ದಾಸರ ಗೀತೆಗಳ ಗಾಯನ ರಾಜ್ಯ ಮಟ್ಟದ ಸ್ಪರ್ಧೆ

11
Published on

ಮೈಸೂರು: ಮೈಸೂರಿನ ಅಜ್ಜನ ಮನೆ ಕಲಾ ಪ್ರಪಂಚದ ವತಿಯಿಂದ ನಗರದ ನಾದಬ್ರಹ್ಮ ಸಂಗೀತಾ ಸಭಾದಲ್ಲಿ ಎರಡು ದಿನಗಳ ಕಾಲ ಹರಿದಾಸ ಸ್ಮರಣೆ (ದಾಸರ ಗೀತೆಗಳ ಗಾಯನ) ರಾಜ್ಯ ಮಟ್ಟದ ಸ್ಪರ್ಧೆ ಜರುಗಿತು.

ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಂಗಳೂರು, ಹಾಸನ, ಶಿವಮೊಗ್ಗ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ 40ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮೇಧಾ ಉಡುಪ(ಪ್ರಥಮ), ಎಸ್.ಆರ್ಣ (ದ್ವಿತೀಯ), ನಿರಾಮಯ ವಿ.ರಾವ್(ತೃತೀಯ) ಬಹುಮಾನ ಪಡೆದರು. ಅಜ್ಜನ ಮನೆಯ ಸಂಸ್ಥಾಪಕ ಕೃಷ್ಣ, ತೀರ್ಪುಗಾರರಾದ ವಿದುಷಿ ಡಾ.ನಾಗವಲ್ಲಿ ನಾಗರಾಜ್, ವಿದುಷಿ ಡಾ.ತುಳಸಿ ರಾಮಚಂದ್ರ, ವಿದ್ವಾನ್ ರಾಜಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net