

ಮಂಡ್ಯ: ಜನತಾ ಶಿಕ್ಷಣ ಟ್ರಸ್ಟ್, ಡಾ.ಎಚ್.ಡಿ.ಚೌಡಯ್ಯ ಕ್ರೀಡಾ ಸಮುಚ್ಛಯ, ಪಿಇಟಿ ಈಜು ಕೇಂದ್ರ ವತಿಯಿಂದ ಆ.27ರಂದು ನಗರದ ಪಿಇಟಿ ಈಜು ಕೇಂದ್ರದಲ್ಲಿ ರಾಜ್ಯಮಟ್ಟದ ಪಿಇಟಿ ನಾನ್ ಮೆಡ್‌ಲಿಸ್ಟ್ ಈಜು ಸ್ಪರ್ಧೆ ಆಯೋಜಿಸಲಾಗಿದೆ ಎಂದು ಪಿಇಟಿ ನಿರ್ದೇಶಕ ಡಾ.ರಾಮಲಿಂಗಯ್ಯ ತಿಳಿಸಿದರು.
ಒಂದೇ ದಿನ ಒಟ್ಟು 96 ವಿವಿಧ ರೀತಿಯ ಈಜು ಸ್ಪರ್ಧೆ ನಡೆಯಲಿದೆ. ಅಂತೆಯೇ 6 ರಿಂದ 17 ವರ್ಷದೊಳಗಿನ ಈಜುಪಟುಗಳು ಭಾಗವಹಿಸಬಹುದಾಗಿದೆ. ಇದುವರೆಗೂ 300 ಬಾಲಕರು ಹಾಗೂ 150 ಬಾಲಕಿಯರು ಸೇರಿದಂತೆ ಒಟ್ಟು 450 ಈಜುಪಟುಗಳು ನೋಂದಣಿಯಾಗಿದ್ದಾರೆ. ವಿಜೇತರಿಗೆ ಟ್ರೋಫಿ, ಪಾರಿತೋಷಕ ಸೇರಿದಂತೆ ವಿವಿಧ ಬಹುಮಾನಗಳನ್ನು ವಿತರಿಸಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
27ರಂದು ಬೆಳಗ್ಗೆ 10.30ಕ್ಕೆ ಸ್ಪರ್ಧೆಯನ್ನು ಅಂತಾರಾಷ್ಟ್ರೀಯ ಪ್ಯಾರಾ ಈಜುಪಟು ಪುನೀತ್‌ನಂದಕುಮಾರ್ ಉದ್ಘಾಟಿಸುವರು. ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಉಪಾಧ್ಯಕ್ಷ ಬಸವಯ್ಯ, ಜಂಟಿ ಕಾರ್ಯದರ್ಶಿ ಕೆ.ಆರ್.ದಯಾನಂದ ಭಾಗವಹಿಸುವರು. ಸಂಜೆ 5.30ಕ್ಕೆ ಸಮಾರೋಪ ಸಮಾರಂಭವಿದ್ದು, ಪಿಇಟಿ ಕಾರ್ಯದರ್ಶಿ ಎಸ್.ಎಲ್.ಶಿವಪ್ರಸಾದ್ ಅಧ್ಯಕ್ಷತೆ ವಹಿಸುವರು. ಉಪಾಧ್ಯಕ್ಷ ಎಂ.ಬಿ.ಶ್ರೀಧರ್ ಬಹುಮಾನ ವಿತರಿಸುವರು. ನಿರ್ದೇಶಕ ಡಾ.ರಾಮಲಿಂಗಯ್ಯ ಸಮಾರೋಪ ನುಡಿಗಳನ್ನಾಡಲಿದ್ದಾರೆಂದು ತಿಳಿಸಿದರು.
ಪಿಇಟಿ ಈಜುಕೇಂದ್ರದ ಆಡಳಿತಾಧಿಕಾರಿ ಡಾ.ಚಂದ್ರಶೇಖರ್, ತರಬೇತುದಾರ ಸಿ.ಎಂ.ಗಿರೀಶ್‌ಕುಮಾರ್, ವ್ಯವಸ್ಥಾಪಕ ಕಾರ್ತಿಕ್ ಇದ್ದರು.