ರಾಜ್ಯಮಟ್ಟದ ಸಬ್ ಜೂನಿಯರ್ ಈಜು ಸ್ಪರ್ಧೆ: ಮಂಗಳೂರಿನ ಶ್ವಿತಿ ದಿವಾಕರ್ ಸುವರ್ಣ ವೈಯಕ್ತಿಕ ಚಾಂಪಿಯನ್

IMG-20240708-WA0078(1)
Published on

ಮಂಗಳೂರು: ಕರ್ನಾಟಕ ಈಜು ಸಂಸ್ಥೆಯ ಆಶ್ರಯದಲ್ಲಿ ಜುಲೈ 5 ರಿಂದ 7ರ ವರೆಗೆ ಜರುಗಿದ ಎನ್ ಆರ್ ಜೆ ರಾಜ್ಯಮಟ್ಟದ ಸಬ್ ಜೂನಿಯರ್ ಈಜು ಸ್ಪರ್ಧೆಯಲ್ಲಿ ಮಂಗಳೂರಿನ ವಿ ಒನ್ ಎಕ್ವ ಸೆಂಟರ್ ನಲ್ಲಿ ಈಜು ತರಬೇತಿ ಪಡೆಯುತ್ತಿರುವ ಕುಮಾರಿ ಶ್ವಿತಿ ದಿವಾಕರ್ ಇವರು ಸಬ್ ಜೂನಿಯರ್ ವಿಭಾಗದಲ್ಲಿ 5 ಚಿನ್ನ ಹಾಗೂ 2 ಬೆಳ್ಳಿಗಳೊಂದಿಗೆ ವೈಯಕ್ತಿಕ ಚಾಂಪಿಯನ್ನಾಗಿ ಮೂಡಿಬಂದಿದ್ದಾರೆ ಹಾಗೂ ಒರಿಸ್ಸಾದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಈಜು ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಇದೇ ಸ್ಪರ್ಧೆಯಲ್ಲಿ ವಿ ಒನ್ ಎಕ್ವ ಸೆಂಟರ್ ನ ಇತರ ಸ್ಪರ್ಧಿಗಳಾದ ಸಂತ ಅಲೋಶಿಯಸ್ ವಿದ್ಯಾಸಂಸ್ಥೆಗಳಲ್ಲಿ ಕಲಿಯುತ್ತಿರುವ ಸ್ನಿತಿಕ್ ಎನ್ ಇವರು ಎರಡು ಚಿನ್ನ ಎರಡು ಬೆಳ್ಳಿ ಹಾಗೂ ಒಂದು ಕಂಚಿನ ಪದಕ , ಸುದೀಪ್ತಿ ಸುನಿಲ್ ರವರು ಎರಡು ಚಿನ್ನ ಒಂದು ಬೆಳ್ಳಿ ಎರಡು ಕಂಚಿನ ಪದಕ , ದಿಯಾ ನಾಯಕ್ ರವರು ಒಂದು ಚಿನ್ನ ಒಂದು ಬೆಳ್ಳಿ ಪದಕ ಮತ್ತು ಸಿದ್ದಿ ಶೆಟ್ಟಿ ಅವರು ಒಂದು ಬೆಳ್ಳಿ ಪದಕಗಳನ್ನು ಗಳಿಸಿದ್ದಾರೆ.
ಇದೇ ಸ್ಪರ್ಧೆಯ ಜೂನಿಯರ್ ವಿಭಾಗದಲ್ಲಿ ಅಲೆಸ್ಟರ್ ಸ್ಯಾಮ್ಯುಯೆಲ್ ರೇಗೂ ಇವರು ಒಂದು ಚಿನ್ನ ಎರಡು ಬೆಳ್ಳಿ ಹಾಗೂ ಒಂದು ಕಂಚಿನ ಪದಕಗಳನ್ನು ಗಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇವರು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಈಜುಕೊಳದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿ ಒನ್ ಅಕ್ವಾ ಸೆಂಟರ್ ನಲ್ಲಿ ಮುಖ್ಯ ತರಬೇತುದಾರ ಲೋಕರಾಜ್ ವಿಟ್ಲ ಹಾಗೂ ಸ್ಯಾಂಜೋ ಕೆಪಿ ಇವರಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ.
ಇವರನ್ನು ಸಂತ ಆಲೋಶಿಯಸ್ ವಿದ್ಯಾಸಂಸ್ಥೆಗಳ ರೆಕ್ಟರ್ ರೆವರೆಂಡ್ ಫಾದರ್ ಮೆಲ್ವಿನ್ ಪಿಂಟೋ ಇವರು ಅಭಿನಂದಿಸಿದ್ದಾರೆ.
ವಿ ವನ್ ಅಕ್ವಾ ಸೆಂಟರ್ ನ ನಿರ್ದೇಶಕರಾದ ನವೀನ್ ಹಾಗೂ ರೂಪ ಜಿ ಪ್ರಭು ಇವರು ಮಾರ್ಗದರ್ಶನ ನೀಡಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net