ಅಧ್ಯಾಪಕರಿಗೆ ರಾಜ್ಯಮಟ್ಟದ ಶಿಕ್ಷಣ ರತ್ನ ಪ್ರಶಸ್ತಿ ಪ್ರದಾನ

12
Published on

ನಗರದ ಹೂಟಗಳ್ಳಿಯಲ್ಲಿರುವ ದಕ್ಷ ಪದವಿಪೂರ್ವ ಮತ್ತು ಪದವಿ ಕಾಲೇಜಿನಲ್ಲಿ ಇತ್ತೀಚೆಗೆ ‘ಶೈಕ್ಷಣಿಕ ಮೌಲ್ಯಗಳು ಮತ್ತು ವಿದ್ಯಾರ್ಥಿಗಳ ಮುಂದಿನ ಪ್ರಗತಿಯ ಹಾದಿಗೆ ಅಡಿಪಾಯ’ ವಿಚಾರ ಸಂಕಿರಣ, ರಾಜ್ಯದ ವಿವಿಧ ಕಾಲೇಜುಗಳ ಪ್ರಾಂಶುಪಾಲರಿಗೆ ಹಾಗೂ ಅಧ್ಯಾಪಕರಿಗೆ ರಾಜ್ಯ ಮಟ್ಟದ ‘ಶಿಕ್ಷಣ ರತ್ನ’ ಪ್ರಶಸ್ತಿ ಪ್ರದಾನ, ಪುಸ್ತಕ ಬಿಡುಗಡೆ ಸಮಾರಂಭವು ಯಶಸ್ವಿಯಾಗಿ ನಡೆಯಿತು.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಹಾಗೂ ಬಹುಶ್ರುತ ವಿದ್ವಾಂಸರಾದ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ್ ಅವರು ಸಮಾರಂಭ ಉದ್ಘಾಟಿಸಿದರು. ಬಳಿಕ ಅಬಕಾರಿ ಇಲಾಖೆಯ ಉಪ ಆಯುಕ್ತ ಡಾ.ಬಿ.ಆರ್. ಹಿರೇಮಠ ವಿರಚಿತ ‘ಬುದ್ಧ, ಬಸವ, ಅಂಬೇಡ್ಕರ್’ ಕೃತಿಯನ್ನು ಬಿಡುಗಡೆ ಮಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ದಕ್ಷ ಕಾಲೇಜಿನ ಅಧ್ಯಕ್ಷ ಡಾ.ಪಿ. ಜಯಚಂದ್ರ ರಾಜು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ತಿನ ಸಭಾಪತಿ ಆಪ್ತ ಕಾರ್ಯದರ್ಶಿ ಕೆ.ಡಿ. ಶೈಲಾ, ಸಾಹಿತಿ ಮತ್ತು ಚಲನಚಿತ್ರ ನಿರ್ದೇಶಕ ಡಾ. ಗುಣವಂತ ಮಂಜು ಪಾಲ್ಗೊಂಡಿದ್ದರು.

ಇದೇ ಸಂದರ್ಭದಲ್ಲಿ ವಿದ್ವಾಂಸ ಪ್ರೊ. ಮಲ್ಲೆಪುರಂ ಜಿ. ವೆಂಕಟೇಶ್ ಅವರಿಗೆ ‘ಸರ್ವೋತ್ತಮ ಶಿಕ್ಷಣ ರತ್ನ’ ಪ್ರಶಸ್ತಿ, ಡಾ.ಬಿ.ಆರ್. ಹಿರೇಮಠ ಅವರಿಗೆ ‘ಸರ್ವೋತ್ತಮ ಆಡಳಿತ ರತ್ನ’ ಪ್ರಶಸ್ತಿ ಹಾಗೂ ಸಾಹಿತಿ ಡಾ. ಗುಣವಂತ ಮಂಜು ಅವರಿಗೆ ‘ಸರ್ವೋತ್ತಮ ಸಾಂಸ್ಕೃತಿಕ ರತ್ನ’ ಪ್ರಶಸ್ತಿ, ಶೈಲಾ ಅವರಿಗೆ ‘ಆಡಳಿತ ರತ್ನ’ ಪ್ರಶಸ್ತಿ, ಡಾ.ಪಿ. ಜಯಚಂದ್ರ ರಾಜು ಅವರಿಗೆ ‘ವಿದ್ಯಾರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಗೌತಮ ರಾಜು, ಅನಿತಾ ಉಮಾ ಶಂಕರ್ ರಾಜು, ಸೋನಿಯಾ ರಾಜು, ಡಾ. ಮಹೇಶ್, ಎಂ. ಅಭಿಷೇಕ್, ಪಿ.ಹರೀಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net