ್ಥೆಯ ತಂಡವನ್ನು ಪ್ರತಿನಿಧಿಸಿದ್ದರು. ಇವರು ಮೈಸೂರು ವಿಶ್ವವಿದ್ಯಾಲಯ ನೌಕರ ಎ.ಆರ್.ಸತೀಶ್, ಸಿ.ಹೇಮಾವತಿ ದಂಪತಿಯ ಪುತ್ರ.