ಕುಸ್ತಿ ಪಂದ್ಯಾವಳಿಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

Training for Mechanical Engineering Professors
ಢವಳಗಿ ಗ್ರಾಮದ ಮಡಿಕೇಶ್ವರ ಬಸನಗೌಡ ಪಾಟೀಲ ಪ್ರೌಢಶಾಲೆ ವಿದ್ಯಾರ್ಥಿ ಸಾಜನ್​ ಪಿಂಜಾರ್​, ಶರೀಪ್​ ಪಿಂಜಾರ್​ ಪ್ರಶಸ್ತಿ ಪತ್ರ ಪ್ರದರ್ಶಿಸಿದರು. ಸಲಾಲುದ್ದೀನ್​ ಮಾಳಗಿ, ಪ್ರಕಾಶ ಐರೋಡಗಿ, ಸಿ.ಎಸ್​.ವಾಲಿಕಾರ, ಎಚ್​.ಎಂ.ಹದಗಲ್​, ಶಿವಲಿಂಗಪ್ಪ ಓಂಕಾರಿ ಇತರರಿದ್ದರು.
Published on

ಢವಳಗಿ: ಉಪನಿರ್ದೇಶಕರ ಕಚೇರಿ ಮತ್ತು ಶಾಲಾ ಶಿಣ ಇಲಾಖೆ ವಿಜಯಪುರ ಸಂಯುಕ್ತ ಆಶ್ರಯದಲ್ಲಿ ತಿಡಗುಂದಿಯ ಮಾನಸ ಗಂಗೋತ್ರಿ ವಿದ್ಯಾಸಂಸ್ಥೆಯಲ್ಲಿ ಗುರುವಾರ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ 2024&25ನೇ ಸಾಲಿನ ಜಿಲ್ಲಾಮಟ್ಟದ ಕ್ರೀಡಾಕೂಟ ನಡೆಯಿತು.

14 ರಿಂದ 17 ವರ್ಷದ ಬಾಲಕ ಮತ್ತು ಬಾಲಕಿಯರ ಕುಸ್ತಿ ಪಂದ್ಯಾವಳಿಯಲ್ಲಿ ಮುದ್ದೇಬಿಹಾಳ ತಾಲೂಕಿನ ಢವಳಗಿ ಗ್ರಾಮದ ಮಡಿಕೇಶ್ವರ ಬಸನಗೌಡ ಪಾಟೀಲ ಪ್ರೌಢಶಾಲೆಯ ವಿದ್ಯಾರ್ಥಿ ಸಾಜನ್​ ಅಲ್ಲಿಸಾಬ್​ ಪಿಂಜಾರ್​ 38 ಕೆಜಿ, 14 ವರ್ಷದ ವಿಭಾಗದಲ್ಲಿ ಪ್ರಥಮ ಸ್ಥಾನ ಹಾಗೂ ಶರೀಪ್​ ಅಲ್ಲಿಸಾಬ್​ ಪಿಂಜಾರ್​ 65 ಕೆಜಿ, 17 ವರ್ಷದ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಶಾಲೆಯ ದೈಹಿಕ ಶಿಕ್ಷಣ ಶಿಕ ಎಸ್​.ಆರ್​.ಸುಲ್ಪಿ ತಿಳಿಸಿದ್ದಾರೆ.

ಕುಸ್ತಿ ತರಬೇತುದಾರ ಸಲಾಲುದ್ದೀನ್​ ಮಾಳಗಿ, ಪ್ರಕಾಶ ಐರೋಡಗಿ, ಸಿ.ಎಸ್​.ವಾಲಿಕಾರ, ಎಚ್​.ಎಂ.ಹದಗಲ್​, ಶಿವಲಿಂಗಪ್ಪ ಓಂಕಾರಿ, ಅರ್ಜುನ ೂರ್ಪಡೆ, ಅಲ್ಲಿಸಾಬ್​ ಪಿಂಜಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net