ರಾಜ್ಯಮಟ್ಟದ ಈಜು ಸ್ಪರ್ಧೆಯಲ್ಲಿ ಬಳ್ಳಾರಿ ಜಿಲ್ಲೆಯ ಅಂಧ ಮಕ್ಕಳಿಗೆ 37 ಪದಕ !

140120 Ballari Blind Swimming Medals
Published on

ಬಳ್ಳಾರಿ: ಆರ್ಟ್ ಆಫ್ ಸ್ವಿಮ್ಮಿಂಗ್ ಹಾಗೂ ಬ್ಲುಫಿನ್ ಫೌಂಡೇಷನ್‌ದಿಂದ ಬೆಂಗಳೂರಿನ ನಾಗರಬಾವಿಯ ಕೆಎಲ್‌ಇ ಈಜುಕೊಳದಲ್ಲಿ ಜ.11ರಂದು ನಡೆದ ರಾಜ್ಯ ಮಟ್ಟದ ಅಂಗವಿಕಲರ ಈಜು ಸ್ಪರ್ಧೆಯಲ್ಲಿ ಜಿಲ್ಲೆಯ ಅಂಧ ಹಾಗೂ ಅಂಗವಿಕಲ ಈಜುಪಟುಗಳು ಪದಕಗಳನ್ನು ಜಯಿಸಿದ್ದಾರೆ.

ದೈಹಿಕ ಅಂಕವಿಲಕತೆ, ಅಂಧ ಹಾಗೂ ಬುದ್ಧಿಮಾಂದ್ಯ ವಿಭಾಗದಲ್ಲಿ 13 ಸ್ಪರ್ಧಿಗಳು ಪಾಲ್ಗೊಂಡಿದ್ದು, 37 ಪದಕ ಗೆದ್ದಿದ್ದಾರೆ. ಈ ಪೈಕಿ 29 ಚಿನ್ನ, ತಲಾ ನಾಲ್ಕು ಬೆಳ್ಳಿ ಹಾಗೂ ಕಂಚಿನ ಪದಕಗಳಾಗಿವೆ. ಅಂಧರ ವಿಭಾಗದಲ್ಲಿ ಪ್ರಫುಲ್, ವಿಶ್ವನಾಥ, ರಮ್ಯ ತಲಾ ಮೂರು ಚಿನ್ನ ಹಾಗೂ ಮಹಾಂತೇಶ ತಲಾ ಒಂದು ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕ ಪಡೆದಿದ್ದಾರೆ.

ಅಂಗವಿಕಲರ ವಿಭಾಗದಲ್ಲಿ ಗೋಪಿಚಂದ್, ಯೋಜಿತ್, ಕವಿತಾ, ಹನುಮಂತಮ್ಮ, ಸೈಯದ್ ಬಾಬು ತಲಾ ಮೂರು ಚಿನ್ನ, ರಾಹುಲ್ ಒಂದು ಚಿನ್ನ, ಎರಡು ಬೆಳ್ಳಿ, ಕೆಂಚಪ್ಪ ಮೂರು ಕಂಚಿನ ಪದಕ ಗೆದ್ದಿದ್ದಾರೆ. ಬುದ್ಧಿಮಾಂದ್ಯ ವಿಭಾಗದಲ್ಲಿ ಸಾಯಿ ನಿಖಿಲ್ ಒಂದು ಚಿನ್ನ, ಎರಡು ಬೆಳ್ಳಿ, ಪ್ರಶಾಂತ ಒಂದು ಕಂಚಿನ ಪದಕ ಜಯಿಸಿದ್ದಾರೆ ಎಂದು ಈಜು ತರಬೇತುದಾರರಾದ ರಜನಿ ಲಕ್ಕಾ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net